ಜೈಪುರ:ಪ್ರತಿನಿತ್ಯವು ನನ್ನ ಹಂಡತಿ ನನ್ನನ್ನು ಹಿಗ್ಗಾಮುಗ್ಗಾ ಥಳಿಸುತ್ತಾಳೆ. ಈ ಸಂಕಷ್ಟದಿಂದ ನನ್ನನ್ನು ಪಾರು ಮಾಡಿ ಎಂದು ಶಾಲಾ ಪ್ರಾಂಶುಪಾಲರೊಬ್ಬರು ನ್ಯಾಯಾಲಯದ ಮೊರೆ ಹೋಗಿರುವ ಘಟನೆ ರಾಜಸ್ಥಾನದ ಅಲ್ವಾರ್​ನಲ್ಲಿ ನಡೆದಿದೆ.
ಸಂತ್ರಸ್ತ ಪ್ರಾಂಶುಪಾಲರ ಹೆಸರು ಅಜಿತ್​ ಯಾದವ್​. ತನ್ನ ಹೆಂಡತಿ ದೌರ್ಜನ್ಯ ಎಸಗುವ ಸಿಸಿಟಿವಿ ವಿಡಿಯೋ ಸಮೇತ ದೂರು ದಾಖಲಿಸಿದ್ದು, ರಕ್ಷಣೆ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಜಿತ್​ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ರಕ್ಷಣೆ ಒದಗಿಸುವಂತೆ ಆದೇಶಿಸಿದೆ.
ಅಂದಹಾಗೆ ಅಜಿತ್​ ಹರಿಯಾಣದ ಶಾಲೆಯೊಂದರಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮದುವೆಯಾಗಿ 7 ವರ್ಷಗಳಾಗಿದ್ದು, ದಂಪತಿಗೆ 6 ವರ್ಷದ ಒಂದು ಗಂಡು ಮಗುವಿದೆ. ಸದ್ಯ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಕಾರಣವಿಲ್ಲದೆ ನನ್ನ ಮೇಲೆ ಹಲ್ಲೆ ಮಾಡಿ, ಬಟ್ಟೆಯನ್ನೆಲ್ಲಾ ಚಿಂದಿ ಮಾಡಿದ್ದಾಳೆ. ದಿನಬೆಳಗಾದರೂ ನನ್ನನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುತ್ತಾಳೆ. ಕ್ರಿಕೆಟ್​ ಬ್ಯಾಟ್​, ಐರನ್​ ಪ್ಯಾನ್​ ಮತ್ತು ಇತರೆ ಪಾತ್ರೆಗಳಿಂದ ಬಾರಿಸುತ್ತಿರುತ್ತಾಳೆ. ಏಕೆ ಹೊಡೆಯುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದರೆ, ಅದಕ್ಕೆ ಉತ್ತರವಿಲ್ಲ. ಆಕೆಯ ಕಾಟ ತಡೆಯಲು ಆಗುತ್ತಿಲ್ಲ ಎಂದು ದೂರಿನಲ್ಲಿ ಅಜಿತ್​ ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ರಾಜಸ್ಥಾನ ಪೊಲೀಸರು ತನಿಖೆ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್​)
#Rajasthan: Man accuses wife of domestic violence in Alwar, approaches court for his security#WifeBeatsHusband#newspic.twitter.com/G6hcGzKmjJ
— Journalist Anurag K Sason (@AnuragSason)May 25, 2022

ರಾಷ್ಟ್ರಗೀತೆ ಆರಂಭವಾದ್ರೂ ಹಸ್ತಲಾಘವ ಮಾಡುವುದರಲ್ಲಿ ರಾಜ್ಯಪಾಲರು ಬಿಜಿ: ವಿಡಿಯೋ ವೈರಲ್​

ಆರ್‌ಸಿಬಿ ಪರ ಆಡಲು ಮದುವೆ ಮುಂದೂಡಿದ್ದ ರಜತ್ ಪಾಟಿದಾರ್!

ಡಿಜಿಟಲ್ ಸಾಲದ ಆಪತ್ತು: ಲೋನ್ ಕೊಟ್ಟು ಜೀವ ಹಿಂಡುವ ಅನಧಿಕೃತ ಆ್ಯಪ್​​ಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 11 =
Remember me
