ತಿರುವನಂತಪುರಂ:ಕೇರಳದ ಕೊಡೆಂಚೆರಿ ಪಟ್ಟಣದಲ್ಲಿ ಸಂಭವಿಸಬೇಕಿದ್ದ ಭಾರೀ ದುರಂತವನ್ನು ವ್ಯಕ್ತಿಯೊಬ್ಬ ತನ್ನ ಚಾಣಾಕ್ಷತನದಿಂದ ತಪ್ಪಿಸಿದ ಸಿನಿಮೀಯ ಘಟನೆ ನಡೆದಿದೆ.
ಭಾನುವಾರ ಭತ್ತದ ಹುಲ್ಲು ತುಂಬಿಕೊಂಡು ಬರುತ್ತಿದ್ದ ಲಾರಿಗೆ ವಿದ್ಯುತ್​ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಆಘಾತಕ್ಕೆ ಒಳಗಾದ ಚಾಲಕ ಲಾರಿಯನ್ನು ನಿಲ್ಲಿಸಿ ಅಸಹಾಯಕತೆಯಿಂದ ನೋಡುತ್ತಿದ್ದ. ಇಡೀ ವಾಹನ ಕೆಲವೇ ಸಮಯದಲ್ಲಿ ಬೆಂಕಿಗೆ ಆಹುತಿ ಆಗಲಿದೆ ಎನ್ನುವಷ್ಟರಲ್ಲಿ ಓರ್ವ ವ್ಯಕ್ತಿ ಸಿನಿಮಾ ನಾಯಕನಂತೆ ಲಾರಿಯೊಳಕ್ಕೆ ಜಿಗಿದು ಅದನ್ನು ಸುರಕ್ಷಿತ ಸ್ಥಳಕ್ಕೆ ಚಲಾಯಿಸಿ ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಲ್ಲದೆ, ಲಾರಿಯನ್ನು ರಕ್ಷಣೆ ಮಾಡಿದ.
ಆ ನಿಜ ಜೀವನದ ಹೀರೋ ಹೆಸರು ಶಾಜಿ ವಾರ್ಘೀಶ್​,. ಈತನ ಎಂಟ್ರಿ ಇಡೀ ಚಿತ್ರಣವನ್ನೇ ಬದಲಿಸಿತು. ಇದು ಶುರುವಾಗಿದ್ದು ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ. ಶಾಜಿ ಪಾಪ್ಪನ್​ ಎಂದೇ ಪಟ್ಟಣದಲ್ಲಿ ಖ್ಯಾತಿಯಾಗಿರುವ ಮಿ. ವಾರ್ಘೀಶ್​​, ಬೆಂಕಿ ಹೊತ್ತಿಕೊಂಡಿದ್ದ ಲಾರಿಯನ್ನು ಸುರಕ್ಷಿತವಾಗಿ ಖಾಲಿ ಮೈದಾನಕ್ಕೆ ಚಲಾಯಿಸಿ, ಸಂಭವನೀಯ ಸ್ಫೋಟವನ್ನು ತಪ್ಪಿಸಿದರು. ಕೇವಲ ಸಮಯಪ್ರಜ್ಞೆ ಮಾತ್ರ ತೋರದೆ ಉರಿಯುತ್ತಿದ್ದ ಲಾರಿಯನ್ನು ಜನಜಂಗುಳಿ ಪ್ರದೇಶದಿಂದ ಖಾಲಿ ಮೈದಾನಕ್ಕೆ ತೆಗೆದುಕೊಂಡು ಹೋಗುವ ಮೂಲಕ ಲಾರಿಯನ್ನೂ ಉಳಿಸುವ ಮೂಲಕ ಎದೆಗಾರಿಕೆಯನ್ನು ಪ್ರದರ್ಶನ ಮಾಡಿದರು.
ಲಾರಿಯನ್ನು ಜಿಗ್​​ಜಾಗ್​ ಮಾದರಿಯಲ್ಲಿ ಚಲಾಯಿಸಿ ವಾಹನದಲ್ಲಿ ಹೊತ್ತಿ ಉರಿಯತ್ತಿದ್ದ ಭತ್ತದ ಹುಲ್ಲಿನ ಕಂತೆಗಳನ್ನು ಎಷ್ಟು ಸಾಧ್ಯವೋ ಅಷ್ಟನ್ನು ಆಫ್​ಲೋಡ್​ ಮಾಡಿದರು. ಬಳಿಕ ಇತರ ಸ್ವಯಂಸೇವಕರೊಂದಿಗೆ ಸೇರಿ ವಾಹನವು ಸುಟ್ಟುಹೋಗದಂತೆ ತಡೆಯುವಲ್ಲಿ ಯಶಸ್ವಿಯಾದರು ಮತ್ತು ಅಗ್ನಿಶಾಮಕ ದಳದವರ ಆಗಮನದವರೆಗೆ ಪರಿಸ್ಥಿತಿಯನ್ನು ಸುರಕ್ಷಿತವಾಗಿ ನಿರ್ವಹಿಸಿದರು.
ಇನ್ನು ವಾರ್ಘೀಶ್​ ಅವರು ದಿಟ್ಟತನದಿಂದ ವಾಹನ ಚಲಾಯಿಸಿಕೊಂಡು ಬರುವ ವಿಡಿಯೋದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಮೆಚ್ಚುಗೆ ಪಾತ್ರವಾಗಿದೆ.

