ನವದೆಹಲಿ:ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು… ಈ ಹಾಡನ್ನು ಎಲ್ಲರೂ ಕೇಳಿರುತ್ತೀರಿ. ನಂಜುಂಡಿ ಕಲ್ಯಾಣ ಚಿತ್ರದಲ್ಲಿ ನಟಿ ಮಾಲಾಶ್ರೀ ಹೇಗೆ ಮೈಚಳಿ ಬಿಟ್ಟು ಕುಣಿದಿದ್ದರೋ ಅದನ್ನು ಮತ್ತೆ ನೆನಪಿಸುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಹಿಳೆಯೊಬ್ಬರು ಎಣ್ಣೆ ಮತ್ತಿನಲ್ಲಿ ಮದುವೆ ಮಂಟಪದಲ್ಲಿ ಮೈಚಳಿ ಬಿಟ್ಟು ಕುಣಿದಿದ್ದಾರೆ.
ಅನೇಕ ಸಂದರ್ಭಗಳನ್ನು ಮದ್ಯಪಾನ ಮೂಲಕ ಅದ್ಧೂರಿ ಆಚರಣೆ ಮಾಡುವುದು ಉತ್ತರ ಭಾರತದಲ್ಲಿ ಸಾಮಾನ್ಯ. ಅದರಲ್ಲೂ ಮದುವೆ ಸಮಾರಂಭಗಳಲ್ಲಿ ಗಂಡಸರು ಎಣ್ಣೆ ಹೊಡೆದು ಕುಣಿದು ಕುಪ್ಪಳಿಸುವುದನ್ನು ನೋಡಿದ್ದೇವೆ. ಎಲ್ಲಡೆ ಇದು ಸಾಮಾನ್ಯ ಕೂಡ. ಆದರೆ, ಮಹಿಳೆಯರು ಈ ರೀತಿ ಮಾಡುವುದು ವಿರಾಳತಿವಿರಳ. ಆದರೆ, ಉತ್ತರ ಭಾರತದಲ್ಲಿ ಅಪರೂಪಕ್ಕೊಮ್ಮೆ ಇಂತಹ ದೃಶ್ಯ ಕಾಣಸಿಗುತ್ತದೆ. ಇಲ್ಲಿ ಮಹಿಳೆಯರು ಕೂಡ ಮದ್ಯದ ಅಮಲಿನಲ್ಲಿ ಮದುವೆ ಮಂಟಪದಲ್ಲಿ ಸೊಂಟ ಬಳುಕಿಸುತ್ತಾರೆ.
ವಿಶೇಷ ಡಾನ್ಸ್​ ಮೂಲಕ ಮಹಿಳೆಯೊಬ್ಬರು ಕುಡಿದ ಮತ್ತಿನಲ್ಲಿ ಮದುವೆ ಮಂಟಪದಲ್ಲಿ ಮನರಂಜನೆ ನೀಡಿರುವ ವಿಡಿಯೋ ವೈರಲ್​ ಆಗಿದೆ. 1985ರಲ್ಲಿ ತೆರೆಕಂಡ ಕಾಲ ಸೂರಜ್​ ಚಿತ್ರದ ಡು ಘೂಂಟ್​ ಪಿಲಾ ದೆ ಹಾಡಿಗೆ ಮಹಿಳೆಯೊಬ್ಬರು ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದ್ದಾರೆ. ನೆಲದ ಮೇಲೆಲ್ಲ ಬಿದ್ದ ಒದ್ದಾಡಿದ್ದಾರೆ.
ಈ ವಿಡಿಯೋವನ್ನು ಎಜಿ ಸಿದ್ದಿಕಿ ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ಅಪ್​ಲೋಡ್​ ಮಾಡಿದ್ದು ಸಿಕ್ಕಾಪಟ್ಟೆ ವ್ಯೂವ್ಸ್​ ಗಿಟ್ಟಿಸಿಕೊಳ್ಳುತ್ತಿದೆ. ಈವರೆಗೂ 2 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಗಿಟ್ಟಿಸಿಕೊಂಡಿದ್ದು, ಸಿಕ್ಕಾಪಟ್ಟೆ ಕಾಮೆಂಟ್​ ಹರಿದುಬರುತ್ತಿವೆ. ಆಕೆಯ ಗಂಡನಿಗೆ ದೇವರು ಒಳ್ಳೆಯದು ಮಾಡಲಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಹೀಗೆ ಅನೇಕರು ಫನ್ನಿ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ.(ಏಜೆನ್ಸೀಸ್​)

ಬಸ್ಸಿನೊಳಗೆ ಕುಸಿದು ಬಿದ್ದ ಯುವಕನಿಗೆ ಪುನರ್ಜನ್ಮ ನೀಡಿದ ನರ್ಸ್​ಗೆ ಮೆಚ್ಚುಗೆಯ ಮಹಾಪೂರ!

ಅಪಾಯಕಾರಿ ಓವರ್​ಟೇಕ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಸಹೋದರಿಯರಿಬ್ಬರಿಗೆ ಪ್ರಭಾವಿ ಪುತ್ರನಿಂದ ಥಳಿತ!

ಹಿಂಬದಿ ಸೀಟಿನಲ್ಲಿ ಕುಳಿತು ಮಹಿಳೆಗೆ ಲೈಂಗಿಕ ಕಿರುಕುಳ: ವಿಮಾನದಿಂದ ಇಳಿಯುತ್ತಿದ್ದಂತೆ ಕಾದಿತ್ತು ಶಾಕ್​!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:5 × four =
Remember me
