ಮುಂಬೈ:ಬಾಲಿವುಡ್‌ನ ಸುಪ್ರಸಿದ್ಧ ಗಾಯಕ ಮತ್ತು ನಟ ಯೋ ಯೋ ಹನಿ ಸಿಂಗ್ ಅವರ ವಿರುದ್ಧ ಪತ್ನಿಯಿಂದಲೇ ಲೈಂಗಿಕ ದೌರ್ಜನ್ಯದ ಕೇಸ್‌ ದಾಖಲಾಗಿದೆ. ಲೈಂಗಿಕ ದೌರ್ಜನ್ಯದ ಕೇಸ್‌ ಮಾತ್ರವಲ್ಲದೇ ಯೋ ಯೋ ವಿರುದ್ಧ ಕೌಟುಂಬಿಕ ಹಿಂಸೆ, ಮಾನಸಿಕ ಕಿರುಕುಳ ಮತ್ತು ಆರ್ಥಿಕ ವಂಚನೆ ಪ್ರಕರಣವನ್ನು ಪತ್ನಿ ಶಾಲಿನಿ ತಲ್ವಾರ್​ ದಾಖಲು ಮಾಡಿದ್ದಾರೆ.
‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕಾಯ್ದೆ’ ಅಡಿ ದೆಹಲಿಯ ಟಿಸ್ ಹಜಾರಿ ಕೋರ್ಟ್‌ನಲ್ಲಿ ಯೋ ಯೋ ಹನಿ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪತ್ನಿ ಮಾಡಿರುವ ಆರೋಪಕ್ಕೆ ಉತ್ತರ ನೀಡುವಂತೆ ಕೋರ್ಟ್​ ಈಗಾಗಲೇ ನೋಟಿಸ್​ ನೀಡಿದೆ.
ಈ ಹಿಂದೆ ರಿಯಾಲಿಟಿ ಶೋ ಮೂಲಕ ಹನಿ ಸಿಂಗ್​ ತಮ್ಮ ಪತ್ನಿಯನ್ನು ಎಲ್ಲರಿಗೂ ಪರಿಚಯ ಮಾಡಿದ್ದರು. ಅಂದಿನಿಂದ ಅನೇಕ ಸಂದರ್ಭಗಳಲ್ಲಿ ಇಬ್ಬರು ಒಟ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಇದೀಗ ಹನೀಸಿಂಗ್​ ವಿರುದ್ಧ ದಿಢೀರ್​ ಆರೋಪ ಕೇಳಿಬಂದಿರುವುದನ್ನು ನೋಡಿ ಬಾಲಿವುಡ್​ ಸಹ ಆಘಾತಕ್ಕೆ ಒಳಗಾಗಿದೆ. ಶಾಲಿನಿ ಅವರು ಸುಮಾರು 120 ಪುಟಗಳ ದೂರನ್ನು ನೀಡಿದ್ದು, ಅದರಲ್ಲಿ ಗಂಡನ ದುಷ್ಕೃತ್ಯಗಳನ್ನು ವಿವರವಾಗಿ ಬರೆದಿದ್ದಾರೆ. ಗಂಡನ ನನಗೆ ನಿರಂತರ ಕಿರುಕುಳ ನೀಡುತ್ತಿದ್ದರು ಮತ್ತು ಕೊಲೆಯ ಬೆದರಿಕೆಯು ಇತ್ತು. ಗಂಡನ ಮನೆಯಲ್ಲಿ ಎಲ್ಲರೂ ರಾಕ್ಷಸರ ರೀತಿ ವರ್ತಿಸುತ್ತಿದ್ದರು ಎಂದು ಶಾಲಿನಿ ಆರೋಪಿಸಿದ್ದಾರೆ. ಗಂಡನಿಗೆ ಡಜನ್​ಗೂ ಅಧಿಕ ಮಹಿಳೆಯರ ಜತೆ ವಿವಾಹೇತರ ಸಂಬಂಧ ಇತ್ತು. ಈ ಬಗ್ಗೆ ಪ್ರಶ್ನಿಸಿದರೆ ಮೃಗೀಯವಾಗಿ ಹಿಂಸಿಸುತ್ತಿದ್ದರು ಎಂದು ಶಾಲಿನಿ ಗಂಭೀರ ಆರೋಪ ಮಾಡಿದ್ದಾರೆ.
