ನವದೆಹಲಿ:ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಪಶ್ಚಿಮ ಬಂಗಾಳದ ಸಚಿವ ಹಾಗೂ ತೃಣಮೂಲ ಕಾಂಗ್ರೆಸ್​ ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರನ್ನು ಬಂಧಿಸಿದೆ. ಸಚಿವರ ಆಪ್ತೆಯ ಮನೆಯ ಮೇಲೆ ದಾಳಿ ಮಾಡಿ 20 ಕೋಟಿ ರೂಪಾಯಿ ನಗದು ವಶ ಪಡಿಸಿಕೊಂಡ ಒಂದು ದಿನದ ಬೆನ್ನಲ್ಲೇ ಸಚಿವ ಚಟರ್ಜಿ ಅವರನ್ನು ಇಡಿ ಬಂಧಿಸಿದೆ.
ಎಸ್‌ಎಸ್‌ಸಿ (ಸ್ಕೂಲ್​ ಸರ್ವೀಸ್​ ಕಮಿಷನ್​​) ಹಗರಣ ಸಂಬಂಧ ಇಡಿ ಅಧಿಕಾರಿಗಳು ಶುಕ್ರವಾರ (ಜುಲೈ 22) ಪಾರ್ಥ ಚಟರ್ಜಿ ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿ ಅವರ ನಿವಾಸದ ಮೇಲೆ ದಾಳಿ ಮಾಡಿದಾಗ 20 ಕೋಟಿ ರೂಪಾಯಿ ನಗದು ಮತ್ತು 20ಕ್ಕೂ ಹೆಚ್ಚು ಮೊಬೈಲ್​ ಫೋನ್​​ಗಳನ್ನು ಪತ್ತೆಯಾಗಿದ್ದವು. ಈ ಪ್ರಕರಣ ಸಂಬಂಧ ಚಟರ್ಜಿ ಅವರನ್ನು 26 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಅವರ ಆಪ್ತೆ ಅರ್ಪಿತಾರನ್ನು ಬಂಧಿಸಲಾಗಿದೆ.
ಯಾರು ಈ ಅರ್ಪಿತಾ ಮುಖರ್ಜಿ?ಇದೀಗ ಸಾಮಾಜಿಕ ಜಾಲತಾಣದಲ್ಲಿ ಅರ್ಪಿತಾ ಮುಖರ್ಜಿ ಯಾರು? ಸಚಿವ ಚಟರ್ಜಿ ಮತ್ತು ಅವರಿಗು ಇರುವ ಸಂಬಂಧ ಏನು? ಎಂಬ ಸಾಕಷ್ಟು ಪ್ರಶ್ನೆಗಳು ಕೇಳಿಬರುತ್ತಿವೆ. ಅದಕ್ಕೆ ಉತ್ತರ ಇಲ್ಲಿದೆ. ಇಡಿ ಅಧಿಕಾರಿಗಳ ಪ್ರಕಾರ ಅರ್ಪಿತಾ, ಸಚಿವ ಚಟರ್ಜಿ ಅವರ ನಿಕಟವರ್ತಿ. ಅಲ್ಲದೆ, ಆಕೆ ನಟಿಯು ಹೌದು. ಒಡಿಯಾ, ಬಂಗಾಳಿ ಮತ್ತು ಕೆಲ ತಮಿಳು ಸಿನಿಮಾಗಳಲ್ಲಿ ಈಕೆ ನಟಿಸಿದ್ದಾಳೆ.
ಅರ್ಪಿತಾ ಫೇಸ್​ಬುಕ್​ ಬಯೋ ಪ್ರಕಾರ, ಆಕೆ ಬಹುಮುಖ ಪ್ರತಿಭೆಯ ಬಹುಮುಖ ನಟಿ. ಹಲವು ಟಾಲಿವುಡ್​ ಸಿನಿಮಾಗಳಲ್ಲೂ ನಟಿಸಿದ್ದಾರಂತೆ. ಅವರು 2009 ರಲ್ಲಿ ಬಂಗಾಳಿ ಸೂಪರ್‌ಸ್ಟಾರ್ ಪ್ರೊಸೆನ್‌ಜಿತ್ ಚಟರ್ಜಿ ಅವರೊಂದಿಗೆ ‘ಮಾಮಾ ಭಗ್ನೆ’ ಮತ್ತು 2008 ರಲ್ಲಿ ನಟ ಜೀತ್ ಅವರೊಂದಿಗೆ ‘ಪಾರ್ಟ್‌ನರ್’ ಚಿತ್ರದಲ್ಲಿ ನಟಿಸಿದ್ದಾರೆ. ಇವರು 2019 ಮತ್ತು 2020ರಲ್ಲಿ ನಕ್ತಲಾ ಉದಯನ್ ಸಂಘ ಎಂಬ ಪಾರ್ಥ ಚಟರ್ಜಿಯವರ ದುರ್ಗಾಪೂಜಾ ಸಮಿತಿಯ ಪ್ರಚಾರದ ಪ್ರಮುಖರಾಗಿದ್ದಾರೆ. ಚಟರ್ಜಿ ಅವರು ಆಗಾಗ ಅರ್ಪಿತಾ ಮನೆಗೆ ಭೇಟಿ ನೀಡುತ್ತಿದ್ದರು. ಇಬ್ಬರು ಅನೇಕ ರಾಜಕೀಯ ಮತ್ತು ರಾಜಕೀಯೇತರ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಬ್ಬರ ನಡುವೆ ಹಣದ ವ್ಯವಹಾರವೂ ಇತ್ತೆಂದು ತಿಳಿದುಬಂದಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಇಡಿ, ಇಂದು