ವಿಜಯವಾಡ:ಆಂಧ್ರ ಪ್ರದೇಶದ ವಿಶಾಖಪಟ್ಟಣ ಮೂಲದ ಯುವಕನೊಬ್ಬ ಟೆಕ್​ ದೈತ್ಯ ಗೂಗಲ್ ಕಂಪನಿಯಲ್ಲಿ ಸಾಫ್ಟ್​ವೇರ್​ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಗೂಗಲ್​ ಇಂಡಿಯಾದ ಬೆಂಗಳೂರು ಕಂಪನಿಯಲ್ಲಿ ಕೆಲಸ ಪಡೆದುಕೊಂಡಿದ್ದಾರೆ.
ಯುವಕನ ಹೆಸರು ಜಯಂತಿ ವಿಷ್ಣು ಯಶ್​. ಈತ ವಾರ್ಷಿಕ 8.50 ಲಕ್ಷ ರೂ. ಸಂಬಳದೊಂದಿಗೆ ಬಹುರಾಷ್ಟ್ರೀಯ ಆಕ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಗೂಗಲ್​ನಲ್ಲಿ ವಾರ್ಷಿಕ 47.50 ಲಕ್ಷ ರೂ. ಸಂಬಳದ ಉದ್ಯೋಗ ಗಿಟ್ಟಿಸಿದ್ದಾರೆ. ಒಂದೇ ಬಾರಿಗೆ ಬರೋಬ್ಬರಿ 40 ಲಕ್ಷ ರೂ. ಹೆಚ್ಚಿನ ಸಂಬಳದ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.
ಯಶ್, ಹಿಮಾಚಲ ಪ್ರದೇಶದ ಹಮೀರ್‌ಪುರದ ಎನ್‌ಐಟಿಯ ಇಸಿಇಯಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿದರು. ಕೋರ್ಸ್ ಮುಗಿದ ನಂತರ ಅವರು ಮೊದಲ ಬಾರಿಗೆ ಆಕ್ಸೆಂಚರ್‌ನಲ್ಲಿ ಸ್ಥಾನ ಪಡೆದರು. ಇತ್ತೀಚೆಗಷ್ಟೇ ಗೂಗಲ್​ನಲ್ಲಿ ನಡೆದ ಸಂದರ್ಶನಕ್ಕೆ ಹಾಜರಾಗಿ ಲೆವೆಲ್-4 ಸೀನಿಯರ್ ಇಂಜಿನಿಯರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಮಾರ್ಚ್ 7 ರಂದು ಬೆಂಗಳೂರಿನ ಗೂಗಲ್​ ಕಂಪನಿಯಲ್ಲಿ ಯಶ್ ಕೆಲಸ ಶುರು ಮಾಡಲಿದ್ದಾರೆ.
ಯಶ್​ ಅವರ ತಂದೆ ಸತ್ಯನಾರಾಯಣ ಮೂರ್ತಿ ನಿವೃತ್ತ ಉದ್ಯೋಗಿ ಮತ್ತು ಅವರ ತಾಯಿ ವೇದವಲ್ಲಿ ಗೃಹಿಣಿ ಮತ್ತು ಅವರು ವಿಶಾಖಪಟ್ಟಣಂ ಸಮೀಪದ ನರಸೀಪಟ್ಟಣಂ ಪಟ್ಟಣದ ವೇಲಮಾ ವೀಧಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಯಶ್‌ಗೆ ಗೂಗಲ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಅವರ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)
ಸ್ಟ್ರಾಬೆರ್ರಿ ಶ್ರುತಿ: ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾ..

ಬಾಯಿ ಕ್ಯಾನ್ಸರ್​ಗೆ ಹೊಸ ಮದ್ದು!; ರಾಜ್ಯದ ಸಂಶೋಧಕರಿಂದ ಜೀವರಕ್ಷಕ ವಂಶವಾಹಿ ಶೋಧ

ರೈತರಿಗೆ ಹದ್ದುಬಸ್ತು ಶುಲ್ಕದ ಹೊರೆ; ಪೋಡಿ ಫೀಸ್ ಹೆಚ್ಚಳ ಬೆನ್ನಲ್ಲೇ ಫೆ.1ರಿಂದ ಹೊಸ ನಿಯಮ ಜಾರಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen − 2 =
Remember me
