ಮುಂಬೈ:ತಾರಾ ದಂಪತಿಯಾದ ಸ್ಟಾರ್​ ಕ್ರಿಕೆಟಿಗ ವಿರಾಟ್​ ಕೊಹ್ಲಿ ಮತ್ತು ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಮುಂಬೈನ ಅಲಿಬಾಗ್ ಏರಿಯಾದಲ್ಲಿ 8 ಎಕರೆಯ ಫಾರ್ಮ್​ ಹೌಸ್​ ಅನ್ನು ಕೊಂಡುಕೊಂಡಿದ್ದಾರೆ.
ಅಲಿಬಾಗ್​ ಬಳಿಯಿರುವ ಜಿರಾದ್​ ಗ್ರಾಮದಲ್ಲಿ ಈ ಎಂಟು ಎಕರೆ ಫಾರ್ಮ್​ ಹೌಸ್​ ಕಂಡುಬರುತ್ತದೆ. ವಿರುಷ್ಕಾ ದಂಪತಿ ಬರೋಬ್ಬರಿ 19.24 ಕೋಟಿ ರೂಪಾಯಿ ಕೊಟ್ಟು ಫಾರ್ಮ್​ ಹೌಸ್​ ಖರೀದಿ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸರ್ಕಾರದ ಖಜಾನೆ ದಂಪತಿ ಈಗಾಗಲೇ 1.15 ಕೋಟಿ ರೂಪಾಯಿ ಡೆಪಾಸಿಟ್​ ಮಾಡಿದ್ದು, ವಿರಾಟ್​ ಸಹೋದರ ವಿಕಾಸ್​ ಕೊಹ್ಲಿ, ಗಣೇಶ ಚತುರ್ಥಿಗು ಮುನ್ನವೇ ಹಣವನ್ನು ವರ್ಗಾವಣೆ ಮಾಡಿದ್ದಾರೆ.
ಸದ್ಯ ಕೊಹ್ಲಿ ದುಬೈನಲ್ಲಿ ಏಷ್ಯಾ ಕಪ್​ನಲ್ಲಿ ಭಾಗವಹಿಸಿದ್ದಾರೆ. ಹಣ ವರ್ಗಾವಣೆಯನ್ನು ಪ್ರಖ್ಯಾತ ರಿಯಲ್​ ಎಸ್ಟೇಟ್​ ಕಂಪನಿ ಸಮಿರಾ ಹ್ಯಾಬಿಟಟ್ಸ್​ ಮೂಲಕ ಮಾಡಿರುವುದಾಗಿ ತಿಳಿದುಬಂದಿದೆ. ಆರು ತಿಂಗಳ ಹಿಂದೆಯೇ ವಿರುಷ್ಕಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಕ್ರಿಕೆಟ್​ನಲ್ಲಿ ಬಿಜಿಯಾಗಿದ್ದರಿಂದ ಸ್ವತಃ ಅವರು ಬಂದು ವ್ಯವಹರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸಹೋದರ ವಿಕಾಸ್​ ಕೊಹ್ಲಿ ಎಲ್ಲ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಿದ್ದಾರೆ.
ಉದ್ಯಮಿಗಳ ಜೊತೆಗೆ, ಚಲನಚಿತ್ರ ನಟರು ಮತ್ತು ಕ್ರಿಕೆಟಿಗರು ಅಲಿಬಾಗ್‌ನ ರಮಣೀಯ ಪರಿಸರದಲ್ಲಿ ಭೂಮಿಯನ್ನು ಖರೀದಿಸುವುದು ಸಾಮಾನ್ಯವಾಗಿದ್ದು, ಅಲ್ಲಿ ಅವರು ಹಳ್ಳಿಗಾಡಿನ ಮನೆಗಳನ್ನು ನಿರ್ಮಿಸುತ್ತಿದ್ದಾರೆ.(ಏಜೆನ್ಸೀಸ್​)
ಯಾರಾಗಲಿದ್ದಾರೆ ಬಿಗ್​ಬಾಸ್​ ಒಟಿಟಿ ಸೀಸನ್​ ವಿನ್ನರ್? ನೆಟ್ಟಿಗರ ಈ ಊಹೆ ನಿಜವಾಗುತ್ತಾ?

ಅಂಬೇಡ್ಕರ್ ಭಾವಚಿತ್ರದ ಮುಂದೆ ಮದ್ವೆಯಾದ ಪ್ರೇಮಿಗಳು

ಜನಾಕ್ರೋಶಕ್ಕೆ ಹೆದರಿ ದೇಶ ಬಿಟ್ಟು ಪರಾರಿಯಾಗಿದ್ದ ಲಂಕಾದ ಮಾಜಿ ಅಧ್ಯಕ್ಷ ತವರಿಗೆ ವಾಪಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + fourteen =
Remember me
