ಕಾಕ್ಕನಾಡು:ಬೆತ್ತಲೆ ಫೋಟೋ ತೋರಿಸಿ ಯುವ ಉದ್ಯಮಿಯನ್ನು ಬೆದರಿಸಿ ಆತನಿಂದ ಲಕ್ಷಾಂತರ ರೂಪಾಯಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಕೇರಳ ಪೊಲೀರು ಖತರ್ನಾಕ್​ ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಿಜಿಮೋಲ್​ (34) ಎಂದು ಗುರುತಿಸಲಾಗಿದೆ. ಈಕೆ ಪಲಚುವಡುವಿನ ಎನ್​ಜಿಒ ಕ್ವಾಟ್ರಸ್​ನಲ್ಲಿರುವ ಎಂಎಲ್​ಎ ಫ್ಲ್ಯಾಟ್​ನಲ್ಲಿ ವಾಸವಿದ್ದಳು. ಮಲಪ್ಪುರಂ ಮೂಲದ ಉದ್ಯಮಿಗೆ ವಂಚನೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ಪೊಲೀಸ್​ ಮೂಲಗಳ ಪ್ರಕಾರ ಶಿಜಿಮೋಲ್​, ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆ ಫೋಟೋವನ್ನು ಹರಿಬಿಡುತ್ತೇನೆಂದು ಹೆದರಿಸಿ ಯುವ ಉದ್ಯಮಿಯಿಂದ 2021ರ ಸೆಪ್ಟೆಂಬರ್​ನಿಂದ ಸುಮಾರು 38 ಲಕ್ಷ ರೂಪಾಯಿಯನ್ನು ಸುಲಿಗೆ ಮಾಡಿದ್ದಾಳೆಂದು ತಿಳಿದುಬಂದಿದೆ.
ಯುವ ಉದ್ಯಮಿಯು ಆರೋಪಿ ಶಿಜುಮೋಲ್ ಭೇಟಿಯಾಗಲು ಆಕೆ​ ವಾಸವಿದ್ದ ಫ್ಲ್ಯಾಟ್​ಗೆ ಹೋಗಿದ್ದ. ಈ ವೇಳೆ ತಂಪು ಪಾನೀಯದಲ್ಲಿ ಮತ್ತು ಬರುವ ಡ್ರಗ್ಸ್​ ಬೆರೆಸಿ ಕೊಟ್ಟಿದ್ದಾಳೆ. ಬಳಿಕ ಆತನ ಬಟ್ಟೆಗಳನ್ನೆಲ್ಲ ತೆಗೆದು ಬೆತ್ತಲೆ ಮಾಡಿ ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಂಡಿದ್ದಾಳೆ. ಇದಾದ ಎರಡು ದಿನಗಳ ಬಳಿಕ ಸಂತ್ರಸ್ತನಿಗೆ ಕರೆ ಮಾಡಿ ತನ್ನ ಬಳಿ ಆತನ ಬೆತ್ತಲೆ ಫೋಟೋ ಮತ್ತು ವಿಡಿಯೋಗಳಿರುವುದಾಗಿ ಮತ್ತು ಹಣ ಕೊಡದಿದ್ದರೆ ಅವುಗಳನ್ನು ಆತನ ಕುಟುಂಬದವರಿಗೆ ಶೇರ್​ ಮಾಡುವುದಾಗಿ ಬೆದರಿಸಿದ್ದಾಳೆ.