A post shared by നമ്മൾ കോഴിക്കോട്ടുകാർ (@kozhikottukaarofficial)

ಈ ಬಗ್ಗೆ ಮಾತನಾಡಿರುವ ವಾರ್ಘೀಶ್​​ ನಾನು 25 ವರ್ಷಗಳಿಂದ ಹೆವಿ ಡ್ಯೂಟಿ ಮೋಟಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಹಳ್ಳಿ ಮತ್ತು ವಿದೇಶಗಳಲ್ಲಿ ಇದೇ ರೀತಿಯ ಅಪಾಯಕಾರಿ ಸನ್ನಿವೇಶಗಳನ್ನು ನಿಭಾಯಿಸುವಲ್ಲಿ ನನ್ನ ಹಿಂದಿನ ಅನುಭವವು ನನಗೆ ಸಹಾಯ ಮಾಡಿದೆ ಎಂದು ಹೇಳಿದರು.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದಾಗಿನಿಂದ 45 ವರ್ಷದ ವಾರ್ಘೀಶ್​​ ಅವರನ್ನು ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತಿದೆ ಮತ್ತು ಸ್ನೇಹಿತರು ಮತ್ತು ಕುಟುಂಬದಿಂದ ಮೆಚ್ಚುಗೆಯ ಕರೆಗಳು ಬರುತ್ತಿವೆ.(ಏಜೆನ್ಸೀಸ್​)
ಶಿವಧಾಮದಲ್ಲಿ ಪವಾಡ: ರಾತ್ರಿ ಶಿವಲಿಂಗದ ಸುತ್ತಲೂ ಪ್ರದಕ್ಷಿಣೆ ಹಾಕಿದ ನಾಗರಹಾವು- ಸಿಸಿಟಿವಿಯಲ್ಲಿ ಸೆರೆ

ಹಾಟ್ ಫೋಟೋಶೂಟ್ ನಲ್ಲಿ ಬಿಕಿನಿ ತೊಟ್ಟು ಮಿಂಚಿದ ಮಾಳವಿಕಾ! ನೆಟ್ಟಿಗರು ಫಿದಾ…

ಪೊಲೀಸ್‌ ಠಾಣೆ ಮೆಟ್ಟಿಲೇರಿದ ಐಎಎಸ್‌ ದಂಪತಿ ಫಸ್ಟ್‌ನೈಟ್ ಕೇಸ್‌! 32 ವರ್ಷಗಳ ಬಳಿಕ ದೂರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 11 =
Remember me
