ಮುಂಬೈ:ನಮ್ಮ ಭಾರತದ ಕಾಡುಗಳು ವೈವಿಧ್ಯಮಯ ಅದ್ಭುತಗಳಿಂದ ತುಂಬಿವೆ. ನಮ್ಮ ಅರಣ್ಯ ಪ್ರದೇಶಗಳಲ್ಲಿ ಆಶ್ಚರ್ಯಗಳಿಗೇನೂ ಕೊರತೆಯಿಲ್ಲ, ಏಕೆಂದರೆ ಭಾರತವು ಸಸ್ಯ ಮತ್ತು ಪ್ರಾಣಿಗಳ ಶ್ರೇಷ್ಠ ನೆಲೆಯಾಗಿದೆ. ಹೀಗಾಗಿಯೇ ಆಗಾಗ ಪ್ರಾಣಿ-ಪಕ್ಷಿಗಳ ಅದ್ಭುತ ಫೋಟೋ-ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿರುತ್ತವೆ. ಅದೇ ರೀತಿಯಲ್ಲಿ ಒಂದೇ ಫೋಟೋದಲ್ಲಿ ಮೂರು ನಾಗರಹಾವುಗಳ ಸರೆಯಾಗಿರುವ ಅದ್ಭುತ ಫೋಟೋ ಇದೀಗ ಜಾಲತಾಣದಲ್ಲಿ ವೈರಲ್​ ಆಗಿದೆ.
ನಿನ್ನೆ ಇಂಡಿಯನ್ ವೈಲ್ಡ್ ಲೈಫ್ ಹೆಸರಿನ ಫೇಸ್​ಬುಕ್ ಗ್ರೂಪ್​ನಲ್ಲಿ ನಾಗರಹಾವುಗಳ ಫೋಟೋಗಳು ಮೊದಲು ಕಾಣಿಸಿಕೊಂಡಿವೆ. ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟ ನಂತರ ಅವುಗಳ ಫೋಟೋವನ್ನು ಕ್ಲಿಕ್ಕಿಸಲಾಗಿದೆ ಎಂದು ವರದಿಯಾಗಿದೆ. ರಾಜೇಂದ್ರ ಸೆಮಾಲ್ಕರ್ ಎಂಬ ಫೇಸ್​ಬುಕ್​ ಬಳಕೆದಾರರು ಅಮರಾವತಿ ಜಿಲ್ಲೆಯ ಹರಿಸಾಲ್ ಅರಣ್ಯದಲ್ಲಿ ಮರದ ಕಾಂಡದ ಸುತ್ತಲೂ ಮೂರು ನಾಗರಹಾವುಗಳು ಸುತ್ತಿಕೊಂಡಿರುವ ಫೋಟೋಗಳ ಸರಣಿಯನ್ನು ಪೋಸ್ಟ್ ಮಾಡಿದ್ದಾರೆ. ಹರಿಸಲ್ ಕಾಡಿನ ಮ್ಯಾಜಿಕಲ್ ಮೆಲ್ಘಾಟ್​ನಲ್ಲಿ 3 ನಾಗರಹಾವುಗಳನ್ನು ಗುರುತಿಸಲಾಗಿದೆ ಎಂದು ಸೆಮಾಲ್ಕರ್ ಬರೆದುಕೊಂಡಿದ್ದು, ಈ ಪೋಸ್ಟ್ ಅನ್ನು 4,700ಕ್ಕೂ ಹೆಚ್ಚು ಬಳಕೆದಾರರು ಲೈಕ್​ ಮಾಡಿದ್ದಾರೆ.
ಐಎಫ್​ಎಸ್​ ಅಧಿಕಾರಿ ಸುಸಾಂತ್​ ನಂದಾ ಕೂಡ ಕೋಬ್ರಾ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಫೋಟೋ ಕೃಪೆಯನ್ನು ಸೆಮಾಲ್ಕರ್​ ಅವರಿಗೆ ನೀಡಿದ್ದಾರೆ. ಒಂದೇ ಸಮಯದಲ್ಲಿ ಮೂರು ಕೋಬ್ರಾಗಳು ಆಶೀರ್ವದಿಸಿದಾಗ ಎಂದು ಫೋಟೋಗೆ ಸುಸಾಂತ್​ ಅವರು ಅಡಿಬರಹ ಬರೆದುಕೊಂಡಿದ್ದಾರೆ.
Blessings…When three cobras bless you at the same time.🎬:Rajendra Semalkar.pic.twitter.com/EZCQTumTwT
— Susanta Nanda (@susantananda3)November 16, 2021

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೋಬ್ರಾಗಳ ಫೋಟೋ ವೈರಲ್​ ಆಗಿದ್ದು, ನೆಟ್ಟಿಗರು ಹುಬ್ಬೇರಿಸುವ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ದೃಶ್ಯ ಜೀವಮಾನದಲ್ಲಿ ಒಮ್ಮೆ ನೋಡಲು ಸಿಗುವಂತಹದ್ದು ಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.(ಏಜೆನ್ಸೀಸ್​)
Following forest officers on Twitter gives us unique opportunity to access or view pictures and places that common man can hardly travel in his life time. Thanks for sharing such pictures
— pandurangavittal.vn (@vittal_vn)November 16, 2021

ಅಪ್ಪು ಸಮಾಧಿಯ ಮುಂದೆ ಜಮೀರ್ ಪುತ್ರ ಝೈದಾ ಖಾನ್​ ಅಭಿನಯದ “ಬನಾರಸ್” ಚಿತ್ರದ ಫಸ್ಟ್ ಲುಕ್ ರಿಲೀಸ್​

ರಂಗೇರಿದ ರಾಜ್ಯ ಒಕ್ಕಲಿಗರ ಸಂಘ ಚುನಾವಣೆ; ನಿರ್ದೇಶಕರ ಸ್ಥಾನಕ್ಕೆ ನಿರ್ಮಾಪಕ ಉಮಾಪತಿ ಸ್ಪರ್ಧೆ…

ದಾಖಲೆ ಯಶಸ್ಸಿನೊಂದಿಗೆ ವಿವಾದಕ್ಕೆ ಸಿಲುಕಿದ ಜೈಭೀಮ್​! ನಟ ಸೂರ್ಯ ಮನೆಗೆ ಪೊಲೀಸ್ ಭದ್ರತೆ

ಪ್ರೇಯಸಿಯ ಬೆತ್ತಲೆ ಫೋಟೋವನ್ನ ವಾಟ್ಸ್​ಆ್ಯಪ್​ ಸ್ಟೇಟಸ್​ಗೆ ಹಾಕಿದ ಪ್ರಿಯಕರ! ಬೆಚ್ಚಿಬೀಳಿಸುತ್ತೆ ಇವನ ಸಂಚು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + five =
Remember me
