ಹೈದರಾಬಾದ್​:ಗಂಡನ ಕಿರುಕುಳ ತಾಳಲಾರದೇ ಮಹಿಳೆಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಹೈದರಾಬಾದ್​ನ ಬಂಜಾರ ಹಿಲ್ಸ್ ಬಳಿ ನಡೆದಿದ್ದು, ಡೆತ್​ನೋಟ್​ನಲ್ಲಿ ಗಂಡನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾಳೆ.
ಮೃತಳನ್ನು ವಿಜಯಾ (31) ಎಂದು ಗುರುತಿಸಲಾಗಿದೆ. ವಿಜಯಾ ತನ್ನ ಪತಿ ಆಂಜನೇಯುಲು ಜತೆ ಹೈದರಾಬಾದ್​ನ ಯೂಸೂಫ್​ಗಢದ ರಾಜೀವ್​ಗಾಂಧಿ ನಗರದಲ್ಲಿ ವಾಸವಿದ್ದಳು. ಇಬ್ಬರು ಸಹ ಪ್ರೀತಿಸಿ 14 ವರ್ಷಗಳ ಹಿಂದೆ ಮದುವೆ ಆಗಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ವರಸೆ ಬದಲಿಸಿದಿ ಆಂಜನೇಯುಲು ಕಿರುಕುಳ ನೀಡಲು ಆರಂಭಿಸಿದ.
ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ. ಕೆಟ್ಟ ಕೆಟ್ಟ ಪದಗಳಿಂದ ನಿಂದಿನಿ ದಿನನಿತ್ಯವು ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ವಿಜಯಾ ಏಪ್ರಿಲ್​ 27ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಗಳ ಸಾವಿಗೆ ಅಳಿಯನೇ ಕಾರಣ ಎಂದು ವಿಜಯಾಳ ತಾಯಿ ದೂರು ನೀಡಿದ್ದು, ಆಂಜನೇಯನನ್ನು ಬಂಧಿಸಲಾಗಿದೆ. ಏಪ್ರಿಲ್​ 26ರ ರಾತ್ರಿ ಮಗಳು ಕರೆ ಮಾಡಿದಳು. ಮಕ್ಕಳು ಜೋಪಾನ ಎಂದು ಅಳುತ್ತಾ ಮಾತನಾಡಿದಳು. ಈ ಮಧ್ಯೆ ಅಳಿಯ ಮಗಳ ಫೋನ್​ ಕಿತ್ತುಕೊಂಡು, ಮಗಳನ್ನು ಸಾಯಿಸುವುದಾಗಿ ಹೇಳಿದನು ಎಂದು ವಿಜಯಾ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಾಯುವ ಮುನ್ನ ವಿಜಯಾ ಡೆತ್​ನೋಟ್​ ಬರೆದಿಟ್ಟಿದ್ದು, “ನಾನು ವಿಜಯಾ… ನನ್ನ ಗಂಡನ ಕಿರುಕುಳ ತಾಳಲಾರದೇ ನಾನು ಸಾಯುತ್ತಿದ್ದೇನೆ. ಮದುವೆಯಾದಗಿನಿಂದ ಆತನೊಂದಿಗೆ ಪ್ರತಿದಿನ ಸಾಯುತ್ತಿದ್ದೆ. ಆತ ಬೇರೆ ಮಹಿಳೆಯೊಬ್ಬಳ ಜತೆ ಅಕ್ರಮ ಸಂಬಂಧ ಹೊಂದಿದ್ದ ಎಂದು ದೂರಿದ್ದಾಳೆ. ಆದರೆ, ಸಾಯುವಾಗಲೂ ಗಂಡನ ಬಗ್ಗೆ ಕನಿಕರ ತೋರಿವುದ ಪತ್ನಿ ನಾನು ಸತ್ತರೆ, ನನ್ನ ಗಂಡನನ್ನು ಸಾಯಿಸಬೇಡಿ ಎಂದು ಬರೆದಿಟ್ಟಿದ್ದಾಳೆ.(ಏಜೆನ್ಸೀಸ್​)
ಮೊಬೈಲ್‌ ಪಾಸ್‌ವರ್ಡ್‌ ಕೊಟ್ಟಿಲ್ಲವೆಂದು ಗೆಳೆಯನ ಕೊಲೆ ಮಾಡಿ ಟೆಡ್ಡಿಬೇರ್‌ ಇಟ್ಟುಬಂದ ಕಾಲೇಜು ವಿದ್ಯಾರ್ಥಿ!

ಡಬ್ಲ್ಯುಡಬ್ಲ್ಯುಇ ಅಖಾಡದಲ್ಲಿ ತೊಡೆ ತಟ್ಟಲು ಸಜ್ಜಾದ ಭಾರತದ ಕುವರಿ! ಸಂಜನಾರ ಇಂಟೆರೆಸ್ಟಿಂಗ್​ ಮಾಹಿತಿ ಇಲ್ಲಿದೆ

ಔಷಧಕ್ರಾಂತಿ, ಸಂಪರ್ಕಕ್ರಾಂತಿಯ ಮಹತ್ವ ಅರಿಯೋಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
