ಜೈಪುರ:ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.. ಇದು ಹಿಂದಿನಿಂದಲೂ ಹಿರಿಯರು ಹೇಳುತ್ತಿರುವ ಅನುಭವದ ಮಾತು. ಮನೆ ಕಟ್ಟುವುದಾಗಲಿ ಅಥವಾ ಮದುವೆ ಮಾಡುವುದಾಗಲಿ ಸುಲಭದ ಮಾತೇ ಅಲ್ಲ. ಈ ಎರಡು ವಿಚಾರಗಳ ಕಾರ್ಯಸಾಧನೆಗೆ ಮುಂದಾದರೆ, ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೇವಲ ಒಂದು ಮದುವೆ ಮಾಡಲು ಜೀವನ ಪೂರ್ತಿ ಹರಸಾಹಸಪಟ್ಟವರನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ತನ್ನ 6 ಮಕ್ಕಳಿಗೆ ಮದುವೆ ಮಾಡಿರುವುದು ಅಚ್ಚರಿಯ ಸಂಗತಿಯೇ ಸರಿ.

ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣಹೌದು. ರಾಜಸ್ಥಾನದ ಜುಂಜುನು ಜಿಲ್ಲೆಯ ಖೆತ್ರಿ ಪಟ್ಟಣದ ಚಿರಾಣಿ ಗ್ರಾಮದ ನಿವಾಸಿ ರೋಹಿತಾಶ್ವ್ ಗುರ್ಜರ್ ಎಂಬುವರಿಗೆ 7 ಹೆಣ್ಣುಮಕ್ಕಳು ಮತ್ತು ಓರ್ವ ಗಂಡು ಮಗನಿದ್ದಾನೆ. ವೃತ್ತಿಯಲ್ಲಿ ಬಸ್​ ಡ್ರೈವರ್​ ಆಗಿರುವ ರೋಹಿತಾಶ್ವ್ ಗುರ್ಜರ್, ಎಂದಿಗೂ ಗಂಡು ಮತ್ತು ಹೆಣ್ಣುಮಕ್ಕಳು ಎಂಬ ಭೇದ ಭಾವ ಮಾಡಿದವರಲ್ಲ. ಹೆಣ್ಣುಮಕ್ಕಳಿಗೆ ಎಲ್ಲ ರೀತಿಯ ಸ್ವತಂತ್ರ ನೀಡಿದ್ದು, ಅತ್ಯತ್ತಮ ಶಿಕ್ಷಣವನ್ನು ಕೊಡಿಸಿದ್ದಾರೆ. ಇದು ಮಾಡಬಾರದು ಅದು ಮಾಡಬಾರದು ಅಂತಾ ಎಂದಿಗೂ ಗುರ್ಜರ್​ ಕಟ್ಟುಪಾಡು ವಿಧಿಸಲೇ ಇಲ್ಲ. ಅದರ ಫಲವಾಗಿಯೇ ಅವರ 6 ಮಕ್ಕಳು ಕೂಡ ಡಿಗ್ರಿಯಿಂದ ಎಂಎ ಬಿಇಡಿ ವರೆಗೂ ಓದಿದ್ದಾರೆ.

ಮೂರು ಗ್ರಾಮಗಳ ಮಹಾ ಸಂಗಮಗುರ್ಜರ್​ ಪುತ್ರ ವಿಕಾಸ್​ ಹೇಳುವ ಪ್ರಕಾರ ಆತನ ಆರು ಸಹೋದರಿಯರು ಮೂರು ಗ್ರಾಮಗಳ ವರಗಳನ್ನು ಮದುವೆ ಆಗಿದ್ದಾರೆ. ಅದರಲ್ಲಿ ಇಬ್ಬರು ಸಹೋದರಿಯರು ಒಂದೇ ಕುಟುಂಬಕ್ಕೆ ಮದುವೆ ಆಗಿ ಹೋಗಿದ್ದಾರೆ. ಸಹೋದರಿಯರನ್ನು ಮದುವೆಯಾದ ಭಾವಂದಿರು ನಿಜವಾದ ಸಹೋದರರು. ನನ್ನ ಸಹೋದರಿಯರು ಈಗ ದೇವರಾಣಿ ಜೇತನಿಯಾಗಿದ್ದಾರೆ. ಸಹೋದರಿಯರ ಮದುವೆ ಬಂದಿದ್ದ ಸಂಬಂಧಿಕರು, ವರನ ಕುಟುಂಬಸ್ಥರು ಮತ್ತು ಇಡೀ ಗ್ರಾಮದ ಜನರನ್ನು ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು ಎಂದು ಹೇಳಿದ್ದಾರೆ.

