ಕೊಲ್ಲಂ:ಸಾಮಾಜಿಕ ಜಾಲತಾಣ ಎಷ್ಟು ಅಪಾಯಕಾರಿಯೋ ಅಷ್ಟೇ ಉಪಕಾರಿಯು ಹೌದು. ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ಅದು ಅವಲಂಬಿತವಾಗಿರುತ್ತದೆ. ಕೇರಳದಲ್ಲಿ ನಡೆದ ಈ ಒಂದು ಘಟನೆ ಜಾಲತಾಣದ ಮಹತ್ವವನ್ನು ಸಾರುತ್ತದೆ.
ಇತ್ತೀಚೆಗಷ್ಟೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಹುಟ್ಟಿನಿಂದಲೇ ಕಾಲುಗಳನ್ನು ಕಳೆದುಕೊಂಡಿರುವ ವಿಕಲಚೇತನ ಯುವಕ ಹಾಗೂ ಕಾಲೇಜು ವಿದ್ಯಾರ್ಥಿ ಅಲಿಫ್ ಮೊಹಮ್ಮದ್ ಅವರನ್ನು ಇಬ್ಬರು ಫ್ರೆಂಡ್ಸ್​ ಹೊತ್ತು ಸಾಗುವುದು ವಿಡಿಯೋದಲ್ಲಿತ್ತು. ವಿಡಿಯೋ ಜತೆ ಅದರ ಹಿಂದಿನ ಮನಕಲಕುವ ಕತೆಯೂ ಕೂಡ ವೈರಲ್​ ಆಗಿತ್ತು. ಇದರ ಬೆನ್ನಲ್ಲೇ ವಿಕಲಚೇತನ ಯುವಕನಿಗೆ ಗುಡ್​ನ್ಯೂಸ್​ ಒಂದು ಸಿಕ್ಕಿದೆ.
ಕೇರಳದ ಯುವ ಕಾಂಗ್ರೆಸ್​ ನಾಯಕರೊಬ್ಬರು ಅಲಿಫ್​ಗೆ ಮೂರು ಚಕ್ರದ ಬೈಕ್​ ಉಡುಗೊರೆ ಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ಮೂಲಕ ಬೈಕ್​ ತೆಗೆದುಕೊಳ್ಳಬೇಕೆನ್ನುವ ಅಲಿಫ್​ ಅವರ ಬಹುದೊಡ್ಡ ಕನಸೊಂದು ನನಸಾಗುತ್ತಿದೆ.
ಅಲಿಫ್​ ಅವರನ್ನು ಅವರ ಇಬ್ಬರು ಫ್ರೆಂಡ್ಸ್​ ಹೊತ್ತು ಸಾಗುವ ವಿಡಿಯೋವನ್ನು ವೆಡ್ಡಿಂಗ್​ ಫೋಟೋಗ್ರಾಫರ್ ತುಳಸೀಧರನ್ ಎಂಬುವರು ಸೆರೆಹಿಡಿದಿದ್ದರು. ಕೊಲ್ಲಂ ಜಿಲ್ಲೆಯ ಶಾಸ್ತಮಕೋಟದಲ್ಲಿರುವ ಡಿಬಿ ಕಾಲೇಜಿನಲ್ಲಿ ಅಲಿಫ್​ ಬಿ.ಕಾಂ ಓದುತ್ತಿದ್ದಾರೆ. ಕಾಲೇಜಿನಲ್ಲಿ ನಡೆದ ಯುವಜನೋತ್ಸವದಲ್ಲಿ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದಾಗ ಅಲಿಫ್​ ಅವರನ್ನು ಅವರ ಸ್ನೇಹಿತರು ಹೊತ್ತುಕೊಂಡು ಹೋಗುತ್ತಿರುವುದನ್ನು ನೋಡಿದ ತುಳಸೀಧರನ್​ ತಕ್ಷಣ ತಮ್ಮ ಕ್ಯಾಮೆರಾದಲ್ಲಿ ಆ ಅಪರೂಪದ ದೃಶ್ಯವನ್ನು ಸೆರೆಹಿಡಿದರು. ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು. ಇದರ ಬೆನ್ನಲ್ಲೇ ಸಿಕ್ಕಾಪಟ್ಟೆ ವೈರಲ್ ಸಹ ಆಯಿತು. ವಿಡಿಯೋದಲ್ಲಿರುವ ಅಲಿಫ್​ ಅವರ ಇಬ್ಬರು ಫ್ರೆಂಡ್ಸ್​ ಹೆಸರು ಅರ್ಚನಾ ಮತ್ತು ಆರ್ಯ.
ವಿಡಿಯೋ ನೋಡಿದ ಯುವ ಕಾಂಗ್ರೆಸ್​ ನಾಯಕ ಹಾಗೂ ಸಂಸ್ಕಾರ ಸಾಹಿತಿ ರಾಜ್ಯಾಧ್ಯಕ್ಷ ಆರ್ಯಾದನ್ ಶೌಕತ್ ಅವರು ಥೋಡಿಯೂರ್​ನಲ್ಲಿರುವ ಅಲಿಫ್​ ಅವರ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿ ಮೂರು ಚಕ್ರದ ಬೈಕ್​ ಗಿಫ್ಟ್​ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಅಲಿಫ್ ಅವರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಅನೇಕ ರಾಜಕೀಯ ನಾಯಕರು ಹಾಗೂ ಆತನ ಸಹಪಾಠಿಗಳು ಇದ್ದರು. ಇನ್ನೂ 10 ರಿಂದ 12 ದಿನಗಳಲ್ಲಿ ಹೊಸ ವಾಹನವನ್ನು ಅಲಿಫ್‌ಗೆ ಹಸ್ತಾಂತರಿಸಲಾಗುವುದು ಎಂದು ಹೋಂಡಾ ಶೋರೂಂ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಕಾಲುಗಳಿಲ್ಲದೇ ಹುಟ್ಟಿದ ಈ ವಿದ್ಯಾರ್ಥಿಗೆ ಸ್ನೇಹಿತರೇ ಆತ್ಮಬಲ: ಈ ವಿಡಿಯೋ ನೋಡಿದ್ರೆ ಮನಕಲಕುತ್ತೆ!

ರಶ್ಮಿಕಾ ವಿರುದ್ಧ ಹರಿಹಾಯ್ದು ಲವ್​ ಅಫೇರ್​ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ!

ಶೌಚಗೃಹವೂ ಸುಂದರ ಹುಡುಗಿಯೂ.. ಮಗ ಸರಿಯಾಗಿ ಬಳಸಿಕೊಳ್ಳದಿದ್ರೆ… ಎನ್ನುತ್ತಾ ವಿವಾದ ಸೃಷ್ಟಿಸಿದ ಈಶ್ವರಪ್ಪ

Sign in to your account
Please enter an answer in digits:one × three =
Remember me
