ನವದೆಹಲಿ:ಮೆಟಾ ಒಡೆತನದ ಭಾರತದ ಅತ್ಯಂತ ಜನಪ್ರಿಯ ಮಸೇಜಿಂಗ್​ ವೇದಿಕೆ ವಾಟ್ಸ್​ಆ್ಯಪ್​ ತನ್ನ ಬಳಕೆದಾರರಿಗೆ “ಕಮ್ಯೂನಿಟೀಸ್​” ಹೆಸರಿನ ಹೊಸ ಫೀಚರ್​ ಅನ್ನು ಪರಿಚಯಿಸಲಿದೆ. ಶೀಘ್ರದಲ್ಲಿ ಈ ಹೊಸ ಫೀಚರ್​ ಜಾಗತಿಕವಾಗಿ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲೂ ಲಭ್ಯವಾಗಲಿದೆ.
ಬಳಕೆದಾರರು ತಮ್ಮ ಗ್ರೂಪ್​ಗಳನ್ನು ಸಂಘಟಿಸಲು ನೆರವಾಗುವಂತಹ ಹೊಸ ಫೀಚರ್​ ಅನ್ನು ವಾಟ್ಸ್​ಆ್ಯಪ್​ ಪರೀಕ್ಷಿಸುತ್ತಿದೆ. ಇದಲ್ಲದೆ, ಮೆಸೇಜ್​ಗಳಿಗೆ ಬಹು ನಿರೀಕ್ಷಿತ ಪ್ರತಿಕ್ರಿಯೆ ಒಳಗೊಂಡಂತೆ ವಾಟ್ಸ್​ಆ್ಯಪ್​ ಗ್ರೂಪ್​ಗಳಿಗೆ ಇತರೆ ನಾಲ್ಕು ಹೊಸ ಅಪ್​ಡೇಟ್​ಗಳನ್ನು ವಾಟ್ಸ್​ಆ್ಯಪ್​ ನೀಡಲಿದೆ.
ಉದ್ಯೋಗ ಸ್ಥಳ ಹಾಗೂ ಶಾಲೆಗಳಿಗಾಗಿ ಕಾರ್ಯನಿರ್ವಹಿಸವಂತಹ ಗ್ರೂಪ್​ಗಳಿಗೆ ನೆರವಾಗುವುದೇ ಹೊಸ ಫೀಚರ್​​ನ ಗುರಿಯಾಗಿದೆ. ವಿವಿಧ ಗ್ರೂಪ್​ಗಳನ್ನು ಒಂದೇ ಸೂರಿನಡಿ ತರಲು ಈ ಫೀಚರ್ ಬಳಕೆದಾರರಿಗೆ ನೆರವಾಗಲಿದೆ. ಇದಲ್ಲದೆ, 256 ಸದಸ್ಯ ಸಾಮರ್ಥ್ಯ ಹೊಂದಿರುವ ವಾಟ್ಸ್​ಆ್ಯಪ್​ ಗ್ರೂಪ್​ಗಳ ಸಾವಿರಾರು ಸದಸ್ಯರಿಗೆ ಎಚ್ಚರಿಕೆ ಸಂದೇಶವನ್ನು ಕಳುಹಿಸಲು ಗ್ರೂಪ್​ ಅಡ್ಮಿನ್​ಗಳಿಗೆ ಕಮ್ಯೂನಿಟಿ ಫೀಚರ್​ ಸಹಾಯವಾಗಲಿದೆ. ​
ಸದ್ಯ ಈ ಫೀಚರ್​ ಬೆಟಾ ಹಂತದಲ್ಲಿದ್ದು, ಕೆಲವೇ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಈ ಫೀಚರ್​ ಅನ್ನು ಉಚಿತವಾಗಿ ನೀಡಲು ಕಂಪನಿ ಯೋಜಿಸಿದೆ. ಆದರೆ, ಭವಿಷ್ಯದಲ್ಲಿ ಈ ಫೀಚರ್​ ಪಡೆಯಲು ದರ ನಿಗದಿ ಮಾಡುವುದನ್ನು ತಳ್ಳಿ ಹಾಕುವಂತಿಲ್ಲ.
ಈ ಹೊಸ ಫೀಚರ್​ ಕೂಡ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿರುತ್ತದೆ. ಯಾವುದೇ ಮಾಹಿತಿ ಸೋರಿಕೆಯಾಗುವುದಿಲ್ಲ. ಬಳಕೆದಾರರ ಗೌಪ್ಯತೆಯನ್ನು ಗೌರವಿಸುತ್ತದೆ ಎಂದು ವಾಟ್ಸ್​ಆ್ಯಪ್​ ಮುಖ್ಯಸ್ಥ ವಿಲ್​ ಕ್ಯಾತ್‌ಕಾರ್ಟ್ ತಿಳಿಸಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಈ ಫೀಚರ್​ ಬಳಕೆಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಕಮ್ಯೂನಿಟಿ ಫೀಚರ್​ ಮಾತ್ರವಲ್ಲದೆ, ವ್ಯಾಟ್ಸ್​ಆ್ಯಪ್​ ಶೀಘ್ರದಲ್ಲೇ ಈ ಕೆಳಕಂಡ ನಾಲ್ಕು ಹೊಸ ಫೀಚರ್​ಗಳನ್ನೂ ಪರಿಚಯಿಸಲಿದೆ1. ಚಾಟ್ಸ್​ ಮೇಲಿನ ಸಂದೇಶಗಳಿಗೆ ವಿಭಿನ್ನ ಎಮೋಜಿಗಳು2. ಎಲ್ಲ ಬಳಕೆದಾರರ ಚಾಟ್ಸ್​ನಲ್ಲಿರುವ ಸಮಸ್ಯಾತ್ಮಕ ಸಂದೇಶಗಳನ್ನು ಗ್ರೂಪ್​ ಅಡ್ಮಿನ್​ ಡಿಲೀಟ್​ ಮಾಡುವ ಅವಕಾಶ3. ಫೈಲ್​ ಶೇರ್​ ಮಾಡುವ ಗಾತ್ರವನ್ನು 2ಜಿಬಿವರೆಗೂ ವಿಸ್ತರಣೆ4. 32 ಜನರಿಗೆ ಒನ್​ ಟ್ಯಾಪ್ ಧ್ವನಿ ಕರೆಗಳು
48 ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ: ಸ್ಕಾಟ್​ಲೆಂಡ್​ನಲ್ಲಿ ಸಿಕ್ಕಿಬಿದ್ದ ಭಾರತೀಯ ಮೂಲದ ವೈದ್ಯ

ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟು PSIಗೆ ಬೆವರಿಳಿಸಿ ಭಾರೀ ಸುದ್ದಿಯಾಗಿದ್ದ ತುಮಕೂರು SPಗೆ ಆತ್ಮಹತ್ಯೆ ಬೆದರಿಕೆ!

ಮಹಾರಾಷ್ಟ್ರದಲ್ಲಿ ಪ್ರತಿ ಲೀಟರ್​ಗೆ 1 ರೂಪಾಯಿಯಂತೆ ಪೆಟ್ರೋಲ್​ ಮಾರಾಟ! ಗ್ರಾಹಕರು ಫುಲ್​ ಖುಷ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + three =
Remember me
