ಮುಂಬೈ:ಚಿರತೆಯೊಂದು ಮನೆಯೊಳಗೆ ನುಗ್ಗಿದ ಘಟನೆ ಮಹಾರಾಷ್ಟ್ರದ ಸತಾರ ಜಿಲ್ಲೆಯ ಕೊಯಾನಗರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ದುರ್ಗಾ ಮೂರ್ತಿಯ ವಿಸರ್ಜನೆಗೆಂದು ಕುಟುಂಬದ ಸದಸ್ಯರೆಲ್ಲರು ಹೊರಗಡೆ ತೆರಳಿದ್ದರು. ಇದೇ ಸಮಯದಲ್ಲಿ ಚಿರತೆಯು ಮನೆಯೊಳಗೆ ನುಗ್ಗಿದೆ. ಮೂರ್ತಿ ವಿಸರ್ಜಿಸಿ ಮನೆಯ ಸದಸ್ಯರೆಲ್ಲರು ವಾಪಸ್​ ಬಂದಾಗ ಮನೆಯ ಬಾಗಿಲು ಮುಂದೆಯೇ ಚಿರತೆ ಕುಳಿತಿರುವುದನ್ನು ಕಂಡು ಎಲ್ಲರು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಮನೆಯವರು ಓಡಿ ಹೋಗಿ ಗೇಟ್​ ಬಾಗಿಲು ಬಂದ್​ ಮಾಡಿ ಚಿರತೆಯನ್ನು ಕೂಡಿ ಹಾಕಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಜನರ ಗುಂಪು ಮನೆಯ ಸುತ್ತಲೂ ಜಮಾಯಿಸಿತು ಮತ್ತು ಅನೇಕರು ಚಿರತೆ ಮನೆ ಒಳಗೆ ಸುತ್ತಾಡುತ್ತಿರುವುದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಸಹ ಆಗಿದೆ.
ಸದ್ಯ ಅರಣ್ಯ ಇಲಾಖೆಗೆ ಚಿರತೆ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಚಿರತೆಯನ್ನು ಸೆರೆಹಿಡಿದಿದ್ದಾರೆ.(ಏಜೆನ್ಸೀಸ್​)
(ವಿಡಿಯೋ ಕೃಪೆ: ಎನ್​ಡಿಟಿವಿ)

ರಾಜ್ಯದಲ್ಲಿ ST ಮೀಸಲಾತಿ ಹೆಚ್ಚಿಸಲು ಬಿಜೆಪಿ ಒಲವು

ಡೂಪ್ಲಿಕೇಟ್​ ಸಿಮ್​ ಖರೀದಿಸಲು ಬಂದ ನಟಿಯನ್ನು ಶೋ ರೂಮ್​ನಲ್ಲಿ ಕೂಡಿ ಹಾಕಿ ಕೆಟ್ಟದಾಗಿ ವರ್ತಿಸಿದ ಉದ್ಯೋಗಿ!

ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧಿಕಾರ ಮೊಟುಕುಗೊಳಿಸುವ ಪ್ರಶ್ನೆಯೇ ಇಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine + fourteen =
Remember me
