ಚೆನ್ನೈ:ಮಕ್ಕಳ ಭವಿಷ್ಯಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಪಾಲಕರು ಕಣ್ಣಿಗೆ ಕಾಣುವ ದೇವರೆಂದರೆ ತಪ್ಪಾಗಲಾರದು. ತಮ್ಮಿಷ್ಟಗಳನ್ನು ಮುಚ್ಚಿಟ್ಟು ಮಕ್ಕಳ ಬಯಕೆಗಳನ್ನು ಈಡೇರಿಸುತ್ತಾ ಅದರಲ್ಲೇ ತಮ್ಮ ಖುಷಿ ಕಾಣುತ್ತಾರೆ. ಹೀಗಿರುವಾಗ ಮಕ್ಕಳೇ ಪಾಲಕರಿಗೆ ಸರ್ಪ್ರೈಸ್​ ಗಿಫ್ಟ್​ ನೀಡಿದಾಗ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಗೊತ್ತಾ? ಆ ಕ್ಷಣಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ.
ತಮಿಳುನಟ ಮಾಧವನ್​ ಅವರು ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಬೆಲೆಕಟ್ಟಲಾಗದ ಕ್ಷಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಜನವರಿ 5 ರಂದು ವಿಘ್ನೇಶ್​ ಸಮ್ಮು ಎಂಬಾತ ಟ್ವಿಟರ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದು, ಅದನ್ನು ಮಾಧವನ್​ ಶೇರ್​ ಮಾಡಿದ್ದಾರೆ. 4 ಲಕ್ಷಕ್ಕೂ ಅಧಿಕ ವೀಕ್ಷಣೆ ಗಿಟ್ಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಮೂಲಕ ಮೆಚ್ಚುಗೆ ಮಹಾಪೂರ ಗಳಿಸಿದೆ.
ವಿಡಿಯೋದಲ್ಲಿ ಏನಿದೆ?ಮಗ ಕೊಂಡುತಂದಿದ್ದ ಬ್ಯಾಗ್​ ಒಂದರಲ್ಲಿದ್ದ ಬಾಕ್ಸ್​ ಅನ್ನು ಓಪನ್​ ಮಾಡುತ್ತಾಳೆ. ಆ ಬಾಕ್ಸ್​ನಲ್ಲಿರುವುದು 8800 ರೂ. ಬೆಲೆ ಬಾಳುವ ರೆಡ್​ಮಿ ಮೊಬೈಲ್​ ಫೋನ್​ ಎಂದು ತಿಳಿದತಕ್ಷಣ ಮಗನ ಕಡೆ ಧನ್ಯತಾ ಭಾವದಿಂದ, ನಗು ವ್ಯಕ್ತಪಡಿಸಿರುವ ವಿಡಿಯೋ ನಿಜಕ್ಕೂ ಬೆಲೆಕಟ್ಟಲಾಗದು. ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿರುವ ಮಾಧವನ್​, ಸಂತೋಷಕ್ಕೆ ಯಾವುದೇ ಬೆಲೆ ಇಲ್ಲ ಎಂದು ಬರೆದುಕೊಂಡಿದ್ದಾರೆ.(ಏಜೆನ್ಸೀಸ್​)
இந்த மகிழ்ச்சிக்கு விலை இல்லை❤️❤️🙏🙏https://t.co/qtUksHYSb8
— Ranganathan Madhavan (@ActorMadhavan)January 7, 2022

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − nine =
Remember me
