ಕೊಚ್ಚಿ:ಹೊಸ ಮಾದರಿಯ ಸೈಬರ್​ ಕ್ರೈಂಗೆ ಮುಂದಾಗಿರುವ ವಂಚಕರು ವಾಟ್ಸ್​ಆ್ಯಪ್​ ಖಾತೆಯನ್ನು ಹೈಜಾಕ್​ ಮಾಡಿ ಫೋನ್​ ಕಾಲ್​ ಅಥವಾ ಎಸ್​ಎಂಎಸ್​ ಮೂಲಕ ಒಟಿಪಿ ಪಡೆದು, ವಿವಿಧ ಅಪರಾಧಗಳನ್ನು ಎಸಗಲು ಮುಂದಾಗಿರುವುದಾಗಿ ಕೇರಳ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
“ವಾಟ್ಸ್​​ಆ್ಯಪ್​ ಸಪೋರ್ಟ್​ ಸರ್ವೆ” ಸೋಗಿನಲ್ಲಿ ವಂಚಕರು ಫೋನ್​ ಕಾಲ್​ ಮೂಲಕ ಹಗರಣ ನಡೆಸಲು ಮುಂದಾಗಿದ್ದಾರೆ. ವಂಚಕರು ಸಂಭಾಷಣೆಯ ಸಮಯದಲ್ಲಿಯೇ ಕರೆ ಮಾಡಿದವರ ಸಂಖ್ಯೆಯಲ್ಲಿ ನಕಲಿ ವ್ಯಾಟ್ಸ್​ಆ್ಯಪ್​ ಖಾತೆಯನ್ನು ರಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ. ಇದೇ ಸಂದರ್ಭದಲ್ಲಿ ಒಟಿಪಿ ಕೇಳುತ್ತಾರೆ. ಒಂದು ವೇಳೆ ಒಟಿಪಿ ನೀಡಿದರೆ, ಅವರು ನಿಮ್ಮ ವಾಟ್ಸ್​ಆ್ಯಪ್​ ಒಳಗೆ ಪ್ರವೇಶಿಸಿ ಅಲ್ಲಿರುವ ಎಲ್ಲ ದಾಖಲೆಗಳನ್ನು ಕದಿಯಲಿದ್ದಾರೆ.
ನಕಲಿ ವಾಟ್ಸ್​ಆ್ಯಪ್​ ಖಾತೆಗಳನ್ನು ಹಣಕಾಸು ವಂಚನೆಗೆ ಬಳಸಲಾಗುತ್ತಿದೆ. ನಕಲಿ ಖಾತೆಯ ಮೂಲಕ ಬಳಕೆದಾರರ ನಿಕಟ ಸ್ನೇಹಿತರು ಮತ್ತು ಸಂಬಂಧಿಕರನ್ನು ತಲುಪುತ್ತಾರೆ ಮತ್ತು ಆರ್ಥಿಕ ಸಹಾಯವನ್ನು ಕೇಳುತ್ತಾರೆ. ಆದರೆ, ಅಧಿಕೃತ ಖಾತೆಯಿಂದಲೇ ವಿನಂತಿ ಬಂದಂತೆ ನಂಬಿ ಅನೇಕ ಜನರು ಹಣವನ್ನು ವರ್ಗಾಯಿಸುತ್ತಾರೆ.
ಇಷ್ಟೇ ಅಲ್ಲದೆ, ವಂಚಕರು ಅಶ್ಲೀಲ ಪೋಸ್ಟರ್‌ಗಳನ್ನೂ ಕಳುಹಿಸುತ್ತಿದ್ದಾರೆ. ಈ ವಂಚನೆಯಲ್ಲಿ ಯಾರಾದರೂ ಸಿಕ್ಕಿಬಿದ್ದಿರುವುದು ಕಂಡು ಬಂದಲ್ಲಿ ಕೂಡಲೇ ಇ-ಮೇಲ್ ಮೂಲಕ ವಾಟ್ಸ್​ಆ್ಯಪ್ ಕಸ್ಟಮರ್ ಕೇರ್​ಗೆ ದೂರು ನೀಡಬೇಕು ಎಂದು ಪೊಲೀಸರು ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಒಟಿಪಿ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಮತ್ತು ವಾಟ್ಸ್​ಆ್ಯಪ್​ ಎರಡು-ಹಂತದ ಪರಿಶೀಲನೆ’ ಅನ್ನು ಆನ್ ಮಾಡಿ ಎಂದು ಪೊಲೀಸರು ಗ್ರಾಹಕರನ್ನು ವಿನಂತಿಸಿದ್ದಾರೆ.(ಏಜೆನ್ಸೀಸ್​)
ಹಿಜಾಬ್ ಧರಿಸಲು ಅವಕಾಶ ನೀಡದಿದ್ದಕ್ಕೆ ಪರೀಕ್ಷೆ ಬಹಿಷ್ಕರಿಸಿ ಹೊರ ನಡೆದ ವಿದ್ಯಾರ್ಥಿನಿಯರು

ಕೋವಿಡ್​ ಸಾವಿನ ಪ್ರಮಾಣ ಕಡಿಮೆ ಮಾಡುವಲ್ಲಿ ಸರ್ಕಾರ ಯಶಸ್ವಿ: ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್

ರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್ ನಿಷೇಧಿಸಿ ಹೊರಡಿಸಿದ್ದ ಸರ್ಕಾರದ ಆದೇಶ ರದ್ದು: ಹೈಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 14 =
Remember me
