ವಿಶಾಖಪಟ್ಟಣಂ:ಭಾರೀ ಮಳೆಯಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಯಲ್ಲಿ ಒಂದು ದಡದಿಂದ ಮತ್ತೊಂದು ದಡಕ್ಕೆ ಸಹೋದರ ನೆರವಿನಿಂದ ಈಜಿ ಬಂದು ಯುವತಿಯೊಬ್ಬಳು ಪರೀಕ್ಷೆ ಬರೆದಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಮರಿವಲಾಸಾ ಗ್ರಾಮದ ವಿದ್ಯಾರ್ಥಿನಿ ಚಂಪಾವತಿ ನದಿಯನ್ನು ಸಹೋದರರ ನೆರವಿನಿಂದ ದಾಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
A 21-year-old crosses swelling#Champavathiriver with help of her brothers in#Marrivalasavillage of#Gajapatinagarammandal,#Vizianagaramdistrict to write exam@NewIndianXpresspic.twitter.com/GvIyAhYz6J
— TNIE Andhra Pradesh (@xpressandhra)September 10, 2022

ಕಳೆದ ಕೆಲವು ದಿನಗಳಿಂದ ಗಜಪತಿನಗರಂ ಮಂಡಲದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚಂಪಾವತಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಮರಿವಲಸಾ ಮತ್ತು ಇತರೆ ಗ್ರಾಮದ ಜನರು ನದಿಯನ್ನು ದಾಟಿ, ತಮ್ಮ ಗುರಿಯನ್ನು ತಲುಪಲು ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ.
ಮರಿವಲಸಾ ಗ್ರಾಮದ 21 ವರ್ಷದ ತಡ್ಡಿ ಕಲಾವತಿ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ, ನದಿ ತುಂಬಿ ಹರಿಯುತ್ತಿರುವುದರಿಂದ ನದಿ ದಾಟುವುದು ಸವಾಲಿನ ಕೆಲಸವಾಗಿತ್ತು. ಈ ವೇಳೆ ಎದೆಗುಂದದ ಕಲಾವತಿ ತನ್ನಿಬ್ಬರು ಸಹೋದರರ ನೆರವು ಪಡೆದು ನದಿಯಲ್ಲಿ ಈಜಿ ದಡ ಸೇರಿ, ಪರೀಕ್ಷಾ ಕೇಂದ್ರಕ್ಕೆ ತೆರಳಿ, ಪರೀಕ್ಷೆ ಬರೆದು ಬಂದಿದ್ದಾರೆ. ಕಲಾವತಿ ನದಿ ದಾಟುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.(ಏಜೆನ್ಸೀಸ್​)
ನಟ ಪ್ರಭಾಸ್​ ದೊಡ್ಡಪ್ಪ, ಟಾಲಿವುಡ್​ ರೆಬೆಲ್​ ಸ್ಟಾರ್​ ಕೃಷ್ಣಂ ರಾಜು ವಿಧಿವಶ

ಹಬ್ಬಕ್ಕೆಂದು ಊರಿಗೆ ಬಂದಿದ್ದ ಅಮ್ಮ-ಮಗಳು ದುರಂತ ಸಾವು: ಕುಟುಂಬಸ್ಥರಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ಹಿಸ್ಸಾ ನಕಾಶೆ, ಪೋಡಿ ಇನ್ನು ಬಲುಸುಲಭ: ರೈತರಿಗಿನ್ನಿಲ್ಲ ಕಚೇರಿ ಅಲೆಯುವ ತಾಪತ್ರಯ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 17 =
Remember me