ದಿಢೀರ್​ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ಬಂಗಾಳದ ಗ್ರೂಪ್ ‘ಸಿ’ ಮತ್ತು ‘ಡಿ’ ಹಾಗೂ ಸಹಾಯಕ ಶಿಕ್ಷಕರು ಮತ್ತು ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿನ ಹಗರಣದ ತನಿಖೆ ನಡೆಸುವಂತೆ ಕೋಲ್ಕತ ಹೈಕೋರ್ಟ್​ ನಿರ್ದೇಶಿಸಿತ್ತು. ಇದಾದ ಬಳಿಕ ಸಿಬಿಐ ಈ ಸಂಬಂಧ ಎಫ್​ಐಆರ್​ ದಾಖಲಿಸಿತ್ತು. ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದ ಬೆನ್ನಲ್ಲೇ ಪ್ರಕರಣದ ಮಧ್ಯಪ್ರವೇಶಿಸಿದ ಇಡಿ, ನಿನ್ನೆ ದಿಢೀರ್​ ದಾಳಿ ಮಾಡಿದೆ. ಈ ವೇಳೆ 20 ಕೋಟಿ ರೂಪಾಯಿ ನಗದು ಹಾಗೂ 20ಕ್ಕೂ ಹೆಚ್ಚು ಫೋನ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಬೆನ್ನಲ್ಲೇ ಸಚಿವ ಚಟರ್ಜಿ ಹಾಗೂ ಅರ್ಪಿತಾರನ್ನು ಇಡಿ ಬಂಧಿಸಿದೆ.
ಅಂದಹಾಗೆ ಚಟರ್ಜಿ ಅವರು ಪ್ರಸ್ತುತ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದಾರೆ. ಅವರು ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (ಡಬ್ಲ್ಯುಬಿಎಸ್‌ಎಸ್‌ಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಅರ್ಪಿತಾ ಮುಖರ್ಜಿ ಅಲ್ಲದೆ, ಬಂಗಾಳದ ಶಿಕ್ಷಣ ಸಚಿವ ಪರೇಶ್​ ಸಿ ಅಧಿಕಾರಿ ಮತ್ತು ಶಾಸಕ ಮಾಣಿಕ್​ ಭಟ್ಟಾಚಾರ್ಯ ಸೇರಿದಂತೆ ಇತರರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಡಿ ದಾಳಿಯನ್ನು ಖಂಡಿಸಿರುವ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಕೇಂದ್ರದ ಬಿಜೆಪಿ ಸರ್ಕಾರವು ತನ್ನ ರಾಜಕೀಯ ಎದುರಾಳಿಗಳಿಗೆ “ಕಿರುಕುಳ” ನೀಡುವ “ಕುತಂತ್ರ” ಎಂದು ಆರೋಪಿಸಿದೆ. ಚಟರ್ಜಿ ಅವರು ಯಾವುದೇ ಹಗರಣ ಮಾಡಿಲ್ಲ. ಅದು ಅವರ ಸ್ವಂತ ಹಣ ಎಂದಿದೆ. ಆದಾಗ್ಯೂ, ತೃಣಮೂಲವು ಅಧಿಕಾರಕ್ಕೆ ಬಂದ ನಂತರ ಪ್ರಾಥಮಿಕ, ಉನ್ನತ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತಗಳಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿದೆ ಎಂದು ಎಂದು ಬಿಜೆಪಿ ಆರೋಪಿಸಿದೆ.(ಏಜೆನ್ಸೀಸ್​)
ಆಪ್ತೆಯ ಮನೆಯಲ್ಲಿ 20 ಕೋಟಿ ನಗದು ಪತ್ತೆ: ಇಡಿ ಅಧಿಕಾರಿಗಳಿಂದ ಬಂಗಾಳ ಸಚಿವನ ಬಂಧನ

PHOTO! ಹಾಟ್​​​ ಅವತಾರದಲ್ಲಿ ದೀಕ್ಷಾ ಸೇಠ್​: ಬಿಕಿನಿ ಫೋಟೋ ಹರಿಬಿಟ್ಟ ಜಗ್ಗುದಾದನ ಬೆಡಗಿ

ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ

Sign in to your account
Please enter an answer in digits:twelve − 7 =
Remember me
