ಕೊಲ್ಲಂ:ಕೇರಳದ ಕೊಟ್ಟಾರಕ್ಕರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವ ವಕೀಲೆಯ ಮೃತದೇಹ ಪತ್ತೆಯಾಗಿರುವ ಘಟನೆ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಸಾವಿನ ಹಿಂದೆ ಏನೋ ಸಂಚು ಇದೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ.
ಮೃತ ವಕೀಲೆಯನ್ನು ಅಷ್ಟಮಿ ಅಜಿತ್​ ಕುಮಾರ್​ (25) ಎಂದು ಗುರುತಿಸಲಾಗಿದೆ. ಈಕೆ ಕಡವೂರ್​ ಮೂಲದವರು. ಕೊಟ್ಟಾರಕ್ಕರದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಮಧ್ಯಾಹ್ನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈಕೆ 2022ರ ಜನವರಿಯಿಂದ ಕೊಟ್ಟಾರಕ್ಕರದ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು.
ಘಟನೆ ವೇಳೆ ಮನೆಯಲ್ಲಿ ಅಷ್ಟಮಿ ಒಬ್ಬರೇ ಇದ್ದರು. ಸಂಜೆ ಪಾಲಕರು ಮನೆಗೆ ಬಂದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.
ಅಷ್ಟಮಿ ಸಾವಿನ ಬಗ್ಗೆ ಪಾಲಕರು ಸಂಶಯ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಅಷ್ಟಮಿ ಮೊಬೈಲ್​ ಫೋನ್​ ಅನ್ನು ವಶಕ್ಕೆ ಪಡೆದುಕೊಂಡಿದ್ದು, ಏನಾದರೂ ಸುಳಿವು ಸಿಗಬಹುದಾ ಎಂದು ಮೊಬೈಲ್​ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಅಷ್ಟಮಿ ಸಾವು ಕೊಲೆಯಲ್ಲ ಎಂದು ಹೇಳಲಾಗಿದೆ.(ಏಜೆನ್ಸೀಸ್​)
ಕುಡಿದ ಮತ್ತಿನಲ್ಲಿ ವಧುವಿನ ಬದಲು ಅತ್ತಿಗೆಯ ಕೊರಳಿಗೆ ಹಾರ ಹಾಕಿದ ವರ! ಮುಂದೇನಾಯ್ತು ನೀವೇ ನೋಡಿ…

ಬೆಳ್ಳಂಬೆಳಗ್ಗೆ ಹೆದ್ದಾರಿಯಲ್ಲಿ ಪತ್ತೆಯಾಯ್ತು ಮೂವರ ಮೃತದೇಹ: ಸಿಸಿಟಿವಿ ಕ್ಯಾಮೆರಾ ಹಿಂದೆ ಬಿದ್ದ ಪೊಲೀಸರು!

ಡೇಟಿಂಗ್​ ಯುವತಿಗೆ 5.70 ಕೋಟಿ ರೂ. ಕೊಟ್ಟ ಬ್ಯಾಂಕ್​ ಮ್ಯಾನೇಜರ್! ಪ್ರೇಮಪಾಶಕ್ಕೆ ಸಿಲುಕಿ ಮಾಡಬಾರದ್ದು ಮಾಡಿಬಿಟ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 11 =
Remember me
