ಅಹಮದಾಬಾದ್​:ವಿದ್ಯಾರ್ಥಿಗಳು ಶಿಕ್ಷಕರ ಕಾಲಿಗೆ ಬೀಳುವುದನ್ನು ಸಾಮಾನ್ಯವಾಗಿ ನೋಡಿರುತ್ತವೆ. ಆದರೆ, ಈ ಪ್ರಕರಣದಲ್ಲಿ ನಡೆದಿರುವುದು ಅದಕ್ಕೆ ತದ್ವಿರುದ್ಧವಾದದ್ದು. ಗುಜರಾತಿನ ಪಾಲಿಟೆಕ್ನಿಕ್​ ಕಾಲೇಜಿನ ಮಹಿಳಾ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿಯ ಮುಂದೆ ತನ್ನ ಎರಡು ಕೈಗಳನ್ನು ಕಟ್ಟಿ, ಕೈಮುಗಿದು ಆಕೆಯ ಕಾಲಿಗೆ ಬಿದ್ದು ಕ್ಷಮೆಯಾಚಿದ್ದಾರೆ.
ಇಡೀ ಘಟನೆಯ ಹಿಂದಿರುವ ಆರೋಪಿ ಆರ್​ಎಸ್​ಎಸ್​ನ ವಿದ್ಯಾರ್ಥಿ ಘಟಕವಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ (ಎಬಿವಿಪಿ)ನ ಮುಖಂಡ ಎಂದು ತಿಳಿದುಬಂದಿದೆ. ಈ ಘಟನೆ ಗುರುವಾರ ಅಹಮದಾಬಾದ್​ನ ಪಾಲಿಟೆಕ್ನಿಕ್​ ಕಾಲೇಜಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
ಎಸ್‌ಎಎಲ್ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿ ಹಾಗೂ ಎಬಿವಿಪಿ ಮುಖಂಡ ಅಕ್ಷತ್ ಜೈಸ್ವಾಲ್ ಗುರುವಾರ ಇತರೆ ಎಬಿವಿಪಿ ಸದಸ್ಯರೊಂದಿಗೆ ಪ್ರಾಂಶುಪಾಲ ಮೋನಿಕಾ ಸ್ವಾಮಿ ಅವರ ಚೇಂಬರ್‌ಗೆ ತೆರಳಿದ್ದಾನೆ. ಕಾಲೇಜಿನಲ್ಲಿ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಸಹಪಾಠಿ ವಿದ್ಯಾರ್ಥಿನಿಗೆ ಸಾಕಷ್ಟು ಹಾಜರಾತಿ ಇಲ್ಲದ ಕಾರಣಕ್ಕೆ ಆಕೆಯೊಂದಿಗೆ ಜಗಳವಾಡಿದ್ದಾನೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಜೈಸ್ವಾಲ್ ಮತ್ತು ಇತರ ಎಬಿವಿಪಿ ಸದಸ್ಯರು ಆಕೆಯ ಚೇಂಬರ್‌ನಲ್ಲಿ ಜಗಳವಾಡುತ್ತಿರುವುದು ಕಂಡುಬಂದಿದೆ. ವಾದದ ನಂತರ, ವಿದ್ಯಾರ್ಥಿನಿಯ ಮುಂದೆ ಕ್ಷಮೆಯಾಚಿಸುವಂತೆ ಪ್ರಾಂಶುಪಾಲರನ್ನು ಬಲವಂತ ಮಾಡುತ್ತಾರೆ. ಅದರಂತೆ ವಿದ್ಯಾರ್ಥಿನಿಯ ಕೈ ಜೋಡಿಸಿ ನಮಸ್ಕರಿಸುವ ಪ್ರಾಂಶುಪಾಲೆ ನಂತರ ವಿದ್ಯಾರ್ಥಿನಿಯ ಪಾದಗಳನ್ನು ಸ್ಪರ್ಶಿಸುವುದು ವಿಡಿಯೋದಲ್ಲಿದೆ.
ಎಬಿವಿಪಿಯ ಈ ನಡೆಯನ್ನು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಟೀಕಿಸಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಆಕ್ರೋಶಗಳು ವ್ಯಕ್ತವಾಗಿವೆ. ಗುರುವಿಗೆ ಗೌರವ ಕೊಡುವ ರೀತಿ ಇದೆನಾ? ಎಂಬ ಟೀಕೆಗಳು ವ್ಯಕ್ತವಾಗಿವೆ.(ಏಜೆನ್ಸೀಸ್​)
ગુરૂ ની ગરિમા ને તાર- તાર કરનાર@ABVPGujaratનાં નેતાઓ સામે@jitu_vaghaniશિક્ષણ વિભાગ ખુદ ફરિયાદી બને –@NSUIGujarat@Neerajkundan@jagdishthakormp@Pawankhera@rssurjewala@drmanishdoshi@IG_Gohil_@SatveerINC@Mahipalsinh_INC#SameOnABVP#एबीवीपी_के_गुंडेpic.twitter.com/IBXsYc87H8
— Bhavik Solanki (@bhaviksolankee)May 13, 2022

ಸ್ವಂತ ಮನೆಯಲ್ಲೇ 1 ಕೆಜಿ ಚಿನ್ನ ಕದ್ದು ಲವರ್​ಗೆ ಕೊಟ್ಟ ಮಗಳು: ಪುತ್ರಿಯ ಖತರ್ನಾಕ್​ ಕೆಲಸವನ್ನು ತಾಯಿ ಪತ್ತೆಹಚ್ಚಿದ್ದು ಹೀಗೆ…

ಲಿವಿಂಗ್‌ ಟುಗೆದರ್​ನಲ್ಲಿದ್ದ ಕಿರುತೆರೆ ಯುವನಟಿ ಪಲ್ಲವಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ತಾಯಿಯಿಂದ ಬೇರ್ಪಟ್ಟ ಹುಲಿ ಮರಿಗಳನ್ನು ಸಲಹುತ್ತಿರುವ ಶ್ವಾನ: ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರೆಂಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
