ಪುಣೆ: ಮೋಟರ್​ ಸೈಕಲ್ ಜತೆಗೆ ವಾಹನ ಸವಾರನನ್ನು ಟೋಯಿಂಗ್​ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಟೋಯಿಂಗ್​ ಸಿಬ್ಬಂದಿ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಹಿರಿಯ ಅಧಿಕಾರಿಯೊಬ್ಬರು ನಾನ್​ ಪಾರ್ಕಿಂಗ್​​ ವಿಭಾಗದಲ್ಲಿ ನಿಲ್ಲಿಸಿದ್ದ ವಾಹನವನ್ನು ಟೋಯಿಂಗ್​ ಮಾಡಲು ಆರಂಭಿಸಿದಾಗ ಆತನೇ ಓಡಿಬಂದು ದ್ವಿಚಕ್ರ ವಾಹನದ ಮೇಲೇರಿದ ಎಂದು ತಿಳಿಸಿದ್ದಾರೆ. ​
ಈ ಘಟನೆ ಮಹಾರಾಷ್ಟ್ರದ ಪುಣೆಯ ನಾನಾಪೇಟ್​ ಏರಿಯಾದಲ್ಲಿ ಗುರುವಾರ ನಡೆದಿದೆ. ಸಮರ್ಥ್​ ಟ್ರಾಫಿಕ್​ ಶಾಖೆಯ ಪೊಲೀಸ್​ ಮ್ಯಾನ್​ಗಳು ಮತ್ತು ಗುತ್ತಿಗೆ ನೌಕರರು ಟೋಯಿಂಗ್​ ವ್ಯಾನ್​ನಿಂದ ನಾನ್​ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ ವಾಹನಗಳು ತೆರವು ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ಸಂಚಾರ ಪೊಲೀಸ್​ ವಿಭಾಗದ ಡಿಸಿಪಿ ರಾಹುಲ್​ ಶ್ರೀರಾಮೆ ಹೇಳಿದ್ದಾರೆ.
ದ್ವಿಚಕ್ರ ವಾಹನವನ್ನು ಬಹುತೇಕ ಮೇಲೆತ್ತಲಾಗಿತ್ತು. ಅಷ್ಟರಲ್ಲಿ ಬೈಕ್​ ಸವಾರ ಬಂದು ಬೈಕ್​ ಮೇಲೇರಿದ. ಕೆಳಗೆ ಇಳಿಯುವಂತೆ ಪೊಲೀಸ್​ ಸಿಬ್ಬಂದಿ ಸಾಕಷ್ಟು ಮನವಿ ಮಾಡಿಕೊಂಡು. ಆದರೆ, ಆತ ಕೆಳಗಿಳಿಯಲಿಲ್ಲ. ಆತನ ಸಹ ಬೈಕ್​ ಕೆಳಗಿಳಿಸುವಂತೆ ಕೇಳಿಕೊಂಡ ಆದರೆ, ನಿಯಮ ಉಲ್ಲಂಘನೆ ಆಗಿರುವುದು ಸ್ಪಷ್ಟವಾದ್ದರಿಂದ ಸಿಬ್ಬಂದಿ ನಿರಾಕರಿಸಿದರು. ಬಳಿಕ ಬೈಕ್​ ಸವಾರನ ಸಮೇತ ವಾಹನವನ್ನು ವ್ಯಾನ್​ ಒಳಗಡೆ ಇಳಿಸಲಾಯಿತು ಎಂದು ಶ್ರೀರಾಮೆ ತಿಳಿಸಿದರು.
ಕೊನೆಗೆ ಸವಾರ ಕ್ಷಮೆಯಾಚಿಸಿ, ದಂಡವನ್ನು ಪಾವತಿಸಿದರು. ಇದೇ ವೇಳೆ ಬೈಕ್​ ಸವಾರ ಸಮೇತ ಟೋಯಿಂಗ್​ ಮಾಡಿದ ಗುತ್ತಿಗೆ ಸಿಬ್ಬಂದಿ ಮತ್ತು ತಂಡದ ಭಾಗವಾಗಿದ್ದ ಟ್ರಾಫಿಕ್ ಪೋಲೀಸ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದರು.(ಏಜೆನ್ಸೀಸ್​)
ವೆಹಿಕಲ್​ ಟೋಯಿಂಗ್​ ವಿಚಾರದಲ್ಲಿ ಗಲಾಟೆ: ಟೋಯಿಂಗ್ ಯುವಕರನ್ನು ಅಟ್ಟಾಡಿಸಿಕೊಂಡು ಥಳಿಸಿದ ಸಾರ್ವಜನಿಕರು

ತಾಲಿಬಾನ್​ ವಿರುದ್ಧ ತಿರುಗಿ ಬಿದ್ದ ಆಫ್ಘಾನ್ನರು: ಉಗ್ರರನ್ನು ಕೊಂದು 3 ಜಿಲ್ಲೆಗಳನ್ನು ಮರು ವಶಪಡಿಸಿಕೊಂಡ ಹೋರಾಟಗಾರರು

31ರ ಬಳಿಕ ತಾಲಿಬಾನ್ ಸರ್ಕಾರ: ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘನ್ ತೊರೆದ ಬಳಿಕ ನಿರ್ಧಾರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:12 − three =
Remember me
