ಹೈದರಾಬಾದ್​:ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿಲ್ಲ ಮತ್ತು ಕಾಂಡೋಮ್​​ ಬಳಸುವುದರಲ್ಲಿ ಮುಸ್ಲಿಮರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎನ್ನುವ ಮೂಲಕ ಹೈದರಾಬಾದ್​ ಸಂಸದ ಅಸಾದುದ್ದೀನ್​ ಓವೈಸಿ, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಅವರ ಜನಸಂಖ್ಯಾ ನಿಯಂತ್ರಣ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಹೈದರಾಬಾದ್​ನಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋವೊಂದನ್ನು ಓವೈಸಿ ಟ್ವೀಟ್​ ಮಾಡಿದ್ದು, ದೇಶದಲ್ಲಿ ಮುಸ್ಲಿಮರ ಜನಸಖ್ಯೆ ಹೆಚ್ಚಾಗುತ್ತಿಲ್ಲ, ಬದಲಾಗಿ ಕುಸಿಯುತ್ತಿದೆ. ಮುಸ್ಲಿಮರಲ್ಲೂ ಮಕ್ಕಳ ನಡುವಿನ ಅಂತರ ಹೆಚ್ಚುತ್ತಿದೆ. ಹೆಚ್ಚಾಗಿ ಕಾಂಡೋಮ್ ಬಳಸುತ್ತಿರುವವರು ಯಾರು? ನಾವುಗಳು. ಆದರೆ, ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದಿಲ್ಲ ಎಂದು ವಿಡಿಯೋದಲ್ಲಿ ಓವೈಸಿ ಹೇಳಿದ್ದಾರೆ.
Live: Jalsa Rahmatul lil aalameen, Darussalam – Hyd | 2022https://t.co/ibMrytkwbD#milad#Mawlid#ProphetForAll
— Asaduddin Owaisi (@asadowaisi)October 8, 2022

ಈ ಹಿಂದೆ ಆರ್​ಎಸ್​ಎಸ್​ ವಾರ್ಷಿಕ ದಸರಾ ಸಮಾವೇಶದಲ್ಲಿ ಮಾತನಾಡಿದ್ದ ಮೋಹನ್​ ಭಾಗವತ್​, ಎಲ್ಲರಿಗೂ ಅನ್ವಯಿಸುವ ಜನಸಂಖ್ಯಾ ನಿಯಂತ್ರಣ ನೀತಿ ಭಾರತಕ್ಕೆ ಅಗತ್ಯವಿದೆ ಎಂದಿದ್ದರು. ಅಲ್ಲದೆ, ಜನಸಂಖ್ಯೆಯ ನಿಯಂತ್ರಣದ ಜೊತೆಗೆ ಧಾರ್ಮಿಕ ಆಧಾರದ ಮೇಲಿನ ಸಮತೋಲನವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದಿದ್ದರು.
ಮೋಹನ್​ ಭಾಗವತ್​ ಜನಸಂಖ್ಯಾ ನಿಯಂತ್ರಣದ ಬಗ್ಗೆ ಮಾತನಾಡಿದ್ದನ್ನು ವಿರೋಧಿಸಿರುವ ಓವೈಸಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆ-5 ವರದಿಯನ್ನು ಉಲ್ಲೇಖಿಸಿ, ಒಟ್ಟು ಫಲವತ್ತತೆ ದರ (ಟಿಎಫ್​ಆರ್​) ಮುಸ್ಲಿಮರಲ್ಲೇ ಹೆಚ್ಚಾಗಿ ಕುಸಿದಿದೆ ಎಂದರು. ಅಲ್ಲದೆ, 2000 ದಿಂದ 2019ರವರೆಗೆ ಲಕ್ಷಾಂತರ ಹಿಂದು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ. ಇದರು ಕೂಡ ಸರ್ಕಾರವೇ ನೀಡಿರುವ ಅಂಕಿ-ಅಂಶವಾಗಿದೆ. ಆದರೆ, ಮೋಹನ್​ ಭಾಗವತ್​ ಅವರು ಈ ಬಗ್ಗೆ ಮಾತನಾಡುವುದಿಲ್ಲ ಎಂದು ತಿರುಗೇಟು ನೀಡಿದರು.
ನೆನಪಿಡಿ, ಹಿಂದು ರಾಷ್ಟ್ರವು ಭಾರತೀಯ ರಾಷ್ಟ್ರೀಯತೆಗೆ ವಿರುದ್ಧವಾಗಿದೆ. ಇದು ಭಾರತದ ವಿರುದ್ಧವಾಗಿದೆ ಎಂದು ಓವೈಸಿ ಹೇಳಿದರು.(ಏಜೆನ್ಸೀಸ್​)
VIDEO| ಗಂಧದ ಗುಡಿ ಟ್ರೈಲರ್​ಗೆ ಮೋದಿ ಮೆಚ್ಚುಗೆ: ಅಪ್ಪುವಿನ ಕೊನೆಯ ಪ್ರಯತ್ನಕ್ಕೆ ಶುಭಕೋರಿದ ಪ್ರಧಾನಿ

ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಸಸ್ಪೆಂಡ್​!

VIDEO| ಗಂಧದ ಗುಡಿ ಟ್ರೈಲರ್​ ಬಿಡುಗಡೆ: ಅ. 28ಕ್ಕೆ ತೆರೆಯ ಮೇಲೆ ರಾರಾಜಿಸಲಿದೆ ಅಪ್ಪುವಿನ ಅದ್ಭುತ ಕನಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 11 =
Remember me
