ಹೈದರಾಬಾದ್​:ಗರ್ಲ್​ಫ್ರೆಂಡ್​ ಮೃತಪಟ್ಟ ಸುದ್ದಿ ಕೇಳಿ ಅದನ್ನು ಅರಗಿಸಿಕೊಳ್ಳದ ಯುವಕನೊಬ್ಬ ನೀನು ಇಲ್ಲದ ಜೀವನ ಖಾಲಿ ಖಾಲಿ…ನಾನು ಕೂಡ ನಿನ್ನೊಂದಿಗೆ ಬರುತ್ತಿದ್ದೇನೆ ಎಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ತೆಲಂಗಾಣದ ಮಂಚಿರಾಳ ಜಿಲ್ಲೆಯಲ್ಲಿ ಕಳೆದ ಬುಧವಾರ (ಫೆ.9) ನಡೆದಿದೆ.
ಫೆ. 2ರಂದು ರವಿ (18) ಎಂಬಾತ ಕುಶ್ನಪಲ್ಲಿ ಗ್ರಾಮದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಚಿಕಿತ್ಸೆ ಫಲಕಾರಿಯಾಗದೇ ಫೆ.9ರಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ವೆಮನಪಲ್ಲಿ ಮಂಡಲದ ಬುಯ್ಯರಮ್​ ಗ್ರಾಮದ ಸತ್ಯಶ್ರೀ ಎಂಬಾಕೆಯನ್ನು ಸುಮಾರು ಒಂದು ವರ್ಷದಿಂದ ರವಿ ಲವ್​ ಮಾಡುತ್ತಿದ್ದ. ಆದರೆ, ಫೆ. 2ರಂದು ಸತ್ಯಶ್ರೀ ಅನಾರೋಗ್ಯದಿಂದ ಮೃತಪಟ್ಟಿದ್ದಳು.
ಸತ್ಯಶ್ರೀ ಮೃತಪಟ್ಟ ದಿನವೇ ವಿಷ ಕುಡಿದು ಅಸ್ವಸ್ಥಗೊಂಡಿದ್ದ ರವಿಯನ್ನು ಕುಟುಂಬಸ್ಥರು ಮಂಚಿರಳ ಆಸ್ಪತ್ರೆ ಸೇರಿದ್ದ. ಬಳಿಕ ಕರೀಮ್​ನಗರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇ9ದೀಗ ಮೃತಪಟ್ಟಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.(ಏಜೆನ್ಸೀಸ್​)
ಐಪಿಎಲ್​ ಮೆಗಾ ಹರಾಜು 2022: ಇಂದಿನ ಹರಾಜಿನಲ್ಲಿ ಸೇಲಾದ ಆಟಗಾರರ ಪಟ್ಟಿ ಇಲ್ಲಿದೆ…

ಭೀಕರ ಅಪಘಾತದಿಂದ ಸಂಪೂರ್ಣ ಚೇತರಿಸಿಕೊಂಡ ಬೆನ್ನಲ್ಲೇ ಬೋಲ್ಡ್​ ಫೋಟೋ ಹರಿಬಿಟ್ಟ ಯಶಿಕಾ!

ಭೀಕರ ಅಪಘಾತ: ಪ್ರಯಾಣದ ಮಧ್ಯೆ ಜಗಳವಾಡಿದ ಯುವಕರಿಬ್ಬರ ಮೇಲೆ ಸೇಡು ತೀರಿಸಿಕೊಂಡ KSRTC ಚಾಲಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − seven =
Remember me
