ರಾಯ್ಪುರ್​:ಲಾಕ್​ಡೌನ್​ ನಡುವೆ ಕೆಲ ಔಷಧಿಗಳನ್ನು ತರಲು ಮನೆಯಿಂದ ಹೊರಬಂದಿದ್ದ ಯುವಕನ ಮೊಬೈಲ್​ ಒಡೆದು ಹಾಕಿದಲ್ಲದೆ, ಕಪಾಳಕ್ಕೂ ಬಾರಿಸಿ, ಜಿಲ್ಲಾಧಿಕಾರಿ ಅಮಾನವೀಯ ವರ್ತಿಸಿದ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ.
ಇಷ್ಟೇ ಅಲ್ಲದೆ, ಸ್ಥಳದಲ್ಲಿದ್ದ ಪೊಲೀಸ್​ ಸಿಬ್ಬಂದಿಯನ್ನು ಕರೆದು ಥಳಿಸುವಂತೆ ಹೇಳಿ ಎಫ್​ಐಆರ್​ ದಾಖಲಿಸಲು ಆದೇಶಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಜಿಲ್ಲಾಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆ ಛತ್ತೀಸ್​ಗಢದ ಸುರಾಜ್​ಪುರ್​ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾಧಿಕಾರಿ ರಣ್ಬೀರ್​ ಶರ್ಮಾ ಯುವಕನ ಮೊಬೈಲ್​ ಪಡೆದು ರಸ್ತೆಯ ಮೇಲೆ ಜೋರಾಗಿ ಎಸೆದು ಒಡೆದು ಹಾಕುವುದು ವಿಡಿಯೋದಲ್ಲಿ ದಾಖಲಾಗಿದೆ.
ರಾಯ್ಪುರ್​: ಲಾಕ್​ಡೌನ್​ ನಡುವೆ ಕೆಲ ಔಷಧಿಗಳನ್ನು ತರಲು ಮನೆಯಿಂದ ಹೊರಬಂದಿದ್ದ ಯುವಕನ ಮೊಬೈಲ್​ ಒಡೆದು ಹಾಕಿದಲ್ಲದೆ, ಕಪಾಳಕ್ಕೂ ಬಾರಿಸಿ, ಜಿಲ್ಲಾಧಿಕಾರಿ ಅಮಾನವೀಯ ವರ್ತಿಸಿದ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ.#Chhattisgarh#Districtcollector#Youth#Mobile#Lockdown#Coronaviruspic.twitter.com/mPDplQcXHh
— Vijayavani (@VVani4U)May 23, 2021

ಲಾಕ್​ಡೌನ್​ನಲ್ಲಿ ನಾನೇಕೆ ಆಚೆ ಬಂದೆ ಎಂಬುದನ್ನು ಆ ಯುವಕ ಕೆಲವು ಪತ್ರಗಳನ್ನು ತೋರಿಸಿ ವಿವರಣೆ ನೀಡುವ ಪ್ರಯತ್ನ ಮಾಡಿದಾದರೂ ಕೇಳಿಸಿಕೊಳ್ಳುವ ವ್ಯವಧಾನವೂ ಇಲ್ಲದೆ ದಿಢೀರನೇ ಯುವಕನ ಕೆನ್ನೆಗೆ ಜಿಲ್ಲಾಧಿಕಾರಿ ಬಾರಿಸಿಯೇ ಬಿಟ್ಟರು.
ಇದಾದ ಬಳಿಕ ಕೆಲವು ಪೊಲೀಸ್​ ಸಿಬ್ಬಂದಿಗಳನ್ನು ಕರೆಯಿಸಿ ಥಳಿಸಲು ಹೇಳಿದರು. ಸಿಬ್ಬಂದಿ ಥಳಿಸುವಾಗ “ಸರಿಯಾಗಿ ಬಾರಿಸಿ” ಎಂದು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.
ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಂತಾರಾಜ್ಯ ಮಂಡಳಿ ಸಚಿವಾಲಯ, ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಸಂಜಿವ್​ ಗುಪ್ತ, ಜಿಲ್ಲಾಧಿಕಾರಿಗಳ ನಡೆಯು ಹೇಯ ಮತ್ತು ಐಎಎಸ್​ ಅಧಿಕಾರಿಯಾಗಲು ನಾಲಾಯಕ್​ ಎಂದು ಟೀಕಿಸಿದ್ದಾರೆ. ಈ ವಿಚಾರವನ್ನು ಛತ್ತೀಸ್​ಗಢದ ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತಂದಿದ್ದಾರೆ.
ಯುವಕನ ವಿರುದ್ಧ ಅತಿವೇಗದ ಚಾಲನೆ ಪ್ರಕರಣ ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ, ಆ ಯುವಕ ಅಪ್ರಾಪ್ತನಲ್ಲ. ಆತನಿಗೆ 23 ವರ್ಷ ವಯಸ್ಸಾಗಿದೆ. ಅತಿಯಾದ ವೇಗದಲ್ಲಿ ಬೈಕ್​ ಚಾಲನೆ ಮಾಡುತ್ತಿದ್ದ ಮತ್ತು ಲಾಕ್​ಡೌನ್​ ಸಂದರ್ಭದಲ್ಲಿ ಏಕೆ ಹೊರ ಬಂದೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರವನ್ನು ಸಹ ನೀಡಲಿಲ್ಲ ಎಂದು ಹೇಳಿದ್ದಾರೆ.
ಪೊಲೀಸರು ವಿಚಾರಿಸಲು ಮಧ್ಯ ಪ್ರವೇಶಿಸಿದ ಸಂದರ್ಭದಲ್ಲಿ ಬೈಕ್​ನಲ್ಲಿ ವೇಗವಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ. ಪ್ರಶ್ನಿಸಿದಾಗ ಗೊಂದಲು ಉಂಟಾಗುವಂತಹ ಎರಡು ರೀತಿಯ ಉತ್ತರ ನೀಡಿದನು ಎಂದು ಜಿಲ್ಲಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.(ಏಜೆನ್ಸೀಸ್​)
ಒಟಿಟಿಯಲ್ಲಿ ಪ್ರಣೀತಾ ಹಂಗಾಮಾ; ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಚೊಚ್ಚಲ ಬಾಲಿವುಡ್ ಚಿತ್ರ

ಮಾಡುವ ನೀಡುವ ಕಾಯುವ ನಿಜಗುಣವಿದ್ದೆಡೆ…; ಸೆಲೆಬ್ರಿಟಿ ಕಾರ್ನರ್​ನಲ್ಲಿ ನಟ ಧನಂಜಯ

ಪುರಿ ಜಗನ್ನಾಥ್​ ಜತೆ ಯಶ್ ಸಿನಿಮಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
