ಪಲಕ್ಕಾಡ್​:ಇಬ್ಬರ ಪ್ರಾಣ ಕಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ಮುಂದೆ ಬಂದು ಕೆಎಸ್​ಆರ್​ಟಿಸಿ ಬಸ್​ ಚಾಲಕನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಪಘಾತ ಮಾಡುವ ಮೂಲಕ ಯುವಕರಿಬ್ಬರ ಮೇಲೆ ಬಸ್​ ಚಾಲಕ ಸೇಡು ತೀರಿಸಿಕೊಂಡಿದ್ದಾನೆಂದು ಪಾಲಕರು ಆರೋಪಿಸಿದ ಬೆನ್ನಲ್ಲೇ ಬಸ್​ ಚಾಲಕನ ಕರಾಳ ಮುಖ ತನಿಖೆಯಿಂದಲೂ ಬಯಲಾಗಿದೆ.
ಈ ಅಪಘಾತ ಪೂರ್ವಯೋಜಿತ ಎಂದು ಅಪಘಾತದಲ್ಲಿ ಮೃತಪಟ್ಟ ಸಬಿತ್ ಅವರ ಸಹೋದರ ಶರತ್ ಆರೋಪ ಮಾಡಿದ್ದಾರೆ. ಅಪಘಾತಕ್ಕೂ ಮುನ್ನ ಬಸ್ ಚಾಲಕ ಹಾಗೂ ಯುವಕರ ನಡುವೆ ವಾಗ್ವಾದ ನಡೆದಿತ್ತು ಎಂಬ ವಿಚಾರ ಬೆಳಕಿಗೆ ಬಂದಿದ್ದು, ಈ ಮಾಹಿತಿಯ ಆಧಾರದ ಮೇಲೆ ಮೃತರ ಸಂಬಂಧಿಕರು ದೂರು ದಾಖಲಿಸಿದ್ದಾರೆ.
ಪ್ರಯಾಣದ ನಡುವೆ ಯುವಕರು ಮತ್ತು ಕೆಎಸ್‌ಆರ್‌ಟಿಸಿ ಚಾಲಕನ ನಡುವೆ ವಾಗ್ವಾದ ನಡೆದಿತ್ತು ಎಂದು ಪ್ರಯಾಣಿಕರು ಮತ್ತು ಇತರರು ಕೂಡ ತಿಳಿಸಿದ್ದಾರೆ. ಅಪಘಾತದ ಬಳಿಕ ಮೊದಲಿಗೆ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಅಪಘಾತದ ದೃಶ್ಯಾವಳಿಗಳು ಹೊರಬೀಳುತ್ತಿದ್ದಂತೆಯೇ ಬಸ್ ಉದ್ದೇಶಪೂರ್ವಕವಾಗಿ ಸಿಗ್ನಲ್ ನೀಡದೆ ದಿಢೀರನೇ ಬಲಕ್ಕೆ ತಿರುವು ಪಡೆದು ಪರಿಣಾಮ ಬೈಕ್ ಲಾರಿಗೆ ಡಿಕ್ಕಿ ಹೊಡೆದಿರುವುದು ಸ್ಪಷ್ಟವಾಗಿದೆ.
ಅಪಘಾತದ ದೃಶ್ಯಗಳು ಸಮೀಪದಲ್ಲೇ ಇದ್ದ ಕಾರಿನ ಕ್ಯಾಮೆರಾದಲ್ಲಿ ದಾಖಲಾಗಿವೆ. ಅಪಘಾತದಲ್ಲಿ ಪಲಕ್ಕಾಡ್ ಮೂಲದ ಆದರ್ಶ್ ಮೋಹನ್ ಮತ್ತು ಕಾಸರಗೋಡಿನ ಸಬಿತ್ ಸಾವನ್ನಪ್ಪಿದ್ದಾರೆ.
ತ್ರಿಶೂರ್ ಮೂಲದ ಬಸ್​ ಚಾಲಕ ಸಿಎಲ್ ಔಸೆಫ್ ಎಂಬಾತನನ್ನು ನರಹತ್ಯೆಯ ಆರೋಪದ ಮೇಲೆ ಬಂಧಿಸಲಾಗಿದೆ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಕೆಎಸ್‌ಆರ್‌ಟಿಸಿ ಆಂತರಿಕ ತನಿಖೆಯನ್ನು ಘೋಷಿಸಿತ್ತು. ಚಾಲಕನ ತಪ್ಪು ಎಂಬುದು ತನಿಖೆಯಿಂದ ಸ್ಪಷ್ಟವಾದ ನಂತರ ಅವರನ್ನು ಸೇವೆಯಿಂದ ಅಮಾನತುಗೊಳಿಸಿತ್ತು.(ಏಜೆನ್ಸೀಸ್​)
ಹಿಜಾಬ್​ ಹಾಕಿಕೊಂಡು ತರಗತಿಯಲ್ಲಿ ಕುಳಿತಿರುವ ಫೋಟೋ ವೈರಲ್​: ವಿದ್ಯಾರ್ಥಿನಿ ಕೊಟ್ಟ ಸ್ಪಷ್ಟನೆ ಹೀಗಿದೆ…

6 ವರ್ಷದ ಬಳಿಕ ಟೈರ್​ನಿಂದ ಮೊಸಳೆಗೆ ಬಿಡುಗಡೆ! ಸರ್ಕಾರದಿಂದ ಆಗದ ಕೆಲ್ಸವನ್ನು ಈತನೊಬ್ಬನೇ ಸಾಧಿಸಿದ್ಹೇಗೆ?

ಕೋಲಾರದಲ್ಲಿ ಆರತಕ್ಷತೆ ವೇಳೆ ಕುಸಿದುಬಿದ್ದು ವಧುವಿನ ಬ್ರೈನ್​ ಡೆಡ್: ಸಂಕಷ್ಟದಲ್ಲೂ ಮಾನವೀಯತೆ ಮೆರೆದ ಪಾಲಕರು

ಇಂದು-ನಾಳೆ ಬೆಂಗಳೂರಿನಲ್ಲಿ ಐಪಿಎಲ್ ಆಟಗಾರರ ಮೆಗಾ ಹರಾಜು; ಮೊದಲ ದಿನ 161 ಕ್ರಿಕೆಟಿಗರ ಲಿಲಾವು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twelve − six =
Remember me
