ವಿಶಾಖಪಟ್ಟಣಂ:ವೈಜಾಗ್​ ನಗರದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿರುವ ಮೂರು ವರ್ಷದ ಮಗುವಿನ ಬರ್ಬರ ಹತ್ಯೆ ಪ್ರಕರಣವನ್ನು ವಿಶಾಖಪಟ್ಟಣಂ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ಮಗುವಿನ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಜಗದೀಶ್​​ ಎಂಬಾತನೇ ಮಗುವನ್ನು ಕೊಲೆ ಮಾಡಿದ್ದಾನೆಂದು ತಿಳಿಸಿದ್ದಾರೆ.
ವಿವರಣೆಗೆ ಬರುವುದಾದರೆ, ಐದು ವರ್ಷಗಳ ಹಿಂದೆ ಮದುವೆಯಾದ ರಮೇಶ್​ ಮತ್ತು ವರಲಕ್ಷ್ಮಿಗೆ ವೈವಾಹಿಕ ಜೀವನಕ್ಕೆ ಸಾಕ್ಷಿಯಾಗಿ ಸಿಂಧು ಹೆಸರಿನ 3 ವರ್ಷದ ಹೆಣ್ಣು ಮಗುವಿತ್ತು. ರಮೇಶ್​ ಮೇಸನ್​ ಆಗಿ ಕೆಲಸ ಮಾಡುತ್ತಿದ್ದ. ವರಲಕ್ಷ್ಮೀ ಕೋಸ್ಟಲ್​ ಫುಡ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇದೇ ವೇಳೆ ವರಲಕ್ಷ್ಮೀಗೆ ಜಗದೀಶ್​ ರೆಡ್ಡಿ ಎಂಬಾತನ ಪರಿಚಯವಾಗಿ, ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು.
ಜಗದೀಶ್​ಗೂ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದವು. ಮಾರ್ಚ್​ 14ರಂದು ವರಲಕ್ಷ್ಮೀ ಮನೆ ಬಿಟ್ಟು ಜಗದೀಶ್​ನೊಂದಿಗೆ ತೆರಳಿ ಕೆಲವು ದಿನಗಳ ನಂತರ ಹಿಂದಿರುಗಿದ್ದರು. ಪತ್ನಿಯ ಕಳ್ಳಾಟ ರಮೇಶ್​ಗೂ ತಿಳಿದಿತ್ತು. ಈ ಬಗ್ಗೆ ಆಕೆ ಎಚ್ಚರಿಕೆಯನ್ನು ಸಹ ನೀಡಿದ್ದನು. ಆದರೂ, ಇಬ್ಬರ ಸರಸ ಸಲ್ಲಾಪ ರಹಸ್ಯವಾಗಿಯೇ ಮುಂದುವರಿದಿತ್ತು. ಹೀಗಿರುವಾಗ ಮೇ 14ರಂದು ವರಲಕ್ಷ್ಮೀ ಮತ್ತು ಜಗದೀಶ್​ ಮಗಳು ಸಿಂಧು ಕರೆದುಕೊಂಡು ಹೋದರು.
ನಾಲ್ಕು ದಿನಗಳ ಬಳಿಕ ಪತಿಗೆ ಫೋನಾಯಿಸಿದ ವರಲಕ್ಷ್ಮೀ ಮಗಳು ಮೃತಪಟ್ಟಿರುವುದಾಗಿ ಹೇಳಿದಳು. ಬಳಿಕ ಅನುಮಾನ ಬಂದ ರಮೇಶ್​ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದ. ಬಳಿಕ ಪೊಲೀಸರು ವರಲಕ್ಷ್ಮೀ ಮತ್ತು ಜಗದೀಶ್​ನನ್ನು ಬಂಧಿಸಿದರು. ಮೂರು ದಿನಗಳ ಹಿಂದೆಯೇ ಮಗುವನ್ನು ಕೊಂದು ಸಮಾಧಿ ಮಾಡಿರುವುದಾಗಿ ಪೊಲೀಸರಿಗೆ ತಿಳಿಯಿತು. ಮಗುವಿನ ಸಮಾಧಿ ಸ್ಥಳಕ್ಕೆ ತೆರಳಿ ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಇನ್ನು ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿರುವ ಜಗದೀಶ್​, ತನ್ನ ಅನೈತಿಕ ಸಂಬಂಧಕ್ಕೆ ಮಗು ಅಡ್ಡವಾಗಿದ್ದಕ್ಕೆ ಕೋಪಗೊಂಡು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಮಗುವಿಗೆ ರಾಕ್ಷಸನಂತೆ ಚೆನ್ನಾಗಿ ಥಳಿಸಿ ಕೊಂಡಿದ್ದಾನೆ. ತನ್ನ ಮಗು ಮೃತಪಟ್ಟರು ವರಲಕ್ಷ್ಮೀ ಶಾಂತವಾಗಿರುವುದು ಚರ್ಚೆಗೆ ಕಾರಣವಾಗಿದ್ದು, ಕೊಲೆಗೆ ವರಲಕ್ಷ್ಮಿಯು ಸಹಕಾರ ನೀಡಿರಬಹುದು ಎಂಬ ಸಂಶಯ ವ್ಯಕ್ತವಾಗಿದ್ದು, ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​)
ಆನ್​ಲೈನ್​ನಲ್ಲಿ ಫ್ರೈಡ್ ಚಿಕನ್ ಆರ್ಡರ್​ ಮಾಡಿದವಳಿಗೆ ಕಾದಿತ್ತು ಶಾಕ್​: ಬಾಕ್ಸ್​ ತೆರೆದು ಬೆಚ್ಚಿಬಿದ್ದ ಮಹಿಳೆ!

ಅಂಗಡಿಯಿಂದ ಬಂದ ತಾಯಿ ಮಗಳ ಕೋಣೆ ತೆರೆಯುತ್ತಿದ್ದಂತೆ ಕಾದಿತ್ತು ಶಾಕ್​: ಬೆಚ್ಚಿಬೀಳಿಸುವ ಘಟನೆ ಇದು!

ಯಾರಿಗೂ ಹೇಳದೆ ಮಕ್ಕಳೊಂದಿಗೆ ಮನೆಯಿಂದ ಹೊರಟ ದಂಪತಿಯ ಬದುಕು ದುರಂತ ಅಂತ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + nineteen =
Remember me
