ಗಾಂಧಿನಗರ:ಜೂನ್​ 11ರಂದು ದೇವಸ್ಥಾನದಲ್ಲಿ ತನ್ನನ್ನೇ ತಾನು ಮದುವೆ ಆಗುವುದಾಗಿ ಹೇಳಿರುವ ವಡೋದರಾ ಮೂಲದ 24 ವರ್ಷದ ಕ್ಷಮಾ ಬಿಂದು ವಿರುದ್ಧ ವಡೋದರಾ ನಗರ ಘಟಕದ ಬಿಜೆಪಿ ಅಧ್ಯಕ್ಷೆ ಸುನಿತಾ ಶುಕ್ಲಾ ಅವರು ಟೀಕಾ ಪ್ರಹಾರ ನಡೆಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಸುನಿತಾ ಶುಕ್ಲಾ, ಇಂತಹ ಮದುವೆಗಳು ಹಿಂದು ಸಂಸ್ಕೃತಿಗೆ ವಿರುದ್ಧವಾಗಿವೆ. ಆಕೆ ದೇವಸ್ಥಾನದಲ್ಲಿ ಮದುವೆ ಆಗುವುದಾದರೆ, ನಾವು ಖಂಡಿತ ಅದಕ್ಕೆ ಅನುಮತಿಯನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.
Gujarat | I'm against the choice of venue, she'll not be allowed to marry herself in any temple. Such marriages are against Hinduism. This will reduce the population of Hindus. If anything goes against religion then no law will prevail: BJP leader Sunita Shukla (03.06)https://t.co/Jf0y13WOiEpic.twitter.com/3Cus9JMwsR
— ANI (@ANI)June 4, 2022

ಬಿಂದು ಓರ್ವ ಮಾನಸಿಕ ಅಸ್ವಸ್ಥೆ. ಹೆಣ್ಣು ಹೆಣ್ಣನ್ನೇ ಹಾಗೂ ಗಂಡು ಗಂಡನ್ನೇ ಮದುವೆಯಾಗಬಹುದು ಅಂತಾ ಹಿಂದು ಸಂಸ್ಕೃತಿಯಲ್ಲಿ ಎಲ್ಲಾದರೂ ಬರೆದಿದೆಯಾ? ಅವಳು ಬೇಕಾದರೆ ಮದುವೆಯಾಗಲಿ. ಆದರೆ, ಬಿಂದು ಆಯ್ಕೆ ಮಾಡಿಕೊಂಡ ಸ್ಥಳಕ್ಕೆ ನನ್ನ ವಿರೋಧವಿದೆ. ಹಿಂದು ದೇವಸ್ಥಾನದಲ್ಲಿ ಆಕೆ ಆಕೆಯನ್ನೇ ಮದುವೆಯಾಗಲು ನಾವು ಬಿಡುವುದಿಲ್ಲ. ಇಂತಹ ಮದುವೆಗಳು ಹಿಂದು ಸಂಸ್ಕೃತಿಗೆ ವಿರೋಧವಾಗಿದೆ. ಇದರಿಂದ ಹಿಂದು ಜನಸಂಖ್ಯೆ ಕುಂಠಿತವಾಗಲಿದೆ. ಧರ್ಮಕ್ಕೆ ವಿರುದ್ಧವಾಗಿ ಏನಾದರೂ ನಡೆದರೆ, ಯಾವುದೇ ಕಾನೂನು ಜಾರಿಯಾಗುವುದಿಲ್ಲ ಎಂದು ಸುನೀತಾ ಶುಕ್ಲಾ ಅಸಮಾಧಾನ ಹೊರಹಾಕಿದರು.
ಯಾರಿದು ಕ್ಷಮಾ ಬಿಂದುಕ್ಷಮಾ, ಸಮಾಜಶಾಸ್ತ್ರದಲ್ಲಿ ಪದವಿ ಪಡೆದಿದ್ದು, ವಡೋದರದ ಖಾಸಗಿ ಸಂಸ್ಥೆಯಲ್ಲಿ ಹಿರಿಯ ನೇಮಕಾತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಷಮಾರ ತಂದೆ-ತಾಯಿ ಇಬ್ಬರು ಇಂಜಿನಿಯರ್​ಗಳು. ತಂದೆ ದಕ್ಷಿಣ ಆಫ್ರಿಕಾದಲ್ಲಿದ್ದರೆ, ತಾಯಿ ಅಹಮದಾಬಾದ್​ನಲ್ಲಿ ನೆಲೆಸಿದ್ದಾರೆ.
A post shared by Kshama Bindu (@kshamachy)

