ಕರ್ನೂಲ್​:ವಿಧವೆಗೆ ಸುಳ್ಳು ಹೇಳಿ ನಂಬಿಸಿ ಮದುವೆಯಾಗಿ ಐದು ವರ್ಷಗಳ ಕಾಲ ಆಕೆಯ ಜತೆಯಿದ್ದು, ಕೊನೆಗೆ ಪತ್ನಿ ಮತ್ತು ಮಕ್ಕಳನ್ನು ಬಿಟ್ಟು ಪರಾರಿಯಾಗಿ ಮತ್ತೊಂದು ಮದುವೆ ಆಗಿರುವ ಪ್ರಕರಣ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯ ಅಲ್ಲಗದ್ದ ವಲಯದಲ್ಲಿ ನಡೆದಿದೆ.
ಆರೋಪಿ ಓಬಳೇಸು ಕರ್ನೂಲ್​ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. ಮನೆಯ ಮಾಲೀಕರ ಮಗಳು ವಿಜಯಾಗೆ ಮದುವೆಯಾಗಿ ಎರಡು ಮಕ್ಕಳಿದ್ದು, ಆಕೆಯ ಗಂಡ ಮೃತಪಟ್ಟಿರುತ್ತಾರೆ. ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ವಿಜಯಾಗೆ ಆರೋಪಿ ಪರಿಚಯವಾಗುತ್ತದೆ. ಹೀಗೆ ಮಾತನಾಡುತ್ತಾ ಸಲುಗೆ ಬೆಳೆದು ಕೊನೆಗೊಂದು ದಿನ ಆಕೆಗೆ ಮದುವೆ ಪ್ರಸ್ತಾಪ ಮಾಡುತ್ತಾನೆ. ಆದರೆ, ಆರಂಭದಲ್ಲಿ ವಿಜಯಾ ಒಪ್ಪಲಿಲ್ಲ. ವಿಧವೆಯನ್ನು ಮದುವೆಯಾಗುವ ನಿನ್ನ ಉದ್ದೇಶವೇನು ಎಂದು ತಿರಸ್ಕರಿಸಿದ್ದಳು. ಆದರೂ ಬಿಡದ ಓಬಳೇಸು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಭರವಸೆ ನೀಡುತ್ತಾನೆ.
ಒಪ್ಪದೇ ಇದ್ದಾಗ ಆಕೆಯನ್ನು ಆರೋಪಿ ಗೋಗರೆಯುತ್ತಾನೆ. ಸ್ಥಳೀಯರು ಬಳಿಯು ಎಲ್ಲವನ್ನು ಹೇಳಿಕೊಳ್ಳುತ್ತಾನೆ. ಆತನ ಮಾತನ್ನು ನಂಬುವ ಸ್ಥಳೀಯರು ವಿಜಯಾ ಪಾಲಕರನ್ನು ಒಪ್ಪಿಸುತ್ತಾರೆ. ಕೊನೆಗೆ ವಿಜಯಾ ಒಪ್ಪಿಗೆ ನೀಡಿ ಮದುವೆಯಾಗುತ್ತಾಳೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತದೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುತ್ತಾನೆ. ಆದರೆ. ನಾಲ್ಕು ತಿಂಗಳ ಹಿಂದೆ ಯಾವುದೋ ಕೆಲಸದ ಮೇಲೆ ಹೊರ ಹೋಗುವ ಓಬಳೇಸು ಪ್ರತಿನಿತ್ಯ ಪತ್ನಿಯೊಂದಿಗೆ ಕರೆ ಮಾಡಿ ವಿಚಾರಿಸುತ್ತಿದ್ದ. ಆದರೆ, ಕೆಲವು ದಿನಗಳ ಬಳಿಕ ಎಷ್ಟೇ ಫೋನ್​ ಮಾಡಿದರೂ ಆತ ಫೋನ್​ ತೆಗೆಯುವುದೇ ಇಲ್ಲ.
ಇದರ ನಡುವೆ ಓಬಳೇಸು ಮೇ 28 ರಂದು ಮತ್ತೊಂದು ಮಹಿಳೆಯ ಜತೆ ಮದುವೆ ಆಗಿರುತ್ತಾನೆ. ಇದಾದ ಬಳಿಕ ಓಬಳೇಸು ಸ್ನೇಹಿತನೇ ವಿಜಯಾಗೆ ಕರೆ ಮಾಡಿ ನಿನ್ನ ಗಂಡ ಮತ್ತೆ ಮದುವೆ ಆಗುತ್ತಿದ್ದಾನೆಂದು ಹೇಳುತ್ತಾನೆ. ಇದರಿಂದ ಆಘಾತಕ್ಕೆ ಒಳಗಾಗುವ ವಿಜಯಾ, ಓಬಳೇಸುನನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನ ನಡೆಸಿದಾದರೂ ಸಾಧ್ಯವಾಗುವುದಿಲ್ಲ. ಇದೀಗ ಠಾಣೆಯ ಮೆಟ್ಟಿಲೇರಿ ಪ್ರಕರಣ ದಾಖಲಿಸಿದ್ದಾಳೆ. ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾಳೆ.(ಏಜೆನ್ಸೀಸ್​)
ತಹಸೀಲ್ದಾರ್​ ಕಾರಿನ ಮೇಲೆ ಹಾಡಹಗಲಲ್ಲೇ ದಾಳಿ ಮಾಡಿದ ಯುವಕ..!

ಆಸ್ಪತ್ರೆಯೊಳಗೆ ರೋಗಿ ನಾಪತ್ತೆಯಾದ ಪ್ರಕರಣ ಬೆನ್ನತ್ತಿ ಹೋದ ಪೊಲೀಸರಿಗೆ ಕಾದಿತ್ತು ಶಾಕ್​!

VIDEO | ಕ್ರಿಕೆಟಿಗ ಯಜ್ವೇಂದ್ರ ಚಹಲ್​ ಡ್ಯಾನ್ಸ್​ ಸ್ಟೆಪ್ಸ್​ ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
