ನವದೆಹಲಿ:ತನ್ನ ಪಕ್ಷದ ಪ್ರಮುಖ ನಾಯಕರ ಹುಟ್ಟುಹಬ್ಬದಂದು ಮರೆಯದೇ ಟ್ವೀಟ್​ ಮಾಡಿ ಶುಭಕೋರುವ ಪ್ರಧಾನಿ ನರೇಂದ್ರ ಮೋದಿ, ನಿನ್ನೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹುಟ್ಟುಹಬ್ಬದಂದು ಶುಭಕೋರದೇ ಇರುವುದು ಎಲ್ಲರ ಹುಬ್ಬೇರಿಸಿದೆ.
ಮೂಲಗಳ ಪ್ರಕಾರ ಪ್ರಧಾನಿ ಮೋದಿ ಶನಿವಾರ ಆದಿತ್ಯನಾಥ್​ ಜತೆ ದೂರವಾಣಿ ಮೂಲಕ ಶುಭಕೋರಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ. ಕರೊನಾ ಎರಡನೇ ಅಲೆ ಬಂದಾಗಿನಿಂದ ಯಾರಿಗೂ ಪ್ರಧಾನಿ ಮೋದಿ ಟ್ವೀಟ್​ ಮಾಡಿಲ್ಲ. ಪ್ರತಿಪಕ್ಷದ ನಾಯಕರು ಸೇರಿದಂತೆ ಅವರಿಗೆ ನೀಡಲಾಗಿರುವ ಪ್ರಮುಖ ನಾಯಕರ ಪಟ್ಟಿಯಲ್ಲಿರುವ ಯಾರೊಬ್ಬರಿಗೂ ಕೆಲವು ವಾರಗಳಿಂದ ಹುಟ್ಟುಹಬ್ಬದಂದು ಶುಭಕೋರಿಲ್ಲ ಎಂದು ಪಿಎಂಒ ಸ್ಪಷ್ಟನೆ ನೀಡಿದೆ.
ಆದರೆ, ಇವೆಲ್ಲದರ ನಡುವೆ ಊಹಾಪೋಹವೊಂದು ಕೇಳಿಬರುತ್ತಿದೆ. ಕರೊನಾ ನಿರ್ವಹಣೆಯಲ್ಲಿ ಜನರು ಯೋಗಿ ಆದಿತ್ಯನಾಥ್​ ನೇತೃತ್ವದ ಸರ್ಕಾರವನ್ನು ಟೀಕಿಸುತ್ತಿರುವುದು ಬಿಜೆಪಿಯ ಪ್ರಮುಖ ನಾಯಕರಿಗೆ ಚಿಂತೆಯ ವಿಷಯವಾಗಿದೆ.
ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನಾಯಕತ್ವ ಬದಲವಾವಣೆಯನ್ನು ಪರಿಗಣಿಸಲಾಗಿದೆ ಎಂಬ ವದಂತಿಯು ಇದೆ. 2024ರ ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಬದಲಾವಣೆ ಒಳ್ಳೆಯದು ಎಂಬ ಮಾತು ಕೇಳಿಬರುತ್ತಿದೆ. ಏಕೆಂದರೆ, ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶವು ಪ್ರಮುಖ ಪಾತ್ರ ವಹಿಸುತ್ತದೆ.
ಇನ್ನು ಈ ವದಂತಿಯನ್ನು ತಳ್ಳಿಹಾಕಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್​. ಸಂತೋಷ್​, ಯೋಗಿ ಸರ್ಕಾರ ಕೋವಿಡ್​ ಬಿಕ್ಕಟ್ಟನ್ನು ನಿರ್ವಹಿಸುತ್ತಿರುವ ರೀತಿ ನೋಡಿ ಗುರುವಾರ ಟ್ವೀಟ್​ ಮಾಡಿ ಹೊಗಳಿದ್ದಾರೆ.
ಆದರೂ, ಕೋವಿಡ್​ ನಿರ್ವಹಣೆಯಲ್ಲಿ ಉತ್ತರ ಪ್ರದೇಶದ ವಿರುದ್ಧ ವ್ಯಾಪಕ ಆಕ್ರೋಶ ಕೇಳಿಬರುತ್ತಿರುವುದರಿಂದ ಯೋಗಿ ನಾಯಕತ್ವದ ಮೇಲೆ ನಾಯಕರಿಗೆ ಅಸಮಾಧಾನವಿದೆ ಎಂದು ಹೇಳಲಾಗುತ್ತಿದೆ.(ಏಜೆನ್ಸೀಸ್​)
ಟ್ವಿಟರ್​ಗೆ ಕೊನೆಯ ಎಚ್ಚರಿಕೆ; ಹೊಸ ನಿಯಮ ಪಾಲಿಸದ ಕಾರಣ ಕೇಂದ್ರ ಸರ್ಕಾರ ಗರಂ

ಕ್ರಾಂತಿಕಾರಿ ಬದಲಾವಣೆ ತಂದ ದೇವರಾಜ ಅರಸು: ಇಂದು ಪುಣ್ಯಸ್ಮರಣೆ

ಈ ರಾಶಿಯವರು ಭಕ್ತಿಯಿಂದ ಶಿವಪೂಜೆ ಮಾಡಿದರೆ ಬೇಡಿದ್ದನ್ನು ಕೊಡುತ್ತಾನೆ: ವಾರ ಭವಿಷ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 14 =
Remember me
