ಉದಯಪುರ್​​:ಟಿ20 ವಿಶ್ವಕಪ್​ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿದ್ದಕ್ಕೆ ವಾಟ್ಸ್​ಆ್ಯಪ್​ ಮೂಲಕ ಸಂತಸ ವ್ಯಕ್ತಪಡಿಸಿದ ಮಹಿಳೆಗೆ ಭಾರೀ ಆಘಾತವಾಗಿದೆ.
ರಾಜಸ್ಥಾನದ ಉದಯಪುರದ ನೀರಜ್​ ಮೋದಿ ಹೆಸರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಆಗಿದ್ದ ನಫೀಸಾ ಅಟ್ಟಾರಿ, ಪಾಕ್​ ತಂಡ ಗೆದ್ದಿದ್ದಕ್ಕೆ ವಾಟ್ಸ್​ಆ್ಯಪ್​ ಸ್ಟೇಟಸ್ ಹಾಕಿದ್ದರು. ಅದರಲ್ಲಿ ನಾವು ಗೆದ್ದೆವು ಎಂದು ಬರೆದುಕೊಂಡಿದ್ದರು. ಇದರು ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು, ಆಕೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.
ಅದಕ್ಕೂ ಮುನ್ನ ವಿದ್ಯಾರ್ಥಿಯ ಪಾಲಕರು ನೀವು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಹೌದು ಎಂದು ಉತ್ತರ ನೀಡಿದ್ದಳು. ಶಿಕ್ಷಕಿಯ ವಾಟ್ಸ್​ಆ್ಯಪ್​ ಸ್ಟೇಟಸ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಅದು ಶಾಲೆಯ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು, ತಕ್ಷಣ ಆಕೆಯನ್ನು ಶಾಲೆಯಿಂದಲೇ ಹೊರದಬ್ಬಿದ್ದಾರೆ.
Teacher Nafisa suspended by Neerja Modi School for her pro Pakistan post. 😇pic.twitter.com/YmrCDkwwzZ
— Facts (@BefittingFacts)October 25, 2021

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಭಾನುವಾರ (ಅ.24) ನಡೆದ ಪಂದ್ಯದಲ್ಲಿ ಟಾಸ್ ಸೋಲಿನಿಂದಲೇ ಹಿನ್ನಡೆ ಎದುರಿಸಿದ ಭಾರತ ತಂಡಕ್ಕೆ ಬಳಿಕ ಬೌಲಿಂಗ್ ವೇಳೆ ಇಬ್ಬನಿ ಸಮಸ್ಯೆ ಬಹುವಾಗಿ ಕಾಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಶಹೀನ್ ಷಾ ಅಫ್ರಿದಿ (31ಕ್ಕೆ 3) ಮಾರಕ ದಾಳಿಯಿಂದ ಆಘಾತ ನೀಡಿದರು. ನಾಯಕ ವಿರಾಟ್ ಕೊಹ್ಲಿ (57ರನ್, 49 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ರಿಷಭ್ ಪಂತ್ (39 ರನ್, 30 ಎಸೆತ, 2 ಬೌಂಡರಿ, 2 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನಿರ್ವಹಣೆ ನೆರವಿನಿಂದ ಭಾರತ ತಂಡ 7 ವಿಕೆಟ್‌ಗೆ 151 ರನ್ ಪೇರಿಸಿತು. ಪ್ರತಿಯಾಗಿ ಪಾಕ್ ತಂಡ, ಮೊಹಮದ್ ರಿಜ್ವಾನ್ (78*ರನ್, 55 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಬಾಬರ್ ಅಜಮ್ (68*ರನ್, 52 ಎಸೆತ, 6 ಬೌಂಡರಿ, 2 ಸಿಕ್ಸರ್) ಜೋಡಿಯ ವಿಕೆಟ್ 17.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 152 ರನ್‌ಗಳಿಸಿ ಜಯದ ನಗೆ ಬೀರಿತು.(ಏಜೆನ್ಸೀಸ್​)
ಸುಲಿಗೆ ಕೇಸ್​ನಲ್ಲಿ ಬಂಧಿಯಾದ ಗ್ಯಾಂಗ್​ಸ್ಟರ್​ ಗರ್ಲ್​ಫ್ರೆಂಡ್​​ ಹಿನ್ನೆಲೆ ಕೇಳಿದ್ರೆ ದಂಗಾಗ್ತೀರಾ..!

ಯಾರು ಇಲ್ಲದ ವೇಳೆ ಪ್ರಿಯಕರನ ಮನೆಗೆ ಪ್ರೇಯಿಸಿ ಎಂಟ್ರಿ: ನೂಡಲ್ಸ್​ ತಿಂದು, ವಿಷ ಸೇವಿಸಿ ಆತ್ಮಹತ್ಯೆಗೆ ಶರಣು..!

ಅಮ್ಮಾ ಸಾಯಿಸ್ಬೇಡ… ಬಿಟ್ಬಿಡು.. ಎಂದ್ರೂ ಕೇಳಲಿಲ್ಲ; ಮಕ್ಕಳಿಗೂ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 4 =
Remember me
