ಹೈದರಾಬಾದ್​:ಧಾನ್ಯ ಖರೀದಿ ವಿಚಾರದಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್​ಎಸ್) ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಟಿಆರ್‌ಎಸ್​ನ ಎಲ್ಲ ಸಂಸದರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೇಂದ್ರ ಧೋರಣೆಯನ್ನು ಖಂಡಿಸಿ ಪ್ರತಿಭಟಿಸಿದ್ದಾರೆ.
ಆರ್ಮರ್ ಕ್ಷೇತ್ರದ ಶಾಸಕ ಜೀವನ್​ ರೆಡ್ಡಿ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಈ ವೇಳೆ ಅವರು ಗ್ಯಾಸ್​ ಸಿಲಿಂಡರ್​ ಅನ್ನು ತಲೆಯ ಮೇಲೆ ಹೊತ್ತು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ಮೂಲಕ ಸಿಲಿಂಡರ್​ ದರ ಏರಿಕೆಯನ್ನು ಖಂಡಿಸಿದರು. ಆದಾಗ್ಯೂ ತಾವು ಧರಿಸಿದ್ದ ಟೀ-ಶರ್ಟ್​ನಿಂದ ಜೀವನ್​ ರೆಡ್ಡಿ ಟ್ರೋಲ್​ ಕೂಡ ಆಗಿದ್ದಾರೆ. ಅವರು ಧರಿಸಿದ್ದ ಟೀ-ಶರ್ಟ್​ ಅನ್ನು ಗುರಿಯಾಗಿಸಿ ಪ್ರತಿಪಕ್ಷದ ನಾಯಕರು ಟೀಕೆಗಳ ಸುರಿಮಳೆಗೈದಿದ್ದಾರೆ.
ಅಂದಹಾಗೆ ಜೀವನ್​ ರೆಡ್ಡಿ ಧರಿಸಿದ್ದು ಬಲ್ಮೇನ್​ ಪ್ಯಾರೀಸ್​ ಕಂಪನಿ ಟಿ ಶರ್ಟ್ಸ್​. ಅದೇ ಹೆಸರಿನ ಸುಳಿವಿನಿಂದ ಈ ಕಾರ್ಮರ್ಸ್​ ಕಂಪನಿ ಮೂಲಕ ಬಲ್ಮೇನ್​ ಪ್ಯಾರೀಸ್​ ಶರ್ಟ್​ ಬೆಲೆಯನ್ನು ಹುಡುಕಾಡಿದಾಗ ಅದರ ಮೇಲೆ ನೋಡಿ ಎಲ್ಲರೂ ದಂಗಾಗಿದ್ದಾರೆ. ಟೀ-ಶರ್ಟ್​ ಬೆಲೆ ಬರೋಬ್ಬರಿ 547 ಡಾಲರ್​. ಭಾರತೀಯ ಕರೆನ್ಸಿ ಪ್ರಕಾರ 42 ಸಾವಿರ ರೂಪಾಯಿ.
ಟೀ-ಶರ್ಟ್​ ಬೆಲೆ ಇರುವ ಸ್ಕ್ರೀನ್​ ಶಾಟ್ಸ್​ ತೆಗೆದು ಇದೀಗ ಜೀವನ ರೆಡ್ಡಿ ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ. 42 ಸಾವಿರ ಬೆಲೆ ದುಬಾರಿ ಟೀ-ಶರ್ಟ್​ ಹಾಕೊಂಡು 50 ರೂಪಾಯಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಗಿದ್ದಾರೆ.

ಅಂದಹಾಗೆ ಮಾರ್ಚ್​ 22ರಂದು ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯ ಜತೆಗೆ ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ 50 ರೂಪಾಯಿ ಏರಿಕೆಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಗ್ರಾಹಕರಲ್ಲಿ ಅಸಮಾಧಾನ ಶುರುವಾಗಿದೆ.(ಏಜೆನ್ಸೀಸ್​)
ವೀಕೆಂಡ್​ ಮೋಜಿನಲ್ಲಿದ್ದ ನಟ ಅಲ್ಲು ಅರ್ಜುನ್​ ಕಾರು ತಡೆದು ಶಾಕ್​ ಕೊಟ್ಟ ಹೈದರಾಬಾದ್​ ಪೊಲೀಸರು!

ಒಂದು ಕಾಲದಲ್ಲಿ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಹುಡುಗಿ ಇಂದು ಒಂದು ಕಂಪನಿಯ ಮ್ಯಾನೇಜರ್..!​

50 ಅಡಿ ಆಳದ ಕಂದಕಕ್ಕೆ ಬಿದ್ದ ಬಸ್​: ನಿಶ್ಚಿತಾರ್ಥಕ್ಕೆ ಹೊರಟವರಲ್ಲಿ 7 ಮಂದಿ ಸಾವು, 45 ಮಂದಿ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