ಹೆಚ್ಚಿನ ಹುಡುಗಿಯರು ತನ್ನನ್ನು ಮದುವೆ ಆಗುವವನು ಕುದುರೆಯ ಮೇಲೆ ಬಂದು ಅದ್ಧೂರಿಯಾಗಿ ಮದುವೆಯಾಗಿ ತಮ್ಮೊಂದಿಗೆ ಕರೆದೊಯ್ಯುಬೇಕು ಎಂಬ ಕನಸು ಕಾಣುತ್ತಿದ್ದರೆ, ಕ್ಷಮಾ ಮಾತ್ರ ಅದಕ್ಕೆ ತದ್ವಿರುದ್ಧವಾಗಿ ಯೋಚಿಸುತ್ತಿದ್ದಾರೆ. ತನ್ನನ್ನು ತಾನೇ ಮದುವೆಯಾಗಲು ನಿರ್ಧಾರ ಮಾಡಿದ್ದು, ಜೂನ್ 11 ರಂದು ಹಿಂದೂ ಸಂಪ್ರದಾಯದಂತೆ ಎಲ್ಲಾ ವಿಧಿ-ವಿಧಾನಗಳ ರೀತಿಯಲ್ಲಿ ಮದುವೆಯಾಗಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಮದುವೆ ನಂತರ ಗೋವಾಗೆ ಹನಿಮೂನ್‍ಗೆ ಸಹ ಹೋಗಲಿದ್ದಾರಂತೆ.
ಈ ಬಗ್ಗೆ ಮಾಧ್ಯಮಗಳ ಜತೆಯೂ ಕ್ಷಮಾ ಮಾತನಾಡಿದ್ದಾಳೆ. ಭಾರತದ ಮೊದಲ ಏಕವ್ಯಕ್ತಿ ವಿವಾಹ ನನ್ನದಾಗಿರಲಿದೆ. ಈ ರೀತಿ ಇದುವರೆಗೆ ಯಾರೂ ಮದುವೆಯಾಗಲಿಲ್ಲ. ಮದುವೆಯಾಗಿರುವವರ ಹಲವಾರು ಘಟನೆಗಳನ್ನು ನೋಡಿದ್ದೇನೆ. ಅವೆಲ್ಲಾ ನೋಡಿದ ಮೇಲೆ ಮದುವೆಯಾಗದಿರುವುದೇ ಬೆಸ್ಟ್​ ಎನ್ನಿಸಿತು. ಆದರೆ ವಧುವಿನ ರೂಪದಲ್ಲಿ ನನ್ನನ್ನು ನಾನೇ ನೋಡಿಕೊಳ್ಳುವ ಆಸೆ. ನನ್ನನ್ನು ನಾನು ತುಂಬಾ ಪ್ರೀತಿಸುತ್ತೇನೆ. ಆದ್ದರಿಂದ ನನ್ನನ್ನು ನಾನೇ ಮದುವೆ ಯಾಕೆ ಆಗಬಾರದು ಎಂದು ಯೋಚಿಸಿ ಈ ತೀರ್ಮಾನ ತೆಗೆದುಕೊಂಡೆ ಅಂದಿದ್ದಾಳೆ.
A post shared by Kshama Bindu (@kshamachy)

ಜನರು ಪ್ರೀತಿ ಮಾಡುವವರನ್ನು ಮದುವೆಯಾಗುತ್ತಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ. ಆದ್ದರಿಂದ ಈ ಮದುವೆಯಾಗುತ್ತಿದ್ದೇನೆ ಎಂದಿದ್ದಾಳೆ. ಮದುವೆಗೆ ಪಾಲಕರೂ ಒಪ್ಪಿಗೆ ಸೂಚಿಸಿ ಆಶೀರ್ವಾದ ಮಾಡಿದ್ದಾರೆ. ಗೋತ್ರಿಯ ದೇವಸ್ಥಾನದಲ್ಲಿ ಮದುವೆ ನಡೆಯಲಿದೆ. ನಂತರ ನಾನೊಬ್ಬಳೇ ಹನಿಮೂನ್‍ಗೆ ಗೋವಾಕ್ಕೆ ಹೋಗಲಿದ್ದೇನೆ ಎಂದಿದ್ದಾಳೆ.(ಏಜೆನ್ಸೀಸ್​)
ಅವನೂ ಬೇಡ… ಅವಳೂ ಬೇಡ… ಎಂದು ತನ್ನನ್ನು ತಾನೇ ಮದುವೆಯಾಗಿ ಹನಿಮೂನ್​ಗೂ ರೆಡಿಯಾದ ಯುವತಿ!

ಹೈದರಾಬಾದ್​ನಲ್ಲಿ MLAಗೆ ಸೇರಿದ ಕಾರಿನೊಳಗೆ ಅಪ್ರಾಪ್ತೆ ಮೇಲೆ ಗ್ಯಾಂಗ್​ರೇಪ್: ಗೃಹಸಚಿವರ ಮೊಮ್ಮಗನ ವಿರುದ್ಧವೂ ಆರೋಪ

ಸಿನಿಮಾ ಮಾಡಿ ಕೈಸುಟ್ಟುಕೊಂಡ ಬಳಿಕ ಅಡ್ಡದಾರಿ ಹಿಡಿದು ಪೊಲೀಸರ ಅತಿಥಿಯಾದ ಸ್ಯಾಂಡಲ್​ವುಡ್​ ನಿರ್ಮಾಪಕ!

Sign in to your account
Please enter an answer in digits:two × 3 =
Remember me
