ಮುಂಬೈ:ಹುಡುಗಿಯರಿಬ್ಬರು ಒಬ್ಬ ಹುಡುಗನಿಗಾಗಿ ಬಸ್​ ನಿಲ್ದಾಣದಲ್ಲೇ ಬಡಿದಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪೈಠಾಣ್​ ಜಿಲ್ಲೆಯಲ್ಲಿ ನಡೆದಿರುವುದಾಗಿ ಶನಿವಾರ ವರದಿಯಾಗಿದೆ.
17 ವರ್ಷದ ಇಬ್ಬರು ಹುಡುಗಿಯರು ಬಾಯ್​ಫ್ರೆಂಡ್​ಗಾಗಿ ಸಾರ್ವಜನಿಕರ ಎದುರೇ ಕಿತ್ತಾಡಿಕೊಂಡು ಕಿರಿಕಿರಿ ಉಂಟು ಮಾಡಿದ್ದಾರೆ. ಈ ಘಟನೆ ಕಳೆದ ಬುಧವಾರ ಬೆಳಗ್ಗೆ ಜನನಿಬಿಡ ಪೈಠಾನ್ ಬಸ್​ ನಿಲ್ದಾಣದಲ್ಲೇ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ​
ವಿವರಣೆಗೆ ಬರುವುದಾದರೆ, ಇಬ್ಬರು ಹುಡುಗಿಯರಲ್ಲಿ ಒಬ್ಬಳು, ಹುಡುಗನ ಜೊತೆ ಬಸ್​ ನಿಲ್ದಾಣಕ್ಕೆ ಬಂದಿದ್ದಳು. ಈ ವಿಚಾರ ಇನ್ನೊರ್ವ ಯುವತಿಗೆ ತಿಳಿದು, ಕೂಡಲೇ ಆಕೆ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಇಬ್ಬರ ಮಧ್ಯ ಬಾಯ್​ಫ್ರೆಂಡ್​ ವಿಚಾರಕ್ಕಾಗಿ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು, ತಾಳ್ಮೆ ಕಳೆದುಕೊಂಡು ಹುಡುಗಿಯರು ಸಾರ್ವಜನಿಕರು ಇದ್ದಾರೆ ಎಂಬುದನ್ನು ಗಮನಿಸದೇ ಸ್ಥಳದಲ್ಲೇ ಕಿತ್ತಾಡಿಕೊಂಡಿದ್ದಾರೆ.
ಹುಡುಗಿಯರಿಬ್ಬರು ಜಗಳ ಆಡುವಾಗ ಹುಡುಗ ಏನು ಮಾಡುತ್ತಿದ್ದ ಎಂಬುದೇ ಸದ್ಯದ ಪ್ರಶ್ನೆ. ಅದಕ್ಕೆ ಉತ್ತರ ಮುಂದಿದೆ ಓದಿ… ಯಾವಾಗ ಹುಡುಗಿಯರಿಬ್ಬರು ಜಗಳ ಆಡಲು ಆರಂಭಿಸಿದರೂ ಅದನ್ನು ನೋಡಿದ ಹುಡುಗ ಅಲ್ಲಿಂದ ಕಾಲ್ಕಿತ್ತು ಪರಾರಿಯಾಗಿದ್ದಾನೆ. ಜಡೆ ಜಗಳ ನೋಡಿದ ಪೊಲೀಸರು ಇಬ್ಬರನ್ನು ಠಾಣೆಗೆ ಕರೆದೊಯ್ದು ಬುದ್ಧಿ ಮಾತು ಹೇಳಿ ಬಿಟ್ಟು ಕಳುಹಿಸಿದ್ದಾರೆ.(ಏಜೆನ್ಸೀಸ್​)
ಸೋನಾಲಿ ಸಾವಿನ ಕೇಸ್​: ತಪ್ಪೊಪ್ಪಿಕೊಂಡ ಆರೋಪಿಗಳು, ಹೋಟೆಲ್​ ಮಾಲೀಕ ಸೇರಿ ಇನ್ನಿಬ್ಬರ ಬಂಧನ

ಲೈಗರ್​ ಸಿನಿಮಾ ಸೋಲು: ನಟಿ ಅನಸೂಯ ವಿರುದ್ಧ ಮುಗಿಬಿದ್ದ ವಿಜಯ್​ ದೇವರಕೊಂಡ ಫ್ಯಾನ್ಸ್!

ತರಬೇತಿ ನಿರತ 500 ಐಎಎಸ್ ಅಧಿಕಾರಿಗಳಿಗೆ ಗ್ರಾಪಂ ಅಧ್ಯಕ್ಷರಿಂದ ಪಾಠ! ವಿಜಯನಗರ ಜಿಲ್ಲೆಯ ಮಹೇಂದ್ರಗೆ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
