ಸೇಲಂ:ವರದಕ್ಷಿಣೆಯಾಗಿ ಕಾರು ಕೊಡಲಿಲ್ಲ ಅಂತಾ ಕ್ರಿಕೆಟ್​ ಬ್ಯಾಟ್​ನಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದ ಪಾಪಿ ಪತಿಯನ್ನು ತಮಿಳುನಾಡು ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.
ಬಂಧಿತ ಆರೋಪಿಯನ್ನು ಕೀರ್ತಿರಾಜ್​ (31) ಎಂದು ಗುರುತಿಸಲಾಗಿದೆ. ಸೇಲಂನ ಮುಲ್ಲೈ ನಗರದ ನಿವಾಸಿ ಧನಶ್ರಿಯಾ (26) ಕೊಲೆಯಾದ ದುರ್ದೈವಿ. ಮೂರು ವರ್ಷಗಳ ಹಿಂದೆ ಇಬ್ಬರಿಗೆ ಮದುವೆಯಾಗಿತ್ತು. ದಂಪತಿ ಕೆಲ ದಿನಗಳ ಹಿಂದಷ್ಟೇ ಸ್ವಂತ ಮನೆಯಿಂದ ಬಾಡಿಗೆ ಮನೆಗೆ ತೆರಳಿದ್ದರು. ಇದಾದ ಬಳಿಕ ಧನಶ್ರಿಯಾಗೆ ಗಂಡನಿಂದ ವರದಕ್ಷಿಣೆ ಕಿರುಕುಳ ಆರಂಭವಾಗಿತ್ತು. ಅತಿ ಹೆಚ್ಚು ಚಿನ್ನಾಭರಣ ಮತ್ತು ಕಾರಿಗಾಗಿ ಕೀರ್ತಿರಾಜ್​ ಬೇಡಿಕೆ ಇಟ್ಟಿದ್ದ.
ಇನ್ನು ಹೆಚ್ಚಿನ ವರದಕ್ಷಿಣೆ ಕೊಡಲು ಆಗುವುದಿಲ್ಲ ಎಂದು ಧನಶ್ರಿಯಾ ಕುಟುಂಬದವರು ಹೇಳಿದ್ದರು. ಈ ವಿಚಾರಕ್ಕೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಆದರೀಗ ಜಗಳ ತಾರಕಕ್ಕೇರಿ, ನಿಯಂತ್ರಣ ಕಳೆದುಕೊಂಡ ಕೀರ್ತಿರಾಜ್​, ಕ್ರಿಕೆಟ್​ ಬ್ಯಾಟ್​ನಿಂದ ಪತ್ನಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಕೊಲೆಯಾದ ಬಳಿಕ ಪತ್ನಿಯ ಮೃತದೇಹವನ್ನು ನೇತುಹಾಕಿ ಆತ್ಮಹತ್ಯೆ ಅಂತಾ ಬಿಂಬಿಸಲು ಯತ್ನಿಸಿದ್ದಾನೆ.
ಪತ್ನಿಯ ಮೃತದೇಹ ನೇತುಹಾಕಿ ತನ್ನ ಅತ್ತೆ ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಸುಳ್ಳು ಹೇಳಿದ್ದಾನೆ. ಆದರೆ, ಧನಶ್ರಿಯಾ ತಲೆ ಮತ್ತು ಮುಖದಲ್ಲದ್ದ ಗಾಯದ ಗುರುತಗಳನ್ನು ನೋಡಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಆರೋಪಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆರೋಪಿ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಆತನನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)
ಮದ್ವೆ ಬೆನ್ನಲ್ಲೇ ವೃತ್ತಿ ಜೀವನದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡ ನಯನತಾರಾ: ಅಭಿಮಾನಿಗಳಿಗೆ ಬೇಸರ!

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: 1.5 ವರ್ಷದಲ್ಲಿ 10 ಲಕ್ಷ ಉದ್ಯೋಗ ಭರ್ತಿಗೆ ಪ್ರಧಾನಿ ಮೋದಿ ಸೂಚನೆ

ಕಿಚ್ಚ ಸುದೀಪ್ ಆಪ್ತ, ವಿಕ್ರಾಂತ್ ರೋಣ ಸಿನಿಮಾ ನಿರ್ಮಾಪಕ ಜಾಕ್‌ ಮಂಜು ಆಸ್ಪತ್ರೆಗೆ ದಾಖಲು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − six =
Remember me
