ನವದೆಹಲಿ:ಫೆ. 24ರಂದು ಆರಂಭವಾದ ಯೂಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧ 8 ದಿನಗಳಾದರೂ ಮುಂದುವರಿದಿದ್ದು, ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಯುದ್ಧದಿಂದ ಜಾಗತಿಕವಾಗಿ ಪರಿಣಾಮ ಬೀರಿದ್ದು, ಭಾರತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ.
ಯೂಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧ ಜಾಗತಿಕ ಆರ್ಥಿಕತೆಯು ಕೂಡ ತುಂಬಾ ಕಳವಳಕಾರಿಯಾಗಿದೆ. ನೈಸರ್ಗಿಕ ಅನಿಲದಿಂದಿಡಿದು ಗೋಧಿಯು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಭವಿಷ್ಯದಲ್ಲಿ ಏರಿಕೆಯಾಗಲಿವೆ.
ಗೋಧಿ ರಫ್ತಿನಲ್ಲಿ ರಷ್ಯಾ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಉಕ್ರೇನ್​ 4ನೇ ಸ್ಥಾನದಲ್ಲಿದೆ. ಉಭಯ ದೇಶಗಳು ಗೋಧಿಯ ಒಟ್ಟು ಜಾಗತಿಕ ರಫ್ತಿನ ಕಾಲು ಭಾಗವನ್ನು ಹೊಂದಿವೆ. ಇದೀಗ ಯುದ್ಧ ಪರಿಣಾಮ ಗೋಧಿ ಬೆಲೆ ಪ್ರತಿ ಕ್ವಿಂಟಾಲ್​ಗೆ 300 ರೂಪಾಯಿ ಏರಿಕೆಯಾಗಿದ್ದು, 2,300 ರೂಪಾಯಿಗೆ ತಲುಪಿದೆ. ಏಪ್ರಿಲ್‌ನಿಂದ ಹೊಸ ಪೂರೈಕೆಯ ಆಗಮನದವರೆಗೆ ಇದೆ ಬೆಲೆ ಮುಂದುವರಿಯುವ ಸಾಧ್ಯತೆಯಿದೆ.
ಸೂರ್ಯಕಾಂತಿ ಬೀಜಕ್ಕಾಗಿ ಭಾರತ ಹೆಚ್ಚಾಗಿ ಯೂಕ್ರೇನ್​ ಮತ್ತು ರಷ್ಯಾವನ್ನು ಅವಲಂಬಿಸಿರುವುದರಿಂದ ಸಹಜವಾಗಿಯೇ ಸೂರ್ಯಕಾಂತಿ ಎಣ್ಣೆಯ ದರ ಏರಿಕೆ ಮೇಲೆ ಪರಿಣಾಮ ಬೀರಲಿದೆ. ಕಳೆದ ಕೆಲವು ವರ್ಷಗಳಿಂದ ಭಾರತದ ಸೂರ್ಯಕಾಂತಿ ಬೀಜ ಉತ್ಪಾದನೆಯು ಸುಮಾರು 60,000 ಟನ್‌ಗಳಷ್ಟಿರುವ ಕಾರಣ ಆಮದುಗಳು ಕಡಿಮೆ ವೆಚ್ಚದಾಯಕ ಆಯ್ಕೆಯಾಗಿದೆ.
ರಷ್ಯಾ ಮೇಲೆ ಅನೇಕ ದೇಶಗಳು ಆರ್ಥಿಕ ನಿರ್ಬಂಧ ಹೇರಿರುವ ಕಾರಣ ಮುಂಬರುವ ದಿನಗಳಲ್ಲಿ ಆಟೋಮೋಟಿವ್ ಎಕ್ಸ್​ಹಾಸ್ಟ್​ ಸಿಸ್ಟಮ್​ ಮತ್ತು ಮೊಬೈಲ್​​ ಫೋನ್​ನಲ್ಲಿ ಬಳಸುವ​ ಪಲ್ಲಾಡಿಯಮ್ ಲೋಹದ ದರ ಏರಿಕೆಯಾಗುವ ಭೀತಿ ಇದೆ. ಪಲ್ಲಾಡಿಯಮ್ ರಫ್ತಿನಲ್ಲಿ ಜಾಗತಿಕವಾಗಿ ರಷ್ಯಾ ಮೊದಲ ಸ್ಥಾನದಲ್ಲಿದೆ.(ಏಜೆನ್ಸೀಸ್​)
ಹೊಸಬರ ಸಿನಿಮಾಗೆ ಸಾಥ್ ಕೊಟ್ಟ ಡಾಲಿ ಧನಂಜಯ್ ಹಾಗೂ ಲೂಸ್ ಮಾದ ಯೋಗಿ!

ಕೇಂದ್ರಕ್ಕೆ ಹೇಗೆ ಧನ್ಯವಾದ ಸಲ್ಲಿಸಬೇಕೋ ತಿಳಿಯುತ್ತಿಲ್ಲ ಎನ್ನುತ್ತಲೇ ಪರಿಹಾರಿ ನಿಧಿಗೆ ಧನ ಸಹಾಯ ಮಾಡಿದ ಅಪ್ಪ…

ಸೊಂಟದ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳಲು ಪಾರ್ಲರ್​ಗೆ ಹೋದ ಕೇರಳ ಮಹಿಳೆಯ ಕಣ್ಣೀರಿನ ಕತೆ ಇದು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:four × 2 =
Remember me
