ಗುಂಟೂರು:ಮದುವೆಯಾದ ನಂತರ ಮೊದಲ ರಾತ್ರಿಯಂದು ಅನೇಕ ಭರವಸೆಗಳೊಂದಿಗೆ ಗಂಡನಿರುವ ಕೋಣೆಯೊಳಗೆ ಹೆಜ್ಜೆ ಹಾಕಿದ ನವವಧುವಿಗೆ ಜೀವನದಲ್ಲೇ ಅತ್ಯಂತ ಕಹಿ ಅನುಭವವಾದ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ಬೆಳಕಿಗೆ ಬಂದಿದೆ.
ವಿವರಣೆಗೆ ಬರುವುದಾದರೆ, ತೆನಾಲಿ ಮೂಲದ ಎಂಡಿ ಜಲಾಲುದ್ದೀನ್​ ಮತ್ತು ಕೌಸರ್​ ಜಾನ್​ ದಂಪತಿಯ ಮೂರನೇ ಮಗಳನ್ನು ವಿಜಯವಾಡದ ಆಟೋನಗರ ಮೂಲದ ಖಜಖಾನ್​ಗೆ ತೆನಾಲಿಯ ಪಾಂಡುರಂಗ ಪೇಟಾದಲ್ಲಿ ಏಪ್ರಿಲ್​ 4ರಂದು ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು.
ಮದುವೆ ಬಳಿಕ ಕೆನಾಡಗೆ ಹೋಗಿ ನೆಲೆಸೋಣ ಎಂದು ನವವರ, ನವವಧುವಿಗೆ ಭರವಸೆ ನೀಡಿದ್ದ. ಆದರೆ, ಮದುವೆಯಾದ ಮೊದಲ ರಾತ್ರಿ ವಧುವಿಗೆ ಬಹುದೊಡ್ಡ ಶಾಕ್​ ಆಗಿದೆ. ನಾನು ಯಾವುದಕ್ಕೂ ಉಪಯೋಗವಿಲ್ಲದವನು ಎಂಬ ವರನ ಹೇಳಿಕೆ ಕೇಳಿ ವಧುವಿಗೆ ಆಘಾತವಾಗಿದೆ.
ಇತ್ತ ಏನು ಮಾಡಬೇಕೆಂದು ತಿಳಿಯದೇ ಗೊಂದಲಕ್ಕೀಡಾದ ವಧು, ಕೊನೆಗೆ ಪಾಲಕರಿಗೆ ತಿಳಿಸಿ, ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ.(ಏಜೆನ್ಸೀಸ್​)
ವಿಕ್ರಾಂತ್ ರೋಣನ ಬಗ್ಗೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತಹ ಸುದ್ದಿ ನೀಡಿದ ರವಿಶಂಕರ್​ ಗೌಡ!

ಉಟ್ಟ ಸೀರೆಯಲ್ಲೇ ಮ್ಯಾನ್‌ಹೋಲ್‌ ಒಳಗಿಳಿದ ಮುನ್ಸಿಪಲ್‌ ಅಧಿಕಾರಿ: ಶ್ಲಾಘನೆಗಳ ಮಹಾಪೂರ

ಬಿಎಸ್ಸಿ ಪದವೀಧರರಿಗೆ ರಸಗೊಬ್ಬರ ಸಂಸ್ಥೆಯಲ್ಲಿ ಆಪರೇಟರ್​ಗಳ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 15 =
Remember me
