ಪಲಮನೇರು:ಪ್ರೇಯಸಿಯನ್ನು ಭೇಟಿ ಮಾಡಲು ಹೋದ ಯುವಕನೊಬ್ಬ ಆಕೆಯ ತಂದೆಯಿಂದ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಚಿತ್ತೂರು ಜಿಲ್ಲೆಯ ಪಲಮನೇರುವಿನಲ್ಲಿ ನಡೆದಿದೆ.
ಮಗಳೊಂದಿಗೆ ಆಕೆಯ ಪ್ರಿಯಕರ ತನ್ನ ಮನೆಯಲ್ಲಿಯೇ ಮಲಗಿರುವುದನ್ನು ನೋಡಿದ ತಂದೆಗೆ ಅತೀವ ಸಿಟ್ಟು ಬಂದು, ಕೋಪ ತಾರಕಕ್ಕೇರಿ ಕೋಲಿನಿಂದ ಬಡಿದು ಯುವಕನನ್ನು ಸ್ಥಳದಲ್ಲೇ ಕೊಲೆ ಮಾಡಿದ್ದಾನೆ. ಈ ಘಟನೆ ಚಿತ್ತೂರು ಜಿಲ್ಲೆಯ ಪಲಮನೇರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಧನಶೇಖರ್​ (23) ಎಂದು ಗುರುತಿಸಲಾಗಿದೆ. ಈತ ಪಲಮನೇರು ಮಂಡಲದ ಪೆಂಗಾರಗುಂಟ ಮೂಲದವನು. ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಇದೇ ತಿಂಗಳು 22ರಂದು ತವರಿಗೆ ಮರಳಿದ್ದ. ಅದೇ ದಿನ ರಾತ್ರಿ 10 ಗಂಟೆಗೆ ಫೋನ್​ನಲ್ಲಿ ಮಾತನಾಡುತ್ತಾ ಮನೆಯಿಂದ ಕಣ್ಮರೆಯಾದ ಯುವಕ ಮರಳಿ ಬರಲೇ ಇಲ್ಲ. ಆತನ ತಂದೆ ಸ್ಥಳೀಯ ಪೊಲೀಸ್​ ಠಾಣೆಗೆ ಮೇ 26ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಮೃತ ಧನಶೇಖರನ ಫೋನ್​ ಕಾಲ್​ ಮಾಹಿತಿ ಆಧಾರಿಸಿ ಪೊಲೀಸರು ತನಿಖೆಗೆ ಇಳಿದರು.
ಕೊನೆಯದಾಗಿ ಧನಶೇಖರ್​ ಕರೆ ಮಾಡಿದ ಜಾಡು ಹಿಡಿದು ಹೊರಟ ಪೊಲೀಸರಿಗೆ ಎದುರಾಗಿದ್ದು, ಪೆಮ್​ ಗರಗುಂಟಾ ನಿವಾಸಿ ಬಾಬು. ಈತ ಧನ್​ಶೇಖರ್​ ಪ್ರೀತಿಸುತ್ತಿದ್ದ ಹುಡುಗಿ (16 ವರ್ಷ)ಯ ತಂದೆ. ಹಲವು ವರ್ಷಗಳಿಂದ ಧನಶೇಖರ್​ ಮತ್ತು ಹುಡುಗಿ ಪ್ರೀತಿಸುತ್ತಿದ್ದರು.
ಮೇ 22ರ ರಾತ್ರಿ 10 ಗಂಟೆಗೆ ಧನಶೇಖರ್​ ಹುಡುಗಿಗೆ ಕರೆ ಮಾಡಿ, ಆಕೆಯ ಮನೆಗೆ ತೆರಳಿದ್ದಾನೆ. ಇತ್ತ ತೋಟಕ್ಕೆ ಹೋಗಿದ್ದ ಹುಡುಗಿಯ ತಂದೆ ಬಾಬು 11 ಗಂಟೆಗೆ ಮನೆಗೆ ಮರಳಿದ್ದಾನೆ. ಈ ವೇಳೆ ಮನೆಯಲ್ಲಿ ಕೇಳಿಬಂದ ಶಬ್ದ ನೋಡಿ ಮಗಳ ಕೋಣೆಯನ್ನು ತೆರದಾಗ ಇಬ್ಬರು ಒಟ್ಟಿಗೆ ಮಲಗಿರುವುದನ್ನು ನೋಡಿ ಆತನಿಗೆ ಸಿಟ್ಟು ಬಂದಿದೆ. ತಕ್ಷಣ ಕೈಗೆ ಸಿಕ್ಕ ಕೋಲಿನಿಂದ ಚೆನ್ನಾಗಿ ಥಳಿಸಿ, ಯುವಕನನ್ನು ಬಾಬು ಹತ್ಯೆಗೈದಿದ್ದಾನೆ.
ಇದಾದ ಬಳಿಕ ಬಾಬು ಯುವಕನ ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ ಹತ್ತಿರದ ಚಿನ್ನಕುಂಟದಲ್ಲಿರುವ ಬಾವಿಯೊಂದಕ್ಕೆ ಎಸೆದು ಮನೆಗೆ ಹಿಂದಿರುಗಿದ್ದಾನೆ. ಎರಡು ದಿನಗಳ ಬಳಿಕ ಬಾವಿಯ ನೋಡಿದಾಗ ಮೃತದೇಹ ತೇಲುವುದನ್ನು ನೋಡಿ, ಕೆಲವರ ಸಹಾಯದಿಂದ ಅದನ್ನು ಮೇಲೆತ್ತಿ, ತುಂಡು ತುಂಡಾಗಿ ಕತ್ತರಿಸಿ ಹತ್ತಿರದ ಕಾಡಿನಲ್ಲಿ ಹೂತು ಹಾಕಿ ಬಂದಿದ್ದ. ಪೊಲೀಸರು ಶುಕ್ರವಾರ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.(ಏಜೆನ್ಸೀಸ್​)
6 ವಾರಗಳ ನಂತರ ಇಳಿದ ಸೋಂಕು ಸಂಖ್ಯೆ ; 1.73 ಲಕ್ಷ ಹೊಸ ಪ್ರಕರಣ

ಹಗಲಲ್ಲೇ ಕಾರು ಅಡ್ಡಗಟ್ಟಿ ವೈದ್ಯ ದಂಪತಿಯ ಹತ್ಯೆ: 2 ವರ್ಷಗಳ ಹಿಂದಿನ ಅಕ್ರಮ ಸಂಬಂಧದ ಸೇಡು?!​

ಫಿನ್​ಲ್ಯಾಂಡ್​ ಪ್ರಧಾನಿಯ ಬ್ರೇಕ್​ಫಾಸ್ಟ್​ ಬಿಲ್​ನಲ್ಲಿ ಅಕ್ರಮ ಶಂಕೆ: ಪೊಲೀಸ್​ ತನಿಖೆ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 3 =
Remember me
