ತಿರುಪತಿ (ಆಂಧ್ರ ಪ್ರದೇಶ):ಯುವತಿಯೊಬ್ಬಳು ಮದುವೆ ಹೆಸರಲ್ಲಿ ನಂಬಿಸಿ ಹಣ ದೋಚಿದ್ದಾಳೆಂದು ಆರೋಪಿಸಿ ಯುವಕನೊಬ್ಬ ಶನಿವಾರ ರಾತ್ರಿ ಅಲಿಪಿರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ವಿಜಯಪುರಂ ವಲಯದ ನರಪರಾಜು ಕಂಡ್ರಿಗ ಮೂಲದ ಸುನೀಲ್​ ಕುಮಾರ್​ (29) ಮಾರ್ಕೆಟಿಂಗ್​ ಕೆಲಸ ಮಾಡಿಕೊಂಡು ಕಳೆದ ಐದು ವರ್ಷಗಳಿಂದ ಸತ್ಯನಾರಾಯಣಪುರಂನಲ್ಲಿ ನೆಲೆಸಿದ್ದಾನೆ. ಈ ವೇಳೆ ಎಡಿಬಿ ಫೈನಾನ್ಸ್​ ಕಾರ್ಪೊರೇಷನ್​ನಲ್ಲಿ ಕೆಲಸ ಮಾಡುತ್ತಿದ್ದ ಎಂ. ಸುಹಾಸಿನಿ ಎಂಬಾಕೆಯ ಪರಿಚಯವಾಗಿದೆ.
ಇಬ್ಬರ ನಡುವಿನ ಪರಿಚಯ ನಂತರದ ದಿನಗಳಲ್ಲಿ ಪ್ರೀತಿಗೆ ತಿರುಗಿದೆ. ತಾನೊರ್ವ ಅನಾಥೆ ಎಂದು ಹೇಳಿಕೊಂಡಿರುವ ಸುಹಾಸಿನಿ, ಕಳೆದ ಡಿಸೆಂಬರ್​ನಲ್ಲಿ ಸುನೀಲ್​ ಜತೆ ಮದುವೆ ಆಗಿದ್ದಳು. ಈ ವೇಳೆ ಸುನೀಲ್​ ಕುಟುಂಬ ಸುಹಾಸಿನಿಗೆ 20 ಗ್ರಾಂ ಚಿನ್ನಾಭರಣ ತೊಡಿಸಿದ್ದರು. ಈ ನಡುವೆ ಸುಹಾಸಿನಿ ಚಿಕ್ಕಂದಿನಿಂದಲೂ ತನ್ನನ್ನು ನೋಡಿಕೊಳ್ಳುತ್ತಿದ್ದ ಅಂಕಲ್​ಗೆ ಇತ್ತೀಚೆಗಷ್ಟೇ ಲಕ್ಷ ಲಕ್ಷ ರೂ. ಹಣವನ್ನು ನೀಡಿದ್ದಳು. “ನನ್ನ ಆರೋಗ್ಯ ಸರಿಯಿಲ್ಲದಿದ್ದಾಗ ಸ್ವಲ್ಪ ಸಾಲ ಮಾಡಿದ್ದೆ ಮತ್ತು ಮದುವೆಗೂ ಹಣ ಪಡೆದುಕೊಂಡಿದ್ದೆ” ಎಂದು ಸುಳ್ಳು ಹೇಳಿದ್ದಳು.
ಇತ್ತ ಸುನೀಲ್​ ಕಡೆಯಿಂದ ಲಕ್ಷ ಲಕ್ಷ ಹಣ ಪಡೆದುಕೊಂಡ ಮಾರನೇ ದಿನವೇ ಆಕೆ ಪರಾರಿಯಾಗಿದ್ದಾಳೆ. ಅಂದರೆ, ಇದೇ ತಿಂಗಳ 7ರಂದು ಪರಾರಿಯಾಗಿದ್ದು, ಈವರೆಗೂ ಆಕೆಯ ಸುಳಿವಿಲ್ಲ. ಫೋನ್​ ಕೂಡ ಸ್ವಿಚ್​ ಆಫ್​ ಆಗಿದೆ. ಇದರ ನಡುವೆ ಆಕೆಯ ಆಧಾರ್​ ಕಾರ್ಡ್​ ಸಹಾಯದಿಂದ ಆಕೆಗೆ ಮೊದಲೇ ನೆಲ್ಲೂರು ಜಿಲ್ಲೆಯ ವೆಂಕಟೇಶ್ವರ್​ ಎಂಬಾತನ ಜತೆ ಮದುವೆ ಆಗಿ ಓರ್ವ ಹೆಣ್ಣು ಮಗಳಿದ್ದಾಳೆ ಎಂಬ ಶಾಕಿಂಗ್​ ವಿಚಾರ ಸುನೀಲ್​ಗೆ ತಿಳಿದಿದೆ. ಇದೀಗ ಸುನೀಲ್​ ನ್ಯಾಯಕ್ಕಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾನೆ.(ಏಜೆನ್ಸೀಸ್​)
ಮದುವೆ ಊಟದಲ್ಲಿ ಮೀನಿನ ತಲೆಗಾಗಿ ಹೊಡೆದಾಡಿದ ಸಂಬಂಧಿಗಳು! 11 ಮಂದಿ ಆಸ್ಪತ್ರೆಗೆ ದಾಖಲು

ಸಂಚಾರಿ ವಿಜಯ್​ಗೆ ಬೆಡ್ ಇಲ್ಲ ಎಂದಿದ್ದ ಆಸ್ಪತ್ರೆ: ಸುದೀಪ್ ಮನವಿ ಬಳಿಕ ತಕ್ಷಣ ಚಿಕಿತ್ಸೆ ಆರಂಭ

ಬಾಲಕಿಯನ್ನು ಗರ್ಭಿಣಿ ಮಾಡಿ ಎಸ್ಕೇಪ್​ ಆಗಲು ಸಂಚು ರೂಪಿಸಿದ್ದ ಟಿಕ್​ಟಾಕ್​ ಸ್ಟಾರ್ ಸಿಕ್ಕಿಬಿದ್ದಿದ್ದೇ ರೋಚಕ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + eight =
Remember me
