ನೋಯ್ಡಾ:ಮಹಿಳೆಯೊಬ್ಬಳು ಆಟೋ ಚಾಲಕನೊಬ್ಬನ ಕುತ್ತಿಗೆ ಹಿಡಿದೆಳೆದು, ಕಪಾಳ ಮೋಕ್ಷ ಮಾಡಿ, ಕೂಗಾಡಿ, ನಿಂದಿಸಿ ರಂಪಾಟ ಮಾಡಿರುವ ವಿಡಿಯೋ ಒಮದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
नोएडा: गाड़ी में साइड लगने पर महिला ने ई-रिक्शा चालक जड़े 17 थप्पड़@JagranNewspic.twitter.com/1U99pqZumK
— Abhishek Tiwari (@abhishe_tiwary)August 13, 2022

ಈ ಘಟನೆ ಶನಿವಾರ ಬೆಳಗ್ಗೆ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್​ 110ರ ಎರಡನೇ ಹಂತದಲ್ಲಿರುವ ಮಾರುಕಟ್ಟೆ ಒಂದರಲ್ಲಿ ನಡೆದಿದೆ. ಆಟೋದ ಒಂದು ಭಾಗ ಕಾರಿಗೆ ಡಿಕ್ಕಿಯಾಗಿದ್ದರಿಂದ ತಾಳ್ಮೆ ಕಳೆದುಕೊಂಡ ಮಹಿಳೆ, ಆಟೋ ಚಾಲಕನ ಮೇಲೆ ತನ್ನ ಸಿಟ್ಟನೆಲ್ಲ ತೀರಿಸಿಕೊಂಡಿದ್ದಾಳೆ. ಅಲ್ಲದೆ, ಬಾಯಿಗೆ ಬಂದಂತೆ ನಿಂದಿಸಿದ್ದಾಳೆ. ಇದೇ ಸಂದರ್ಭದಲ್ಲಿ ದಾರಿಹೋಕರು ಗಲಾಟೆಯನ್ನು ನೋಡಿದರೂ ಯಾರೊಬ್ಬರು ಮಧ್ಯಪ್ರವೇಶಿಸಿ ಬಿಡಿಸುವ ಗೋಜಿಗೆ ಹೋಗಲಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ನೋಯ್ಡಾ ಪೊಲೀಸರನ್ನು ಒತ್ತಾಯಿಸುತ್ತಿದ್ದಾರೆ. ಸಂತ್ರಸ್ತ ಆಟೋ ಚಾಲಕ ಮಿಥುನ್​ ದೂರು ನೀಡಿದ ಬೆನ್ನಲ್ಲೇ ಶ್ರಮಿಕ್​ ಕುಂಜ್​ ನಿವಾಸಿಯಾಗಿರುವ ಆರೋಪಿ ಕಿರಣ ಸಿಂಗ್​ರನ್ನು ಬಂಧಿಸಲಾಗಿದೆ.
ಟ್ವೀಟ್ ಮೂಲಕ ಮಾಹಿತಿ ನೀಡಿರುವ ನೋಯ್ಡಾ ಪೊಲೀಸರು, ಈ ಪ್ರಕರಣದಲ್ಲಿ ಆಟೋ ಚಾಲಕನ ದೂರಿನ ಮೇರೆಗೆ ಮಹಿಳೆಯನ್ನು ಬಂಧಿಸಿದ್ದೇವೆ ಮತ್ತು ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
थाना फेस-2 पुलिस द्वारा ई-रिक्शा चालक के साथ मारपीट करने वाली महिला अभियुक्ता गिरफ्तार।pic.twitter.com/wyNTeEZl9G
— POLICE COMMISSIONERATE GAUTAM BUDDH NAGAR (@noidapolice)August 13, 2022

ರಾಜಸ್ಥಾನ ರಾಯಲ್ಸ್​ ತಂಡದ ಮಾಲೀಕನ ವಿರುದ್ಧ ಗಂಭೀರ ಆರೋಪ ಮಾಡಿದ ರಾಸ್​ ಟೇಲರ್​

ಅಶ್ಲೀಲ ಮೆಸೇಜ್​ ಮೂಲಕ ನೈನಾ ಜೈಸ್ವಾಲ್​ಗೆ ನಿತ್ಯವು ಕಿರುಕುಳ ನೀಡ್ತಿದ್ದ ಕಿಡಿಗೇಡಿಯ ಬಂಧನ

ಮಲ್ಟಿಫ್ಲೆಕ್ಸ್​ಗಳಲ್ಲಿ ಪಾಪ್​ಕಾರ್ನ್​ ದುಬಾರಿ ಏಕೆ? PVR ಮುಖ್ಯಸ್ಥ ಅಜಯ್​ ಬಿಜ್ಲಿ ಕೊಟ್ಟ ಕಾರಣವಿದು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + 19 =
Remember me
