ಪಲಕ್ಕಾಡ್​:ಕೇರಳದ ವಾಲಯರ್​ ಅಂತಾರಾಜ್ಯ ಚೆಕ್​ಪೋಸ್ಟ್​ ಬಳಿ ತರಕಾರಿ ಮತ್ತು ಹಣ್ಣಿನ ರೂಪದಲ್ಲಿ ಲಂಚ ಪಡೆಯುತ್ತಿದ್ದ ಮೋಟಾರು ವಾಹನ ಇಲಾಖೆಯ ಆರು ಅಧಿಕಾರಿಗಳನ್ನು ಅಮಾನತು ಮಾಡಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ.
ಕೇರಳದ ಆರ್​ಟಿಒ ಅಧಿಕಾರಿಗಳ ವಿನೂತನ ಲಂಚ ಪ್ರಕರಣ ಇದಾಗಿದೆ. ವಾಲಯರ್​ನ ಆರ್​ಟಿಒ ಚೆಕ್​ ಪೋಸ್ಟ್​ ಮೇಲೆ ಕೇರಳ ವಿಜಿಲೆನ್ಸ್​ ಅಧಿಕಾರಿಗಳು ದಾಳಿ ಮಾಡಿದಾಗ ಆರ್​ಟಿಒ ಅಧಿಕಾರಿಗಳು ತರಕಾರಿ ಮತ್ತು ಹಣ್ಣಿನ ರೂಪದಲ್ಲಿ ಲಂಚ ತೆಗೆದುಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಹಣದ ಬದಲಾಗಿ ಕುಂಬಳಕಾಯಿ ಮತ್ತು ಕಿತ್ತಳೆ ಹಣ್ಣು ಸೇರಿದಂತೆ ಇತರೆ ರೂಪದಲ್ಲಿ ಲಂಚ ಪಡೆಯುತ್ತಿದ್ದರು. ದಾಳಿಯ ವೇಳೆ 67 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿತ್ತು.
ಬರುತ್ತಿದ್ದ ಲಾರಿಗಳನ್ನು ತಡೆದು ಅದರಲ್ಲಿ ಇರುತ್ತಿದ್ದ ವಸ್ತುಗಳನ್ನು ಲಂಚವಾಗಿ ಪಡೆದುಕೊಂಡು ಆರ್​ಟಿಒ ಅಧಿಕಾರಿಗಳು ಹಂಚಿಕೊಳ್ಳುತ್ತಿದ್ದರು. ದಾಳಿಯ ವೇಳೆ ಸಹಾಯಕ ಮೋಟಾರು ವಾಹನ ಇನ್ಸ್​ಪೆಕ್ಟರ್​ ಅರಣ್ಯದೊಳಗೆ ತಪ್ಪಿಸಿಕೊಂಡಿದ್ದರು. ಅಲ್ಲದೆ, ಅರಣ್ಯದಲ್ಲಿ ಸಿಗುವ ಎಲೆಗಳಿಂದ ಲಂಚವನ್ನು ಮುಚ್ಚಿಟ್ಟಿರುವ ಸಂಗತಿಯು ತಿಳಿದುಬಂದಿದೆ. ಇದೀಗ ಈ ಪ್ರಕರಣರದಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳನ್ನು ಕೇರಳ ಸರ್ಕಾರ ಅಮಾನತು ಮಾಡಿದೆ.(ಏಜೆನ್ಸೀಸ್​)
ಹೆಣ್ಣು ಮಗು ಆಗುತ್ತದೆ ಎಂಬ ಭಯದಲ್ಲೇ ಹೆರಿಗೆ ಹಿಂದಿನ ದಿನ ಆತ್ಮಹತ್ಯೆಗೆ ಶರಣಾದ ಗರ್ಭಿಣಿ

https://www.vijayavani.net/a-pushpa2-rashmika-demanded-remuneration-cost-rs-3-crore/
VIDEO: ಮಂಡ್ಯದಲ್ಲೊಂದು ಅಮಾನವೀಯ ಘಟನೆ- ಎಲ್ಲರೆದುರು ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿ ಕೂಡಿಹಾಕಿ ಥಳಿಸಿದ ಶಿಕ್ಷಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 7 =
Remember me
