ಹೈದರಾಬಾದ್​:ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕಾರನ್ನು ಲಾಕ್​ ಮಾಡಿದ್ದಕ್ಕೆ ಆಕ್ರೋಶಗೊಂಡ ಮಹಿಳೆಯೊಬ್ಬರು ಟ್ರಾಫಿಕ್​ ಪೊಲೀಸರ ವಿರುದ್ಧ ಕಿರುಚಾಡಿ, ಸ್ಥಳದಲ್ಲೇ ಹೈಡ್ರಾಮ ಮಾಡಿರುವ ಘಟನೆ ಬುಧವಾರ (ಸೆ.21) ಹೈದರಾಬಾದ್​ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋಠಿ ಪ್ರದೇಶದ ಸುಲ್ತಾನ್​ ಬಜಾರ್​ನ ಜನನಿಬಿಡ ಪ್ರದೇಶದಲ್ಲಿರುವ ನೋ ಪಾರ್ಕಿಂಗ್​ ವಲಯದಲ್ಲಿ ಪಾರ್ಕ್​ ಮಾಡಿದ್ದ ಕಾರನ್ನು ಹೈದರಾಬಾದ್​ ಟ್ರಾಫಿಕ್​ ಪೊಲೀಸರು ಸೀಜ್​ ಮಾಡಿದರು. ಟ್ರಾಫಿಕ್​ ತೆರವುಗೊಳಿಸುವ ಕಾರ್ಯಾಚರಣೆಯ ಭಾಗವಾಗಿ ನೋ ಪಾರ್ಕಿಂಗ್​ ಜಾಗದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಪೊಲೀಸ್​ ಸಿಬ್ಬಂದಿ ಟೋಯಿಂಗ್​ ಮಾಡುತ್ತಿದ್ದರು. ಈ ವೇಳೆ ಕಾರೊಂದರ ಚಕ್ರಗಳನ್ನು ಟೋಯಿಂಗ್​ ಮಾಡಲು ಮುಂದಾದಾಗ ಅದನ್ನು ನೋಡಿದ ಕಾರಿನ ಮಾಲಕಿ ವಿರೋಧ ವ್ಯಕ್ತಪಡಿಸಿದರು.
ಕಾರನ್ನೇಕೆ ಸೀಜ್​ ಮಾಡುತ್ತೀರಾ? ಎಂದು ಕರ್ತವ್ಯ ನಿರತ ಪೊಲೀಸ್​ ಸಿಬ್ಬಂದಿಯ ಮೇಲೆಯೇ ಮಹಿಳೆ ಕೂಗಾಡಿದಳು. ಅಲ್ಲದೆ, ಮಿತಿ ಮೀರಿ ವರ್ತಿಸಿದ ಮಹಿಳೆ ಒಂದು ಹಂತದಲ್ಲಿ ಪೊಲೀಸ್​ ಸಿಬ್ಬಂದಿಯೊಬ್ಬರ ವಾಕಿ-ಟಾಕಿಯನ್ನು ಕಸಿದುಕೊಂಡು, ಅವರನ್ನು ನೂಕಿದರು. ಅವಾಚ್ಯ ಪದಗಳಿಂದ ನಿಂದಿಸುತ್ತಾ ಸ್ಥಳದಲ್ಲೇ ಭಾರೀ ಹೈಡ್ರಾಮವನ್ನು ಸೃಷ್ಟಿಸಿದರು. ಮಹಿಳೆಯ ಕೂಗಾಟವನ್ನು ನೋಡಿ ಪೊಲೀಸರು ಒಂದು ತಬ್ಬಿಬ್ಬಾದರು.
ಆದರೆ, ಮಹಿಳೆಯ ಕಿರುಚಾಟಕ್ಕೆ ಕ್ಯಾರೆ ಎನ್ನದ ಪೊಲೀಸರು ಕಾರನ್ನು ನೋ ಪಾರ್ಕಿಂಗ್​ನಲ್ಲಿ ಪಾರ್ಕ್​ ಮಾಡಿದ್ದಕ್ಕೆ ದಂಡ ವಿಧಿಸಿದರು ಮತ್ತು ಕರ್ತವ್ಯನಿರತ ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ್ದಕ್ಕೆ ಪ್ರಕರಣವನ್ನು ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
సుల్తాన్ బజార్ ట్రాఫిక్ పోలీస్ తనిఖీలు చేస్తుండగా సుల్తాన్ బజార్ లోని"నో"పార్కింగ్ స్థలంలో కారు పార్కింగ్ చేసిన మహిళ "నో" పార్కింగ్ స్థలంలో కారు పార్కింగ్ ఉండడంతో కార్ విల్ కు లాక్ వేసి చలాన్ వేసిన ట్రాఫిక్ పోలీసులు ఏ విధంగా చలన్ వేస్తారు అంటూ వాగ్వాదం.pic.twitter.com/akS82rDB8D
— Sai vineeth(Journalist🇮🇳) (@SmRtysai)September 21, 2022

ದೇಶದ ಹಲವಡೆ ಪಿಎಫ್​ಐ ಕಚೇರಿಗಳ ಮೇಲೆ ಎನ್​ಐಎ, ಇಡಿ ದಾಳಿ: 100ಕ್ಕೂ ಹೆಚ್ಚು ಪಿಎಫ್​ಐ ಸದಸ್ಯರ ಬಂಧನ

ದೂರು ನೀಡಲು ಹೋದ ದೂರುದಾರನ ಮೇಲೆಯೇ ವಿಶ್ವನಾಥಪುರ ಠಾಣಾ ಪೊಲೀಸರಿಂದ ದೌರ್ಜನ್ಯ!?

ಶಂಕಿತ ಉಗ್ರರು ಸಿಕ್ಕಿಬಿದ್ದಿದ್ದೇ ರೋಚಕ: ಭಯೋತ್ಪಾದಕರ ತಯಾರಿಕಾ ಕಾರ್ಖಾನೆ ಮಲೆನಾಡು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 8 =
Remember me
