ಲಖನೌ:ಕಲ್ಯಾಣ ಮಂಟಪದ ವೇದಿಕೆಯಲ್ಲಿ ವರ ರೆಡಿಯಾಗಿದ್ದ. ವಧು ಕೂಡ ರೆಡಿಯಾಗಿರುವಂತೆ ಕಾಣುತ್ತಿದ್ದಳು. ಇನ್ನೊಂದೆಡೆ ಕ್ಯಾಮೆರಾಮ್ಯಾನ್​ ತನ್ನ ಸ್ಥಾನದಲ್ಲಿ ರೆಡಿಯಾಗಿ ನಿಂತು ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದ, ಈ ವೇಳೆ ವೇದಿಕೆಯಲ್ಲೇ ನಡೆದ ಘಟನೆ ಮದುವೆ ಬಂದಿದ್ದ ಅತಿಥಿಗಳನ್ನು ಒಂದು ಕ್ಷಣ ಆಘಾತಕ್ಕೆ ದೂಡಿದೆ.
ಅಷ್ಟಕ್ಕೂ ಏನಾಯಿತು ಅಂದರೆ, ಕುತ್ತಿಗೆಗೆ ಹಾರ ಹಾಕಿದ್ದಕ್ಕೆ ಕುಪಿತಗೊಂಡ ವಧು, ವರನ ಕಪಾಳಕ್ಕೆ ಎರಡೆರಡು ಬಾರಿ ಬಾರಿಸಿ ಕಲ್ಯಾಣ ಮಂಟಪದಿಂದ ಹೊರ ನಡೆದ ವಿಚಿತ್ರ ಘಟನೆ ಉತ್ತರ ಪ್ರದೇಶದ ಹಮೀರ್​ಪುರ್​ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಆಭರಣ ಮತ್ತು ಅದ್ಧೂರಿ ಲೆಹಂಗಾ ಧರಿಸಿದ್ದ ವಧು ಮಂಟಪದಿಂದ ಇಳಿದು ಹೊರ ನಡೆದಾಗ ಅಲ್ಲಿದ್ದ ಅತಿಥಿಗಳು ಅಚ್ಚರಿಯಿಂದ ನೋಡುತ್ತಿದ್ದರು. ಏನು ನಡೆಯುತ್ತಿದೆ ಎಂಬ ಅರಿವು ಕೂಡ ಅವರಿಗೆ ಇರಲಿಲ್ಲ. ವಧು-ವರನ ನಡುವೆ ಏನು ಮನಸ್ತಾಪ ಆಯಿತು ಎಂಬುದು ತಿಳಿದಿಲ್ಲ. ಆದರೆ, ವಧು ಮಾಡಿದ ಕೆಲಸ ಅಲ್ಲಿದ್ದ ಎಲ್ಲರನ್ನೂ ಮುಜುಗರಕ್ಕೆ ತಳ್ಳಿತು.
ಇದಾದ ಬಳಿಕ ಎರಡು ಕುಟುಂಬಸ್ಥರು ಮಧ್ಯ ಪ್ರವೇಶಿಸಿದ ನಂತರ ಒಂದು ಒಪ್ಪಂದದ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.(ಏಜೆನ್ಸೀಸ್​)
(ವಿಡಿಯೋ ಕೃಪೆ: ಎಪಿಎನ್​ ನ್ಯೂಸ್​)

ಅತಿ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಭಾರತ ಸಿನಿಮಾಗಳ ಪಟ್ಟಿ ಹೀಗಿದೆ… ಕೆಜಿಎಫ್​-2 ಎಷ್ಟನೇ ಸ್ಥಾನದಲ್ಲಿದೆ?

BBMP ಕಸದ ಲಾರಿಗೆ ನಗರದಲ್ಲಿ ಮತ್ತೊಂದು ಬಲಿ: ಕೆಲ್ಸ ಮುಗಿಸಿ ಮನೆಗೆ ಬರ್ತಿದ್ದ SBI ಉದ್ಯೋಗಿ ದುರಂತ ಸಾವು

2 ಲಕ್ಷ ಫ್ಯಾಮಿಲಿಗೆ ಶುಭಸುದ್ದಿ: ತ್ರಿಶಂಕು ವಸತಿ ಫಲಾನುಭವಿಗೆ ಮತ್ತೆ ಅರ್ಜಿ ಸಲ್ಲಿಕೆ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 15 =
Remember me
