ನವದೆಹಲಿ:ವೈವಾಹಿಕ ಅತ್ಯಾಚಾರವನ್ನು ಅಪರಾಧಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​ ನ್ಯಾಯಮೂರ್ತಿ ಸಿ. ಹರಿ ಶಂಕರ್​, ಮದುವೆಯಾದ ಬಳಿಕವೂ ಸ್ವೇಚ್ಛೆಯಿಂದ ಲೈಂಗಿಕ ಸಂಬಂಧ ಹೊಂದಬಹುದು ಎಂಬ ಎಷ್ಟೇ ನಿರೀಕ್ಷೆ ಇದ್ದರೂ, ನೀವು ನಿಮ್ಮ ಸಂಗಾತಿಯೊಂದಿಗೆ ಲೈಂಗಿಕ ಸಂಭೋಗ ಹೊಂದುವ ಹಕ್ಕನ್ನು ನೀವು ಪಡೆದಿಲ್ಲ ಎಂದು ಹೇಳಿದ್ದಾರೆ.
ಕೋರ್ಟ್​ ಸಹಾಯಕಿ ವಕೀಲೆ ರೆಬೆಕಾ ಜಾನ್​ ಮಾತನಾಡಿ, ದಾಂಪತ್ಯದಲ್ಲಿ ಲೈಂಗಿಕ ಸಂಬಂಧದ ನ್ಯಾಯಯುತವಾದ ನಿರೀಕ್ಷೆ ಇರುತ್ತದೆ. ಅದನ್ನು ದಂಡಿಸಲು ಆಗುವುದಿಲ್ಲ. ಆದರೆ ನಿರೀಕ್ಷೆಯು ಬಲತ್ಕಾರ ಮತ್ತು ಬಲದ ಆಧಾರದ ಮೇಲೆ ದೈಹಿಕ ಕ್ರಿಯೆಯಾಗಿದ್ದರೆ, ಆ ಲೈಂಗಿಕ ಕ್ರಿಯೆಯು ಅಪರಾಧವಾಗಬೇಕು ಎಂದು ಕೋರ್ಟ್​ಗೆ ತಿಳಿಸಿದರು.
ವೈವಾಹಿಕ ಸಂಬಂಧದಲ್ಲಿರುವ ಪ್ರತಿಯೊಬ್ಬ ಪುರುಷನನ್ನು ಶಿಕ್ಷಿಸಲು ಪ್ರಯತ್ನಿಸಲಾಗುವುದಿಲ್ಲ. ಸಂಬಂಧದಲ್ಲಿನ ಪ್ರತಿಯೊಂದು ಕ್ರಿಯೆಯೂ ಶಿಕ್ಷೆಗೆ ಗುರಿಯಾಗುವುದಿಲ್ಲ. ಆದರೆ, ಹೆಂಡತಿಯ ಒಪ್ಪಿಗೆಯ ವಿರುದ್ಧ ಲೈಂಗಿಕ ಸಂಬಂಧದ ಕ್ರಿಯೆಯು ಅಪರಾಧವಾಗಿದ್ದು, ಅದನ್ನು ಕಾನೂನಿನ ವ್ಯಾಪ್ತಿಗೆ ತರಲು ಪ್ರಯತ್ನಿಸಲಾಗುವುದೆಂದು ಹೇಳಿದರು.
ಸದ್ಯ ದೆಹಲಿ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ರ ವಿನಾಯಿತಿಯನ್ನು ಪ್ರಶ್ನಿಸುವ ಬಹು ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ. ಸೆಕ್ಷನ್​ 375 ಪುರುಷನು ತನ್ನ ಹೆಂಡತಿಯೊಂದಿಗೆ ಬಲವಂತದ ಲೈಂಗಿಕ ಸಂಭೋಗವನ್ನು ಅತ್ಯಾಚಾರದ ಅಪರಾಧದಿಂದ ವಿನಾಯಿತಿ ನೀಡುತ್ತದೆ. ಆದರೆ, ಹೆಂಡತಿಯ ವಯಸ್ಸು 15 ವರ್ಷಕ್ಕಿಂತ ಮೇಲ್ಪಟ್ಟಿರಬೇಕು.
ಅರ್ಜಿದಾರರು ವೈವಾಹಿಕ ಅತ್ಯಾಚಾರ ವಿನಾಯಿತಿಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿದ್ದು, ಇದು ತಮ್ಮ ಪತಿಯಿಂದ ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾದ ವಿವಾಹಿತ ಮಹಿಳೆಯರ ವಿರುದ್ಧ ತಾರತಮ್ಯವನ್ನು ತೋರಿಸುತ್ತದೆ. ಈ ಪ್ರಕರಣದ ಮುಂದಿನ ವಿಚಾರಣೆ ಶುಕ್ರವಾರ (ಜ.21) ನಡೆಯಲಿದೆ.(ಏಜೆನ್ಸೀಸ್​)
ಡೇಂಜರ್ ಪ್ಯಾರಾಸಿಟಮಲ್ ಸೇವನೆ ಅತಿಯಾದರೆ ಅಡ್ಡಪರಿಣಾಮ; ನರಮಂಡಲ, ಹೃದಯ ತೊಂದರೆ ಸಾಧ್ಯತೆ

75ನೇ ಸ್ವಾತಂತ್ರ್ಯ ವರ್ಷಾಚರಣೆಗೆ ಸರ್ಕಾರದ ಸಿದ್ಧತೆ; ವರ್ಷಪೂರ್ತಿ ಅಮೃತ ಭಾರತಿಗೆ ಕನ್ನಡದಾರತಿ

ಮಾದರಿ ಉದ್ಯೋಗ ನೀತಿ ತಯಾರಿಗೆ ಸರ್ಕಾರ ಸಿದ್ಧತೆ; ಅಧಿಕಾರಿಗಳೆದುರು ಕಲ್ಪನೆ ಬಿಚ್ಚಿಟ್ಟ ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
