ತ್ರಿಸ್ಸೂರು:ಗಂಡನ ಕಾಲು ಕತ್ತರಿಸಿ ಆತನನ್ನು ಡ್ರಗ್ಸ್​ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದ ಮಹಿಳೆಯನ್ನು ಕೇರಳದ ನೆಡುಪುಳ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ನಯನಾ (30) ಎಂದು ಗುರುತಿಸಲಾಗಿದೆ. ಕೋರ್ಕೆಂಚೆರಿ ನಿವಾಸಿಯಾಗಿರುವ ಗಂಡ ಸಿ.ಪಿ. ಪ್ರಮೋದ್​ನ ಮೇಲೆ ಹಲ್ಲೆ ಮಾಡಲು ಗ್ಯಾಂಗ್​ ಒಂದಕ್ಕೆ ನಯನಾ ಸುಪಾರಿ ನೀಡಿದ್ದಳು. ಈ ಪ್ರಕರಣದಲ್ಲಿ ನಯನಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಜಾಮೀನು ನೀಡಲಾಗಿದೆ. ಆದರೆ, ಕೌಟುಂಬಿಕ ನ್ಯಾಯಾಲಯದಲ್ಲಿ ಆಕೆಯ ಮತ್ತು ಗಂಡನ ನಡುವೆ ಬಾಕಿ ಪ್ರಕರಣವಿದೆ.
ತನ್ನ ಗಂಡನ ಮೇಲೆ ಹಲ್ಲೆ ನಡೆಸಿ ಆತನಿಗೆ ವಿವಾಹೇತರ ಸಂಬಂಧವಿದೆ ಎಂದು ಬಿಂಬಿಸಲು ಹಾಗೂ ಆತನನ್ನು ಡ್ರಗ್ಸ್​ ಕೇಸ್​ನಲ್ಲಿ ಜೈಲಿನಲ್ಲಿ ಕೊಳೆಯುವಂತೆ ಮಾಡಲು ಗ್ಯಾಂಗ್‌ ಒಂದನ್ನು ನಯನಾ ಸಂಪರ್ಕಿಸಿದ್ದಳು. ಬಳಿಕ ಪ್ಲಾನ್​ನಂತೆಯೇ ಗಂಡನ ಮೇಲೆ ಹಲ್ಲೆ ಮಾಡಿಸಿದ್ದಳು.
ನಯನಾಳ ಪತಿ ಪ್ರಮೋದ್​, ಕಳೆದ ಏಪ್ರಿಲ್​ನಲ್ಲಿ ಆಕೆಯ ವಿರುದ್ಧ ದೂರು ದಾಖಲಿಸಿದ್ದರು. ತನಿಖೆಯ ಸಮಯದಲ್ಲಿ ಪೊಲೀಸರಿಗೆ ಬಂದ ಸಂದೇಶವನ್ನು ಆಧರಿಸಿ ನಯನಾಳನ್ನು ಬಂಧಿಸಿ, ನ್ಯಾಯಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಳೆ.(ಏಜೆನ್ಸೀಸ್​)
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೊಬೈಲ್​ ಫೋನ್​ ಕದ್ದು ಬಳಸುತ್ತಿದ್ದ ಎಸ್​ಐಗೆ ಬಿಗ್​ ಶಾಕ್​..!

ಲೇಡಿ ಪಿಎಸ್​ಐ ಕಿರುಕುಳ: ವಿಷ ಸೇವಿದ್ದ ವ್ಯಕ್ತಿ ಸಾವು

Lakhimpur Kheri Case: ಕೇಂದ್ರ ಸಚಿವರ ಪುತ್ರ ಆಶಿಶ್​ ಮಿಶ್ರಾ ಬಂಧನಕ್ಕೆ ಕಾರಣವಾದ ಪ್ರಮುಖ 3 ಅಂಶಗಳಿವು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − six =
Remember me
