ಕೊಚ್ಚಿ:ಅತ್ತೆಯ ಅಕ್ರಮ ಸಂಬಂಧವನ್ನು ಬಯಲು ಮಾಡಿದ್ದಕ್ಕೆ ಸೊಸೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಕೇರಳದ ತ್ರಿಸ್ಸೂರ್ ಜಿಲ್ಲೆಯ ಕೊರಟ್ಟಿಯಲ್ಲಿ ನಡೆದಿದೆ. ಸಂತ್ರಸ್ತೆಯಲ್ಲಿ ಪೆರುಂಬವೂರ್​ ಮೂಲದ ಎಂ.ಎಸ್​. ವೈಷ್ಣವಿ ಎಂದು ಗುರುತಿಸಲಾಗಿದೆ.
ವೈಷ್ಣವಿ ಅಂತಿಮ ವರ್ಷದ ಸಿವಿಲ್​ ಇಂಜಿನಿಯರಿಂಗ್​ ವಿದ್ಯಾರ್ಥಿನಿಯಾಗಿದ್ದು, ದಾಳಿಯಿಂದ ಗಂಭೀರ ಗಾಯಗೊಂಡಿರುವ ಆಕೆ ಅಂಗಮಲಿಯಲ್ಲಿರುವ ಅಪೊಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ವಿವರಣೆಗೆ ಬರುವುದಾದರೆ, ವೈಷ್ಣವಿ ಕೊರಟ್ಟಿಯ ಪಲಪಲ್ಲಿ ಮೊಝಿಕುಲಂ ನಿವಾಸಿ ಮುಕೇಶ್​ ಎಂಬುವರನ್ನು 6 ತಿಂಗಳ ಹಿಂದೆ ಮದುವೆ ಆಗಿದ್ದಾರೆ. ಅತ್ತೆಯ ಅಕ್ರಮ ಸಂಬಂಧವನ್ನು ಬಯಲು ಮಾಡಿದಾಗ ಆಕೆಯ ಪ್ರಿಯಕರ ತನ್ನ ಮೇಲೆ ಹಲ್ಲೆ ಮಾಡಿದನು ಎಂದು ವೈಷ್ಣವಿ ಆರೋಪ ಮಾಡಿದ್ದಾರೆ.
ಹಲ್ಲೆ ಮಾಡಿದ ಅತ್ತೆಯ ಪ್ರಿಯಕರ, ಮನೆಯಿಂದ ಸುಮಾರು 3 ಕಿ.ಮೀ ದೂರದಲ್ಲಿ ನೆಲೆಸಿದ್ದಾನೆ. ಆತ ಮನೆಯನ್ನು ಪ್ರವೇಶಿಸುವುದನ್ನು ತಡೆಯಲು ವೈಷ್ಣವಿ ಯತ್ನಿಸಿದ್ದಾಳೆ. ಆದರೆ, ಭಾನುವಾರ ರಾತ್ರಿ ನೆರೆ ಮನೆಯವರ ಜತೆ ಮಾತನಾಡುವಾಗ ಏಕಾಏಕಿ ದಾಳಿ ಮಾಡಿದ ಆರೋಪಿ, ವೈಷ್ಣವಿ ಮುಖಕ್ಕೆ ಬಲವಾಗಿ ಹೊಡೆದಿದ್ದಾನೆ. ಈ ವೇಳೆ ಪತ್ನಿಯನ್ನು ರಕ್ಷಿಸಲು ಮಧ್ಯ ಪ್ರವೇಶಿಸಿದ ಪತಿ ಮುಕೇಶ್​ ಮೇಲೂ ಆರೋಪಿ ಹಲ್ಲೆ ಮಾಡಿದ್ದಾನೆ. ಬಳಿಕ ಆತ ಸಹಾಯಕ್ಕಾಗಿ ನೆರೆಯವರನ್ನು ಕರೆದಾಗಿ ಆರೋಪಿ ಪರಾರಿಯಾಗಿದ್ದಾನೆ.
ಇತ್ತ ಗಂಭೀರವಾಗಿ ಗಾಯಗೊಂಡಿದ್ದ ವೈಷ್ಣವಿಯನ್ನು ಮುಕೇಶ್​ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಬಗ್ಗೆ ತಿಳಿದು ಪೊಲೀಸರು ಆಸ್ಪತ್ರೆಗೆ ತೆರಳಿ ವೈಷ್ಣವಿ ಹೇಳಿಕೆಯನ್ನು ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆಗೆ ಬಲೆ ಬೀಸಿದ್ದಾರೆ.
ಇನ್ನು ಅತ್ತೆ ಮತ್ತು ಪತಿಯ ಸಹೋದರ ತನಗೆ ಕಿರುಕುಳ ನೀಡುತ್ತಿದ್ದರು ಎಂದು ವೈಷ್ಣವಿ ಆರೋಪ ಮಾಡಿದ್ದಾಳೆ. ವೈಷ್ಣವಿ ಹೇಳಿದ ಎಲ್ಲ ಘಟನೆಯನ್ನು ಮುಕೇಶ್​ ಪತ್ನಿಯ ಇನ್​ಸ್ಟಾಗ್ರಾಂನಲ್ಲಿ ಬಯಲು ಮಾಡಿದ್ದಾರೆ. ಮದುವೆಯಾದ ಕೆಲವು ತಿಂಗಳುಗಳ ಬಳಿಕ ತನ್ನ ಅತ್ತೆ ನಿತ್ಯವು ಕಿರುಕುಳ ನೀಡುತ್ತಿದ್ದರು. ಪತಿ ಕೆಲಸಕ್ಕೆ ಹೋದ ಬೆನ್ನಲ್ಲೇ ನನ್ನನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಊಟವನ್ನು ಕೊಡದೇ ಹಿಂಸಿಸುತ್ತಿದ್ದರು ಎಂದು ಆರೋಪ ಮಾಡಿದ್ದಾರೆ.(ಏಜೆನ್ಸೀಸ್​)
A post shared by Vaishnavi M S (@vaishnavi.as.90)

A post shared by Vaishnavi M S (@vaishnavi.as.90)

ಖಂಡಿತ ಮದುವೆ ಆಗ್ತಾನೆ! ಪ್ರಭಾಸ್ ಬಗ್ಗೆ​ ಯಾರಿಗೂ ತಿಳಿಯದ ರಹಸ್ಯವೊಂದನ್ನು ಬಿಚ್ಚಿಟ್ಟ ಅವರ ದೊಡ್ಡಮ್ಮ

ಯುದ್ಧ ಪೀಡಿತ ಯೂಕ್ರೇನ್​ನಿಂದ ಸುರಕ್ಷಿತ ಸ್ಥಳಾಂತರ: ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಪಾಕ್​ ಯುವತಿ

ಬೆತ್ತಲೆ ದೇಹ ತೋರಿಸು ಎಂದ ನೆಟ್ಟಿಗನಿಗೆ ನಟಿ ಯಶಿಕಾ ಆನಂದ್​ ಕೊಟ್ಟ ಖಡಕ್​ ಉತ್ತರ ಹೀಗಿತ್ತು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 1 =
Remember me
