ತಿರುವನಂತಪುರಂ:ಪತ್ನಿ ವಿಸ್ಮಯ ವಿ ನಾಯರ್​ ಸಾವಿನ ಪ್ರಕರಣದಲ್ಲಿ ಬಂಧನವಾಗಿರುವ ಸಹಾಯಕ ಮೋಟಾರು ವಾಹನ ನಿರೀಕ್ಷಕರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ಕೇರಳ ಸಾರಿಗೆ ಸಚಿವ ಆಂಟೋನಿ ರಾಜು ಈ ಬಗ್ಗೆ ಮಾಹಿತಿ ನೀಡಿದ್ದು, ಕೊಲ್ಲಂ ಮೋಟಾರು ವಾಹನ ಜಾರಿ ಇಲಾಖೆಯಿಂದ ಸಹಾಯಕ ಇನ್ಸ್​ಪೆಕ್ಟರ್ ಕಿರಣ್​ಕುಮಾರ್​ನನ್ನು​ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಿರಣ್​ ಪತ್ನಿ ವಿಸ್ಮಯ ನಿಲಮೇಲ್​ ಮೂಲದವರು. ಸಾಸ್ಥಮಕೋಟದಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವರದಕ್ಷಿಣೆಗಾಗಿ ಕಿರಣ್​ ಮೃಗೀಯವಾಗಿ ಹಿಂಸೆ ನೀಡಿದ್ದನು ಎಂದು ವಿಸ್ಮಯ ಪಾಲಕರು ಆರೋಪಿಸಿದ್ದಾರೆ. ಅಲ್ಲದೆ, ಕಿರಣ್​ ಅಮಾನವೀಯವಾಗಿ ಥಳಿಸಿ, ಗಾಯಗೊಳಿಸಿರುವ ತನ್ನ ಫೋಟೋಗಳನ್ನು ವಿಸ್ಮಯ ತವರು ಮನೆಗೆ ವಾಟ್ಸ್​ಆ್ಯಪ್​ ಮಾಡಿದ್ದಳು.
ಇನ್ನು ಘಟನೆ ನಡೆದ ಬೆನ್ನಲ್ಲೇ ಕಿರಣ್​ ಕುಮಾರ್​ ಪರಾರಿಯಾಗಿದ್ದ. ಆದರೆ, ಸೋಮವಾರ ರಾತ್ರಿ ಕಿರಣ್​ರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅದೇ ದಿನ ರಾತ್ರಿ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪತ್ನಿಗೆ ಚಿತ್ರಹಿಂಸೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ವರದಕ್ಷಿಣೆಗೆ ವೈದ್ಯೆ ಬಲಿ! ಸಾವಿಗೂ ಮುನ್ನ ಸೋದರನ ಬಳಿ ಆಕೆ ಬಿಚ್ಚಿಟ್ಟ ನೋವಿನ ಸಂದೇಶ ಇಲ್ಲಿದೆ

ಶೌಚಗೃಹಕ್ಕೆ ಹೋದ ಇನ್ಸ್​ಪೆಕ್ಟರ್​ ಪತ್ನಿ ತುಂಬಾ ಹೊತ್ತು ಬರಲೇ ಇಲ್ಲ: ಬಾಗಿಲು ತೆರೆದ ಪತಿಗೆ ಕಾದಿತ್ತು ಶಾಕ್​!

ಆತ್ಮಹತ್ಯೆಗೆ ಶರಣಾದ ಚಿನ್ನದ ಮನುಷ್ಯ: ಸುಖದ ಸುಪತ್ತಿಗೆಯಲ್ಲಿದ್ದವ ಸಾವಿನ ಹಾದಿ ಹಿಡಿದಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 19 =
Remember me
