ಮುಂಬೈ:ಪೋರ್ನ್​ ವಿಡಿಯೋಗಳ ನಿರ್ಮಾಣ ಮತ್ತು ಹಂಚಿಕೆ ಆರೋಪದಲ್ಲಿ ಉದ್ಯಮಿ ಹಾಗೂ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಬಂಧನವಾಗಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ರಾಜ್​ ಕುಂದ್ರಾ ವಿರುದ್ಧ ಸಾಕ್ಷಿ ಹೇಳಲು ಅವರದೇ ಕಂಪನಿಯ ನಾಲ್ವರು ಉದ್ಯೋಗಿಗಳು ಮುಂದೆ ಬಂದಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಪೊಲೀಸ್​ ವಿಚಾರಣೆ ಎದುರಿಸಿರುವ ನಾಲ್ವರು ಉದ್ಯೋಗಿಗಳು ಕೆಲವು ಆಸಕ್ತಿಕರ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಪೋರ್ನ್​ ವಿಡಿಯೋಗಳನ್ನು ಡಿಲೀಟ್ ಮಾಡಲು ಹೇಳಿದ್ದರು ಎಂದು ಉದ್ಯೋಗಿಗಳು ಬಾಯ್ಬಿಟ್ಟಿದ್ದಾರೆ. ವಿಡಿಯೋಗಳನ್ನು “ಹಾಟ್​ಶಾಟ್ಸ್​” ಎಂಬ ಆ್ಯಪ್​ ಮೂಲಕ ಅಪ್​ಲೋಡ್​ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ.
ಹಾಟ್​ಶಾಟ್ಸ್​ ಆ್ಯಪ್​ ಅನ್ನು ಗೂಗಲ್​ ಪ್ಲೇ ಸ್ಟೋರ್​ ಮತ್ತು ಆ್ಯಪಲ್​ ಆ್ಯಪ್​ ಸ್ಟೋರ್​ನಿಂದ ತೆಗೆಸಿದ ಬಳಿಕ ಮತ್ತೊಂದು ಆ್ಯಪ್​ ತೆರೆಯಲು ಪ್ಲಾನ್​ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಆ ಆ್ಯಪ್​ಗೆ ಬಾಲಿಫೇಮ್​ ಎಂದು ಹೆಸರು ಸಹ ಫಿಕ್ಸ್​ ಆಗಿತ್ತು ಎಂಬುದನ್ನು ಉದ್ಯೋಗಿಗಳು ವಿಚಾರಣೆ ವೇಳೆ ಹೊರಗಾಕಿದ್ದಾರೆ.
45 ವರ್ಷದ ರಾಜ್​ ಕುಂದ್ರಾರನ್ನು ಜುಲೈ 19ರಂದು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮ್ಯಾಜಿಸ್ಟ್ರೇಟ್​ ಕೋರ್ಟ್​ ಕುಂದ್ರಾರನ್ನು ಜುಲೈ 27ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕುಂದ್ರಾ ಬಂಧನವಾದ ದಿನದ ಬೆನ್ನಲ್ಲೇ ಅನೇಕ ದತ್ತಾಂಶಗಳು ಅವರ ದಾಖಲೆಗಳಲ್ಲಿ ಡಿಲೀಟ್​ ಆಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನಿಖಾ ಸಂಸ್ಥೆ ಇಂಟೆಲಿಜೆನ್ಸ್​ ಬ್ಯೂರೋ (ಐಬಿ)ದ ಓರ್ವ ಉದ್ಯೋಗಿಗೂ ಹಾಗೂ ಪೋರ್ನ್​ ಪ್ರಕರಣದ ಮತ್ತೊಬ್ಬ ಆರೋಪಿ ಯಶ್​ ಠಾಕೂರ್​ ನಡುವೆ ಸಂಪರ್ಕವಿರುವುದು ತಿಳಿದುಬಂದಿದೆ. ಐಬಿ ಉದ್ಯೋಗಿಯೊಂದಿಗೆ ಸ್ನೇಹ ಹೊಂದಿದ್ದ ಯಶ್​ ಠಾಕೂರ್​, ಆತನೊಂದಿಗೆ ಸೇರಿ ಆ್ಯಪ್​ ಒಂದನ್ನು ಆರಂಭಿಸಿ ತಯಾರಿ ನಡೆಸಿದ್ದರು. ಅದರಂತೆ ಐಬಿ ಅಧಿಕಾರಿಯು ತನ್ನ ಹೆಂಡತಿಯ ಹೆಸರಿನಲ್ಲಿ ಆ್ಯಪ್​ ನೋಂದಾಯಿಸಿದ್ದರು. ಆದರೆ, ಪ್ರಶಸ್ತಿ ವಿಜೇತ ಕಿರುಚಿತ್ರಗಳನ್ನು ಮಾತ್ರ ಸ್ಟ್ರೀಮ್ ಮಾಡಲು ಇಬ್ಬರ ನಡುವೆ ಒಪ್ಪಂದ ಆಗಿತ್ತು. ಆದರೆ, ಅದನ್ನು ವಿರೋಧಿಸಿ ಯಶ್ ಠಾಕೂರ್, ಆ್ಯಪ್‌ನಲ್ಲಿ ಅಶ್ಲೀಲ ತುಣುಕುಗಳನ್ನು ಅಪ್‌ಲೋಡ್ ಮಾಡಲು ಪ್ರಾರಂಭಿಸಿದಾಗ ಐಬಿ ಅಧಿಕಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.
ರಾಜ್ ಕುಂದ್ರಾ ಅವರ ನೆರವಿನಿಂದ ಪೋರ್ನ್​ ವಿಡಿಯೋಗಳನ್ನು ಸ್ಟ್ರೀಮಿಂಗ್ ಮಾಡಿದ್ದಾರೆಂದು ಆರೋಪಿಸಲಾಗಿರುವ ಮೊಬೈಲ್ ಅಪ್ಲಿಕೇಶನ್‌ ವಿಷಯದ ಬಗ್ಗೆ ನನಗೆ ನಿಖರವಾಗಿ ತಿಳಿದಿಲ್ಲ ಎಂದು ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೆ, ‘ಕಾಮಪ್ರಚೋದಕ’ ಮತ್ತು ‘ಅಶ್ಲೀಲತೆ’ ನಡುವಿನ ವ್ಯತ್ಯಾಸವನ್ನು ಅವರು ಒತ್ತಿಹೇಳಿದ್ದಾರೆ ಮತ್ತು ಅಶ್ಲೀಲ ವಿಷಯವನ್ನು ತಯಾರಿಸುವಲ್ಲಿ ಪತಿ ಭಾಗಿಯಾಗಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.(ಏಜೆನ್ಸೀಸ್​)
ಪೊಲೀಸರ ಎದುರೇ ಶಿಲ್ಪಾ ಶೆಟ್ಟಿ ಕಣ್ಣೀರು: ವಿಚಾರಣೆ ವೇಳೆ ರಾಜ್​ ಕುಂದ್ರಾ-ಶಿಲ್ಪಾ ನಡುವೆ ಮಾತಿನ ಚಕಮಕಿ!

ಬ್ಲೂ ಫಿಲ್ಮ್​ ವಿಚಾರ ಶಿಲ್ಪಾಗೆ ಗೊತ್ತಿತ್ತಾ? ಪೊಲೀಸರಿಂದ ವಿಚಾರಣೆ- ಕುಂದ್ರಾಗೆ 27ರವರೆಗೆ ಜೈಲು

ಬ್ಲೂ ಫಿಲ್ಮ್​ ದಂಧೆಯಲ್ಲಿ ಪತಿ ರಾಜ್​ ಕುಂದ್ರಾ ಬಂಧನ: ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