ಇದೀಗ ಹನೀ ಸಿಂಗ್​ ತಂದೆ ಅಥವಾ ಮಾವನ ವಿರುದ್ಧ ಶಾಲಿನಿ ಸಂಚಲನ ಸೃಷ್ಟಿಸುವಂತಹ ಗಂಭೀರ ಆರೋಪ ಮಾಡಿದ್ದಾರೆ. ಮಾವನು ಕೂಡ ಲೈಂಗಿಕ ಕಿರುಕುಳ ನೀಡಿದ್ದಾರೆ. ಒಂದು ದಿನ ನಾನು ಕೋಣೆಯಲ್ಲಿ ಬಟ್ಟೆ ಬದಲಾಯಿಸುವಾಗ ಹನಿ ಸಿಂಗ್​ ತಂದೆ ಪಾನಮತ್ತ ಸ್ಥಿತಿಯಲ್ಲಿ ನನ್ನ ಕೋಣೆಯೊಳಗೆ ನುಗ್ಗಿದರು. ನನ್ನ ಎದೆಯನ್ನು ಹಿಡಿದುಕೊಂಡು ಕಿರುಕುಳ ನೀಡಿದರು ಎಂದು ಆರೋಪ ಮಾಡಿದ್ದಾರೆ.
ನನಗೆ ನ್ಯಾಯ ಕೊಡಿಸಿ ಎಂದಿರುವ ಶಾಲಿನಿ, 20 ಕೋಟಿ ರೂಪಾಯಿ ಪರಿಹಾರ, ತಿಂಗಳಿಗೆ 5 ಲಕ್ಷ ರೂಪಾಯಿ ಹಣ, ಮುಂಬೈನ ಪ್ರತಿಷ್ಠಿತ ಜಾಗದಲ್ಲಿ ಫುಲ್‌ ಫರ್ನಿಷ್‌ ಆಗಿರುವ ಬಂಗಲೆ ನೀಡಲು ಆದೇಶಿಸಬೇಕು ಹಾಗೂ ತಾನು ಮದುವೆಯ ವೇಳೆ ನೀಡಿರುವ ವರದಕ್ಷಿಣೆಯನ್ನು ಸಂಪೂರ್ಣವಾಗಿ ಹಿಂದಿರುಗಿಸಲು ಗಂಡನಿಗೆ ಆದೇಶಿಸಬೇಕು ಎಂದು ಶಾಲಿನಿ ಕೋರಿದ್ದಾರೆ. ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಕೋರ್ಟ್‌ ಯೋ ಯೋ ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದು ಇದೇ 28ರ ಒಳಗೆ ಉತ್ತರಿಸುವಂತೆ ಹೇಳಿದೆ.
ಯೋ ಯೋ ಹನಿ ಸಿಂಗ್‌ ಅವರ ನಿಜವಾದ ಹೆಸರು ಹಿರ್ದೇಶ್ ಸಿಂಗ್. ದೀಪಿಕಾ ಪಡುಕೊಣೆ ಮತ್ತು ಸೈಫ್ ಅಲಿ ಖಾನ್ ಚಿತ್ರ ಕಾಕ್ ಟೈಲ್‌ನ ಆಂಗ್ರೇಜಿ ಬೀಟ್ ಹಾಡು ಸೂಪರ್ ಹಿಟ್ ಆದ ಮೇಲೆ ಯೋ ಯೋ ಭಾರೀ ಖ್ಯಾತಿ ಗಳಿಸಿದರು.(ಏಜೆನ್ಸೀಸ್​)
ಮೂರನೇ ಅಲೆ ಕರ್ನಾಟಕದ ಬಾಗಿಲಿಗೆ ಬಂದು ನಿಂತಿದೆ: ಡಾ. ಸಿ.ಎನ್. ಮಂಜುನಾಥ್

ನೋಡಲಾಗದ ಸಂದೇಶಗಳು! ನಟಿಯರು ಎದುರಿಸೋ ದಿನನಿತ್ಯದ ಸಮಸ್ಯೆ ಬಿಚ್ಚಿಟ್ಟ ಗಾಯಕಿ ಚಿನ್ಮಯಿ

40 ಚಪಾತಿ ತಿಂದು ದೃಷ್ಟಿ ಕಳೆದುಕೊಂಡ 12 ವರ್ಷದ ಬಾಲಕ! ತಲೆಯಲ್ಲಿ ಕೀವು: ವೈದ್ಯರೇ ಶಾಕ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 10 =
Remember me
