ಪಂದಳಂ:ಫೇಸ್​ಬುಕ್​ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನಿಗೆ 11 ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ದಂಪತಿಯನ್ನು ಬಂಧಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಕುಲಾನಂದ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಕೊಟ್ಟರಕ್ಕರ ಪುಥುರು ನಿವಾಸಿಗಳಾದ ಪಾರ್ವತಿ ಟಿ.ಪಿ (31) ಮತ್ತು ಆಕೆಯ ಪತಿ ಸುನೀಲ್​ ಲಾಲ್​ (43) ಎಂಬಾತನನ್ನು ಬಂಧಿಸಲಾಗಿದೆ.
2020 ಏಪ್ರಿಲ್​ನಲ್ಲಿ ಪಾರ್ವತಿ ಫೇಸ್​ಬುಕ್​ ಮೂಲಕ ಸಂತ್ರಸ್ತ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳುತ್ತಾಳೆ. ತಾನೊರ್ವ ಶಿಕ್ಷಕಿಯಾಗಿದ್ದು, ಪುಥುರಿನ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿದ್ದಳು. ಎಸ್​ಎನ್​ ಪುರದಲ್ಲಿರುವ ಸುನೀಲ್​ ಲಾಲ್​ ಎಂಬುವರ ಪಿಜಿಯಲ್ಲಿ ಉಳಿದುಕೊಂಡಿರುವುದಾಗಿ ಸುಳ್ಳು ಹೇಳಿದ್ದಳು.
ಸಂತ್ರಸ್ತ ವ್ಯಕ್ತಿ ಮತ್ತು ಪಾರ್ವತಿ ನಡುವಿನ ಸ್ನೇಹ ಗಟ್ಟಿಯಾದಂತೆ ಆಕೆ ಮದುವೆ ಪ್ರಸ್ತಾಪ ಮುಂದಿಟ್ಟಿದ್ದಳು. 10ನೇ ವಯಸ್ಸಿನಲ್ಲೇ ತನ್ನ ತಂದೆ-ತಾಯಿ ಮೃತಪಟ್ಟಿದ್ದಾರೆಂದು ಮತ್ತೊಂದು ಸುಳ್ಳು ಹೇಳಿದ ಪಾರ್ವತಿ ತಮ್ಮ ಆಸ್ತಿ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಯಾಲಯದಲ್ಲಿ ಈ ಬಗ್ಗೆ ದಾವೆ ಹೂಡಲು ಹಣದ ಅವಶ್ಯಕತೆ ಇದೆ ಎಂದು ಹೇಳಿ ಸಂತ್ರಸ್ತನಿಂದ ಹಣ ವಸೂಲಿ ಮಾಡಿದ್ದಾಳೆ.
ಆರೋಪಿ ಪಾರ್ವತಿ ಓಡಾಡಲು ಬಳಸಿದ ಇನ್ನೋವಾ ಕಾರಿನ 8 ಸಾವಿರ ರೂ. ಬಾಡಿಗೆಯನ್ನು ಸಹ ನೀಡಿರುವ ಸಂತ್ರಸ್ತ, ಆಕೆಗೆ ಒಟ್ಟು 11,07,975 ರೂಪಾಯಿಯನ್ನು ನೀಡಿದ್ದಾನೆ. ಪತ್ತನಂತಿಟ್ಟ ಶಾಖೆಯಿಂದ ಹಣವನ್ನು ಪಾರ್ವತಿಯ ಖಾತೆಗೆ ಸಂತ್ರಸ್ತ ವರ್ಗಾವಣೆ ಮಾಡಿದ್ದಾನೆ. ಅಲ್ಲದೆ, ಆತನಿಗೆ ತನ್ನ ಮೇಲೆ ನಂಬಿಕೆ ಬರಲಿ ಅನ್ನುವ ಕಾರಣಕ್ಕೆ ಆತನನ್ನು ತನ್ನ ಸಂಬಂಧಿಕರ ಮನೆಗೂ ಪಾರ್ವತಿ ಕರೆದುಕೊಂಡು ಹೋಗಿದ್ದಳು. ಆದರೆ, ಮದುವೆ ಯಾವಾಗ ಆಗೋಣ ಎಂದು ಕೇಳಿದಾಗಲೆಲ್ಲ ಆಕೆ ಅಂತರ ಕಾಯ್ದುಕೊಳ್ಳುತ್ತಿದ್ದಳು. ಇದರಿಂದ ಸಂತ್ರಸ್ತನಿಗೆ ಅನುಮಾನ ಬಂದು ಆಕೆಯ ಬಗ್ಗೆ ಮತ್ತಷ್ಟು ವಿಚಾರಿಸಲು ಮುಂದಾದಾಗ ತಾನು ಮೋಸ ಹೋಗಿರುವುದು ಆತನಿಗೆ ಗೊತ್ತಾಗಿದೆ.
ತಕ್ಷಣ ಆತ ಪಾರ್ವತಿ ವಿರುದ್ಧ ಪಂದಳಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಪಾರ್ವತಿಯನ್ನು ತಕ್ಷಣ ಬಂಧಿಸಿದ್ದಾರೆ. ಜತೆಗೆ ಆಕೆಯ ಗಂಡ ಸುನೀಲ್​ ಲಾಲ್​ನನ್ನು ಬಂಧಿಸಿದ್ದಾರೆ. ದಂಪತಿ ಓರ್ವ ಹೆಣ್ಣು ಮಗಳಿದ್ದಾಳೆ. ಸದ್ಯ ದಂಪತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.(ಏಜೆನ್ಸೀಸ್​)
ಪತ್ನಿ ಸಮಂತಾ ಜತೆ ಮನಸ್ತಾಪ: ಕೊನೆಗೂ ಮೌನ ಮುರಿದ ನಟ ನಾಗಚೈತನ್ಯರಿಂದ ನೋವಿನ ಮಾತುಗಳು!

ಮನಸ್ಸಿದ್ದರೆ ವಯಸ್ಸಿನ ಹಂಗೇಕೆ? ಬಾಳ ಇಳಿ ಸಂಜೆಯಲ್ಲಿ ಜತೆಯಾದರು- ಮಗನೇ ಮಾಡಿಸಿದ ಅಪ್ಪನ ಮದುವೆ

ಬೆಂಗಳೂರಲ್ಲಿ ಮತ್ತೊಂದು ಬೆಂಕಿ ಅವಘಡ: ಛಿದ್ರಗೊಂಡ ದೇಹಗಳು, ಇಬ್ಬರು ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 18 =
Remember me