ಮೊದಲು ಸುಮಾರು 20 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿದ್ದಾಳೆ. ಇದಾದ ಬಳಿಕ ತಾನು ಗರ್ಭಿಣಿಯಾಗಿದ್ದೇನೆ. ಇನ್ನು ಮುಂದೆ ಫ್ಲ್ಯಾಟ್​ನಲ್ಲಿ ವಾಸಿಸಲು ಆಗುವುದಿಲ್ಲ. ಸ್ವಂತ ಮನೆಯನ್ನು ನಿರ್ಮಿಸಬೇಕಿದೆ ಎಂದು ಹೇಳಿ ಮತ್ತೆ 18 ಲಕ್ಷ ರೂಪಾಯಿಯನ್ನು ವಸೂಲಿ ಮಾಡಿದ್ದಾಳೆ.
ಇದಾದ ಬಳಿಕ ಸಂತ್ರಸ್ತನ ಮನೆಯಲ್ಲೇ ಉಳಿಯುವುದಾಗಿ ಆಕೆ ಕಿರುಕುಳ ನೀಡಲು ಆರಂಭಿಸಿದಾಗ ಸಂತ್ರಸ್ತ ತನ್ನ ಲೈಫ್​ ಬರ್ಬಾದ್​ ಆಯಿತು ಎಂದು ನೊಂದು ಆತ್ಮಹತ್ಯೆಗೂ ಯತ್ನಿಸಿದ್ದಾನೆ. ಆದರೆ, ಹೇಗೋ ಆ ನಿರ್ಧಾರದಿಂದ ಹಿಂದೆ ಸರಿದು ಕೊನೆಗೆ ದೂರು ನೀಡುವುದೇ ಸರಿ ಎಂಬ ನಿರ್ಧಾರಕ್ಕೆ ಬಂದು ಠಾಣೆಗೆ ತೆರಳಿ ದೂರು ನೀಡಿದ್ದ.
ವಿಶೇಷ ತಂಡವನ್ನು ರಚಿಸಿಕೊಂಡ ಥ್ರಿಕ್ಕಾಕರ ಸರ್ಕಲ್​ ಇನ್ಸ್​ಪೆಕ್ಟರ್​ ಆರ್​ ಶಬು ಶಿಜುಮೋಲ್​ ಎಂಬಾಕೆಯನ್ನು ಬಂಧಿಸಿದ್ದಾರೆ. ಆಕೆಯ ವಿರುದ್ಧ ಈಗಾಗಲೇ ವಾರಪ್ಪುಳ ಸೆಕ್ಸ್​ ಸ್ಕ್ಯಾಂಡಲ್​ ಕೇಸ್​ ಸಹ ಇದೆ. ಇದೇ ರೀತಿಯ ಇತರ ಪ್ರಕರಣಗಳೊಂದಿಗೆ ಆಕೆಗೆ ಸಂಬಂಧವಿದೆಯೇ ಎಂದು ಪತ್ತೆ ಹಚ್ಚಲು ಪೊಲೀಸರು ತನಿಖೆಯನ್ನು ವಿಸ್ತರಿಸಿದ್ದಾರೆ.(ಏಜೆನ್ಸೀಸ್​)
ಮೈ ಕಾಣಿಸುವಂತೆ ಅರ್ಧಂಬರ್ಧ ಬಟ್ಟೆ ಯಾಕೆ​ ಹಾಕ್ತೀಯಾ?: ನೆಟ್ಟಿಗನ ಕಾಮೆಂಟ್​ಗೆ ನಿವೇದಿತಾ ಗರಂ

The Truth ಸಿನಿಮಾ ಮಾದರಿಯಲ್ಲೇ ತನಿಖಾಧಿಕಾರಿ ಹತ್ಯೆಗೆ ಯತ್ನ: ನಟ ದಿಲೀಪ್ ಭಯಾನಕ ಸಂಚು ಬಯಲು​

ಜಾಲತಾಣದಲ್ಲಿ ಬೋಲ್ಡ್​ ಫೋಟೋ ಹರಿಬಿಟ್ಟ ಮಲಯಾಳಿ ಬ್ಯೂಟಿ ಮೀರಾ ಜಾಸ್ಮಿನ್​..!

ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರ ಹತ್ಯೆ: ಹಂತಕರ ಕೃತ್ಯಕ್ಕೆ ಬೆಚ್ಚಿಬಿದ್ದ ಮಂಡ್ಯ ಜನತೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 2 =
Remember me