ಎಲ್ಲರೂ ಉನ್ನತ ಶಿಕ್ಷಣ ಪಡೆದವರೇಮೀನಾ ಮತ್ತು ಸೀಮಾ ಎಂಎ ಬಿಇಡಿ ಡಿಗ್ರಿ ಮಾಡಿದ್ದಾರೆ. ಅಂಜು ಮತ್ತು ನಿಕ್ಕಿ ಮಾಸ್ಟರ್​ ಆಫ್​ ಮ್ಯಾನೇಜ್​ಮೆಂಟ್​ ಮಾಡಿದ್ದಾರೆ. ಯೋಗಿತಾ ಮತ್ತು ಸಂಗೀತಾ ಬಿಎಸ್​ಸಿ ಮಾಡಿದ್ದಾರೆ. ಕಿರಿಯ ಸಹೋದರಿ ಕೃಪಾ ಇನ್ನು ಮದುವೆ ಮಾಡಿಲ್ಲ. ಆಕೆಯೂ ಕೂಡ ಬಿಎಸ್​ಸಿ ಮಾಡಿದ್ದಾಳೆಂದು ಸಹೋದರ ವಿಕಾಸ್​ ಹೇಳಿದ್ದಾರೆ.

ಕುಣಿದು ಕುಪ್ಪಳಿಸಿದ ಸಹೋದರಿಯರುಇನ್ನು ಮದುವೆ ಸಂದರ್ಭದಲ್ಲಿ ಆರು ಸಹೋದರಿಯರು ಸಫಾ ಕಟ್ಟಿಕೊಂಡು ಕುದುರೆ ಮೇಲೆ ಸವಾರಿ ಮಾಡಿದರು. ಮೆರವಣಿಗೆಯ ವೇಳೆ ಕುಟುಂಬ ಸದಸ್ಯರೊಂದಿಗೆ ಸಹೋದರಿಯರು ಸಹ ಡಿಜೆಯಲ್ಲಿ ಅಚ್ಚುಕಟ್ಟಾಗಿ ನೃತ್ಯ ಮಾಡಿದರು ಎಂದು ವಿಕಾಸ್​ ಹೇಳಿದ್ದಾರೆ.

ಯಾರು ಯಾರನ್ನು ಮದುವೆಯಾದರು?1. ಮೀನಾ ಹರಿಯಾಣದ ದುಖೇರಾ ರಾಜನನ್ನು ಮದುವೆಯಾಗಿದರು2. ಸೀಮಾ ರಾಜ ದುಖೇರಾ ಸಹೋದರ ಭೈರು ಸಿಂಗ್​ರನ್ನು ವಿವಾಹವಾದರು3. ಅಂಜು ಸಿಕರ್‌ನ ಧರಂವೀರ್‌ನೊಂದಿಗೆ ಮದುವೆ ಆದರು4. ನಿಕ್ಕಿಯು ಧರ್ಮವೀರ್‌ನ ಸಹೋದರ ವಿಜೇಂದ್ರನನ್ನು ಮದುವೆಯಾದರು.5. ಯೋಗಿತಾಳ ಮದುವೆ ಕುಥಾನಿಯಾ ಗ್ರಾಮದ ಪ್ರದೀಪ್ ಜೊತೆ6. ಸಂಗೀತಾ, ಪ್ರದೀಪ್ ಅವರ ಸಹೋದರ ಮೋಹಿತ್ ಅವರನ್ನು ವಿವಾಹವಾದರು
ಮಾಡೆಲ್​ಗಳಿಬ್ಬರ ದುರಂತ ಸಾವು​: ಆರೋಪಿ ಮೊಬೈಲ್​ನಲ್ಲಿ ಪತ್ತೆಯಾಯ್ತು ಭಯಾನಕ ವಿಡಿಯೋಗಳು!

ಇನ್ನೇನು ಕೆಲವೇ ದಿನಗಳಲ್ಲಿ ತಾಯ್ನಾಡಿಗೆ ಮರಳಬೇಕಿದ್ದ ಭಾರತೀಯ ಮೂಲದ ಯುವಕ ಅಮೆರಿಕದಲ್ಲಿ ದುರಂತ ಸಾವು

ಮಕ್ಕಳಿಲ್ಲದೇ ಮಹಿಳೆ ಸತ್ತರೆ, ಆಕೆಗೆ ಸಿಕ್ಕ ತವರಿನ ಆಸ್ತಿ ಯಾರ ಪಾಲಾಗುತ್ತದೆ? ಕಾನೂನು ಹೇಳುವುದೇನು?

ಆಕೆ ನನಗೆ ಹುಟ್ಟಿದ ಮಗಳಲ್ಲ: ವಿವಾದದ ಬಳಿಕ ಸಿನಿಮಾದಿಂದ ಬ್ರೇಕ್​ ಪಡೆದುಕೊಂಡ ನಟಿ ಶ್ರೀಲೀಲಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
