ತಿರುವನಂತಪುರಂ (ಕೇರಳ):ಮಹಾಮಾರಿ ಕರೊನಾ ಕುರಿತಾದ ಸಹಾಯದ ನಿರೀಕ್ಷೆಗಾಗಿ ಫೋನ್​ ನಂಬರ್​ ಶೇರ್​​ ಮಾಡಿಕೊಂಡ ಅನೇಕ ಮಹಿಳೆಯರಿಗೆ ಅಶ್ಲೀಲ ಸಂದೇಶಗಳು, ಚಿತ್ರಗಳು ಮತ್ತು ಪೋರ್ನ್​ ವಿಡಿಯೋಗಳು ಬರುತ್ತಿದ್ದು, ಇಂತಹ ಕಹಿ ಅನುಭವವನ್ನು ಅನುಭವಿಸಿದ ಮಹಿಳೆಯರು ಟ್ವೀಟ್​ ಮೂಲಕ ತಮ್ಮ ನೋವನ್ನು ಹೊರಹಾಕಿದ್ದಾರೆ.
ಒಂದು ವಾರದ ಹಿಂದೆ ಶಾಸ್ವತಿ ಶಿವ ಎಂಬಾಕೆ ಕೆಲವು ದುಷ್ಕರ್ಮಿಗಳಿಂದ ತೀವ್ರ ಮಾನಸಿಕ ನೋವು ಅನುಭವಿಸಿದ್ದಾರೆ. ಕೋವಿಡ್​ ಸೋಂಕು ತಗುಲಿದ್ದ ತನ್ನ ಕುಟುಂಬದ ಸದಸ್ಯರೊಬ್ಬರಿಗೆ ಏನಾದರೂ ಅಗತ್ಯ ನೆರವು ಸಿಗಬಹುದೇನೋ ಎಂಬ ಭರವಸೆಯಿಂದ ತನ್ನ ಫೋನ್​ ನಂಬರ್​ ಶೇರ್​ ಮಾಡಿಕೊಂಡಿದ್ದರು. ಬ್ಲಡ್​ ಬ್ಯಾಂಕ್​, ವೆಂಟಿಲೇಟರ್​ ಬೆಡ್​ ಮತ್ತು ಪ್ಲಾಸ್ಮಾ ದಾನಿ ಅಗತ್ಯವಿದೆಯೇ ಎಂಬ ಕರೆಗಳು ಸಹ ಬಂದವು.
ಆದರೆ, ಓರ್ವ ಕರೆ ಮಾಡಿ ನೀವಿನ್ನೂ ಒಂಟಿಯಾ? ನಿಮಗೆ ಮದುವೆ ಆಗಿಲ್ಲವೇ? ಎಂದು ಪ್ರಶ್ನಿಸಿದ್ದಾನೆ. ಇದರ ನಡುವೆ ಒಂದೇ ಸಮಯದಲ್ಲಿ ಏಳು ಮಂದಿ ವಿಡಿಯೋ ಕಾಲ್​ ಮಾಡಿದ್ದು, ಇದರಿಂದ ಹೆದರಿದ ಶಾಸ್ವತಿ ತನ್ನ ಮೊಬೈಲ್​ ಫೋನ್​ ಅನ್ನು ಸೈಲೆಂಟ್​ನಲ್ಲಿ ಇಡುವಂತಾಯಿತು. ವೈದ್ಯಕೀಯ ಸೌಲಭ್ಯ ಅರಸಿ ನಂಬರ್​ ಶೇರ್​ ಮಾಡಿಕೊಂಡವಳಿಗೆ ಇದೀಗ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ.
ಶಾಸ್ವತಿ ಒಬ್ಬರೇ ಅಲ್ಲ ಅನೇಕ ಮಹಿಳೆಯರಿಗೆ ಈ ರೀತಿಯ ಅನುಭವವಾಗಿದೆ. ರಾಥಿ ಎಂಬಾಕೆ ಟ್ವೀಟ್​ ಮಾಡಿದ್ದು, ಸಹಾಯ ಕೇಳಿದ್ದಕ್ಕೆ ಏಪ್ರಿಲ್​ 26 ಅನೇಕ ಅಶ್ಲೀಲ ಚಿತ್ರಗಳು ರವಾನೆ ಆಗಿವೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಟ್ವಿಟರ್​ ಬಳಕೆದಾರ ತಮ್ಮ ಮೊಬೈಲ್​ಗೆ ಪೋರ್ನ್​ ವಿಡಿಯೋ ಮತ್ತು ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಇನ್ನೊರ್ವ ಟ್ವಿಟರ್​ ಬಳಕೆದಾರ ತಮ್ಮ ನೋವಿನ ಮಾತನ್ನು ಅಕ್ಷರಕ್ಕಿಳಿಸಿದ್ದು, ಫೋನ್​ ಮಾಡಿದ ಓರ್ವ ಫೋನ್​ ಸೆಕ್ಸ್​ ಬಗ್ಗೆ ಕೇಳಿದನಂತೆ. ಶಾಸ್ವತಿ ತಮಗಾದ ಅನುಭವವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡುತ್ತಿದ್ದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಇನ್ನು ಮಹಿಳೆಯರಿಗೆ ಬಂದ ಫೋನ್​ ನಂಬರ್​ ಅನ್ನು ಮಾಧ್ಯಮ ಬೆನ್ನತ್ತಿ ಹೋದಾಗ ಅವುಗಳು ಸ್ವಿಚ್​ ಆಫ್​ ಆಗಿರುವುದು ಕಂಡುಬಂದಿದೆ. ಇದರ ಹಿಂದೆ ಆಸ್ಪತ್ರೆಯ ಸಿಬ್ಬಂದಿಯ ಕೈವಾಡವು ಇರಬಹುದು ಎಂದು ತಿಳಿದುಬಂದಿದೆ. ನೆರವಿಗಾಗಿ ಆಸ್ಪತ್ರೆ ಮೊರೆ ಹೋದವರ ನಂಬರ್​ ಶೇರ್​ ಮಾಡಿ ಈ ಕುಚೇಷ್ಟೇ ಮಾಡುತ್ತಿರುವ ಸಂಶಯ ವ್ಯಕ್ತವಾಗಿದೆ. ಸದ್ಯ ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​)
Been looking for plasma donors, and my no has been around in some groups + stories. I've fielded calls from men asking me if I'm single, if I can share photos, my dp is nice etc, and 1 "friend" who said he'd help if 'at least now you go on a date with me'Some men are DISGUSTING— Shasvathi Siva (@shasvathi)April 15, 2021
Been looking for plasma donors, and my no has been around in some groups + stories. I've fielded calls from men asking me if I'm single, if I can share photos, my dp is nice etc, and 1 "friend" who said he'd help if 'at least now you go on a date with me'Some men are DISGUSTING
https://twitter.com/ayoitsharsh/status/1385477785938841607?s=20
Porn in response to oxygen cylinder leads. Thank you men, what would we do without the pure rage you induce?https://t.co/riLKIQ2SSB— সোহিনী | ஸோஹினி | Sohini (@sohinichat)April 23, 2021
Porn in response to oxygen cylinder leads. Thank you men, what would we do without the pure rage you induce?https://t.co/riLKIQ2SSB
ಕಿಸ್ ಹುಡುಗಿಯ ಮೊದಲ ತೆಲುಗು ಹಾಡು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
