ನವದೆಹಲಿ:ಜಗತ್ತಿನ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ಹವಾಮಾನ ಬದಲಾವಣೆಯಲ್ಲಿ ಭಾರತದ ಪಾತ್ರ ಅತ್ಯಲ್ಪವಾಗಿರುವಾಗಲೂ ಪರಿಸರ ಸಂರಕ್ಷಣೆಗಾಗಿ ಭಾರತವು ಹಲವು ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ವಿಶ್ವ ಪರಿಸರ ದಿನದ ಸ್ಮರಣಾರ್ಥ ಈಶ ಫೌಂಡೇಷನ್​ ಸಂಸ್ಥಾಪಕ ಸದ್ಗುರು ಅವರು ರಾಷ್ಟ್ರ ರಾಜಧಾನಿಯ ವಿಜ್ಞಾನ ಭವನದಲ್ಲಿ ಹಮ್ಮಿಕೊಂಡಿರುವ ಮಣ್ಣು ಉಳಿಸಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರದ ಹಲವು ಯೋಜನೆಗಳು ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುತ್ತವೆ. ಅದು ಸ್ವಚ್ಛ ಭಾರತ್ ಮಿಷನ್ ಆಗಿರಲಿ, ನಮೈ ಗಂಗೆಯಾಗಿರಲಿ ಅಥವಾ ಒಂದು ಸೂರ್ಯ, ಒಂದು ಗ್ರಿಡ್ ಆಗಿರಲಿ ಭಾರತದ ಪ್ರಯತ್ನಗಳು ಬಹುಮುಖವಾಗಿವೆ ಎಂದು ಹೇಳಿದರು.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅತಿದೊಡ್ಡ ಇಂಗಾಲದ ಹೊರಸೂಸುವಿಕೆಗೆ ಕಾರಣವಾಗಿದ್ದು, ಹವಾಮಾನ ಬದಲಾವಣೆಯಲ್ಲಿ ಹೆಚ್ಚಿನ ಪಾತ್ರಗಳನ್ನು ಹೊಂದಿವೆ. ಆದರೆ, ಭಾರತ ಹವಾಮಾನ ಬದಲಾವಣೆಯಲ್ಲಿ ಕಡಿಮೆ ಪಾತ್ರವನ್ನು ಹೊಂದಿದ್ದರೂ ಪರಿಸರ ಸಂರಕ್ಷಣೆಗೆ ಬೇಕಾದ ಹಲವು ಪ್ರಯತ್ನಗಳನ್ನು ಭಾರತ ಮಾಡುತ್ತಿದೆ ಎಂದರು.
ಇಂದು ಭಾರತವು ತನ್ನ ಗುರಿಗಿಂತ 5 ತಿಂಗಳ ಮುಂಚಿತವಾಗಿಯೇ ಪೆಟ್ರೋಲ್‌ನಲ್ಲಿ ಶೇ. 10 ರಷ್ಟು ಎಥೆನಾಲ್ ಮಿಶ್ರಣವನ್ನು ಸಾಧಿಸಿದೆ. ಭಾರತ ಇಂದು ಅನುಸರಿಸುತ್ತಿರುವ ಜೀವವೈವಿಧ್ಯ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ನೀತಿಗಳಿಂದ ವನ್ಯಜೀವಿಗಳ ಸಂಖ್ಯೆಯಲ್ಲಿ ದಾಖಲೆಯ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಹೇಳಿದರು.
ಈ ಹಿಂದೆ ನಮ್ಮ ರೈತರಿಗೆ ಮಣ್ಣಿನ ಆರೋಗ್ಯದ ಬಗ್ಗೆ ಅರಿವಿರಲಿಲ್ಲ. ಈ ಸಮಸ್ಯೆಯನ್ನು ಹೋಗಲಾಡಿಸಲು, ದೇಶದ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ನೀಡಲು ಬೃಹತ್ ಅಭಿಯಾನವನ್ನು ಪ್ರಾರಂಭಿಸಲಾಯಿತು. ಈ ವರ್ಷದ ಬಜೆಟ್‌ನಲ್ಲಿ ಗಂಗಾ ನದಿ ಕಾರಿಡಾರ್‌ನಲ್ಲಿ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವುದಾಗಿ ಘೋಷಿಸಿದ್ದೇವೆ ಎಂದರು.(ಏಜೆನ್ಸೀಸ್​)
ಹನಿಮೂನ್​ ವೇಳೆ ಬೆನ್ನು ಹುಷಾರು! ದೀಪಕ್​ ಚಹರ್​ಗೆ ಎಚ್ಚರಿಕೆ ನೀಡಿದ ಸಹೋದರಿ ಮಾಲತಿ

ಎಣ್ಣೆ ಬಿಡ್ತಿಲ್ಲ, ದುಡ್ಡು ಉಳಿತಿಲ್ಲ… ಹುಂಜಕ್ಕೆ ಒಂದೇ ಒಂದು ಪೆಗ್​ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಮಾಲೀಕ!

ಟಾಲಿವುಡ್​ ಪವರ್​ಸ್ಟಾರ್​ ಪವನ್​ ಕಲ್ಯಾಣ್​ ಭೇಟಿಗಾಗಿ ಬಳ್ಳಾರಿಯ ಅಭಿಮಾನಿಯಿಂದ 400 KM ಪಾದಯಾತ್ರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
