ಹೈದರಾಬಾದ್​:ಇತ್ತೀಚೆಗೆ ಪ್ಯಾನ್​ ಇಂಡಿಯಾ ಸಿನಿಮಾಗಳ ಭರಾಟೆ ಜೋರಾಗಿದೆ. ಸ್ಯಾಂಡಲ್​ವುಡ್​ನಲ್ಲಿ ಕೆಜಿಎಫ್​ ನಂತರ ಅನೇಕ ಚಿತ್ರಗಳು ಪ್ಯಾನ್​ ಇಂಡಿಯಾ ಕಲ್ಪನೆಯಲ್ಲಿ ಸಿದ್ಧವಾಗುತ್ತಿವೆ. ಬಾಲಿವುಡ್​, ಟಾಲಿವುಡ್​, ಕಾಲಿವುಡ್​ ಹಾಗೂ ಮಾಲಿವುಡ್​ನಲ್ಲೂ ಸಾಕಷ್ಟು ಪ್ಯಾನ್​ ಇಂಡಿಯಾ ಸಿನಿಮಾಗಳು ತಯಾರಾಗುತ್ತಿವೆ. ಆದರೆ, ಕೆಲ ನಿರ್ಮಾಪಕರು ತಮ್ಮ ಚಿತ್ರವನ್ನು ಪ್ರಚಾರ ಮಾಡಿಕೊಳ್ಳಲು ಹಣಗಳಿಕೆಯ ಬಗ್ಗೆ ನಕಲಿ ವರದಿಯನ್ನು ನೀಡುತ್ತಿದ್ದಾರೆ ಎಂದು ನಟ ಸಿದ್ಧಾರ್ಥ್​ ಆರೋಪ ಮಾಡಿದ್ದು, ಕೆಲವರಿಗೆ ನೇರವಾಗಿಯೇ ಪ್ರಶ್ನೆ ಕೇಳಿದ್ದಾರೆ.
ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ಹಣಗಳಿಕೆಯ ಬಗ್ಗೆ ಸಿದ್ಧಾರ್ಥ್ ಮಾಡಿರುವ ಟ್ವೀಟ್ ಸಂಚಲನ ಮೂಡಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ಹಣಗಳಿಕೆಯ ವರದಿಯನ್ನು ನಕಲಿ ಮಾಡಲು ಎಷ್ಟು ಕಮಿಷನ್ ತೆಗೆದುಕೊಳ್ಳಲಾಗುತ್ತಿದೆ? ಸಾಕಷ್ಟು ದಿನಗಳಿಂದ ನಿರ್ಮಾಪಕರು ಬಾಕ್ಸ್​ಆಫೀಸ್​ನ ನಕಲಿ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ. ಪ್ಯಾನ್​ ಇಂಡಿಯಾದ ಪ್ರಾಮಾಣಿಕತೆ ಏನಿದೆ? ಇತ್ತೀಚಿನ ದಿನಗಳಲ್ಲಿ ವ್ಯಾಪಾರ ಸಮುದಾಯ ಮತ್ತು ಮಾಧ್ಯಮಗಳು ಕೂಡ ತಮ್ಮ ಅಧಿಕೃತ ಅಂಕಿಅಂಶಗಳನ್ನು ಪ್ರಾರಂಭಿಸಿವೆ. ಎಲ್ಲ ಭಾಷೆಗಳು, ಎಲ್ಲ ಇಂಡಸ್ಟ್ರಿಗಳು ಒಂದೇ ಎನ್ನುವ ಮೂಲಕ ಪ್ಯಾನ್​ ಇಂಡಿಯಾ ಎಂಬುದು ಅಪ್ರಾಮಾಣಿಕತೆ ಎಂದು ಸಿದ್ಧಾರ್ಥ್​ ಟ್ವೀಟ್​ ಮಾಡಿದ್ದಾರೆ.
https://twitter.com/Actor_Siddharth/status/1473547222801260546?s=20
ಸಿದ್ಧಾರ್ಥ್​ ಟ್ವೀಟ್​ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ಯಾನ್​ ಇಂಡಿಯಾ ಸಿನಿಮಾಗಳ ಬಾಕ್ಸ್​ಆಫೀಸ್​ ವರದಿ ನಕಲಿ ಎಂದು ನೇರವಾಗಿಯೇ ಹೇಳಿದ್ದಾರೆ. ಅಧಿಕೃತ ಅಂಕಿ-ಅಂಶಗಳನ್ನು ಮರೆಮಾಚುತ್ತಿದ್ದಾರೆ. ನಕಲಿ ವರದಿಯ ಮೂಲಕ ಚಿತ್ರದ ಪ್ರಚಾರ ಮಾಡುವ ದುರುದ್ದೇಶವಿದೆ ಎನ್ನುವ ಮೂಲಕ ಸಿದ್ಧಾರ್ಥ್​ ಪರೋಕ್ಷವಾಗಿ ಪ್ಯಾನ್​ ಇಂಡಿಯಾ ಸಿನಿಮಾಗಳ ಪ್ರಾಮಾಣಿಕತೆಯನ್ನು ಪ್ರಶ್ನೆ ಮಾಡಿದ್ದಾರೆ.(ಏಜೆನ್ಸೀಸ್​)
ಅಕ್ರಮ ಸಂಬಂಧದಿಂದ ಹುಟ್ಟಿದ ಮಗುವನ್ನು ನೀರಲ್ಲಿ ಮುಳುಗಿಸಿ ಕೊಂದು ನಾಲೆಗೆ ಎಸೆದ ಡಬಲ್‌ ಗ್ರಾಜ್ಯುಯೇಟ್‌ ಅಮ್ಮ!

ಗ್ರಾಪಂ ಅಕ್ರಮಗಳ ವಿರುದ್ಧ ದೂರು ನೀಡಿದ RTI ಕಾರ್ಯಕರ್ತನ ಕೈಕಾಲು ಮುರಿದು ಮೊಳೆ ಹೊಡೆದ ದುಷ್ಕರ್ಮಿಗಳು

ಈ ರಾಷ್ಟ್ರದ ವಿಡಿಯೋಗಳನ್ನು ನೋಡಿದ 7 ಮಂದಿಗೆ ಗಲ್ಲುಶಿಕ್ಷೆ: ಉ. ಕೊರಿಯಾದ ಕರಾಳ ಮುಖ ಅನಾವರಣ

ಕರೆಂಟ್‌ ಬಿಲ್‌ ಬಾಕಿ ಉಳಿಸಿಕೊಂಡಿರೋರ ಪಟ್ಟಿ ನೋಡಿದ ಇಲಾಖೆ ಶಾಕ್‌! ಟಾಪ್‌ 1 ಸ್ಥಾನದಲ್ಲಿ ಸಚಿ‌‌‌ವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − twelve =
Remember me
