ನವದೆಹಲಿ:ಇತರೆ ಸಾಮಾಜಿಕ ಜಾಲತಾಣ ರೀತಿಯಲ್ಲೇ ವಿಡಿಯೋ ಡಿಸ್​ಲೈಕ್​ ಕೌಂಟ್​ ಅನ್ನು ತೆಗೆದುಹಾಕಲು ಯೂಟ್ಯೂಬ್​ ನಿರ್ಧಾರ ಮಾಡಿದೆ. ಹೊಸ ಯೂಟ್ಯೂಬ್​ ಕ್ರಿಯೆಟರ್ಸ್​ಗಳ ಮೇಲೆ ಡಿಸ್​ಲೈಕ್​ ದಾಳಿ ನಡೆಯುತ್ತಿರುವುದನ್ನು ಕಂಪನಿ ಗಮನಿಸಿದ್ದು, ಅದಕ್ಕೆ ಬ್ರೇಕ್​ ಹಾಕಲು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಟ್ವೀಟ್​ ಮೂಲಕ ಯೂಟ್ಯೂಬ್​ ಕಂಪನಿ ಈ ನಿರ್ಧಾರವನ್ನು ಘೋಷಣೆ ಮಾಡಿದೆ. ಕ್ರಿಯೆಟರ್ಸ್​ ಮೇಲೆ ಡಿಸ್​ಲೈಕ್​ ದಾಳಿಗಳು ನಡೆಯುತ್ತಿದ್ದು, ಕ್ರಿಯೆಟರ್ಸ್​ ಮೇಲೆ ಪ್ರಭಾವ ಬೀರುವುದರಿಂದ ಅದನ್ನು ಕಡಿಮೆ ಮಾಡಲು ಡಿಸ್​ಲೈಕ್​ ಕೌಂಟ್​ ತೆಗೆದುಹಾಕಲು ನಿರ್ಧರಿಸಲಾಗಿದೆ. ಸಾಕಷ್ಟು ಸಂಶೋಧನೆ ಹಾಗೂ ಪರೀಕ್ಷೆಯ ಬಳಿಕ ಈ ನಿರ್ಧಾರವನ್ನು ಪರಿಗಣಿಸಲಾಗಿದೆ ಎಂದು ಯೂಟ್ಯೂಬ್​ ಟ್ವೀಟ್​ನಲ್ಲಿ ತಿಳಿಸಿದೆ.
ಡಿಸ್​ಲೈಕ್​ ಬಟನ್​ ಸಂಪೂರ್ಣವಾಗಿ ತೆಗೆದುಹಾಕುವುದಿಲ್ಲ. ಬದಲಾಗಿ ಡಿಸ್​ಲೈಕ್​ ಕೌಂಟ್​ ಮಾತ್ರ ಸಾರ್ವಜನಿಕವಾಗಿ ಕಾಣದಂತೆ ಕಂಪನಿ ಮರೆಮಾಚಲಿದೆ. ಇಷ್ಟವಿಲ್ಲದವರು ಡಿಸ್​ಲೈಕ್ಸ್​ ಮಾಡಬಹುದು. ಆದರೆ, ಎಷ್ಟು ಡಿಸ್​ಲೈಕ್​ ಆಗಿದೆ ಎಂಬುದು ಇನ್ಮುಂದೆ ಕಾಣುವುದಿಲ್ಲ. ಆದರೆ, ಕ್ರಿಯೆಟರ್ಸ್​ ಫೀಡ್​ಬ್ಯಾಕ್​ಗಾಗಿ ಡಿಸ್​ಲೈಕ್​ ಕೌಂಟ್ ಅವರಿಗೆ ಮಾತ್ರ​ ಕಾಣಲಿದೆ. ಸಾರ್ವಜನಿಕ ಅವಮಾನ ಮತ್ತು ಕಿರುಕುಳ ತಪ್ಪಿಸಲು ಇದು ಸಹಕಾರಿ ಆಗಲಿದೆ ಎಂದು ಯೂಟ್ಯೂಬ್​ ಹೇಳಿದೆ.
ಯೂಟ್ಯೂಬ್​​ ಮಾತ್ರವಲ್ಲ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಕೂಡ ಡಿಸ್​ಲೈಕ್​ ಆಯ್ಕೆಯನ್ನು ಮರೆಮಾಚಿದೆ. ಇದರಿಂದ ಬಳಕೆದಾರರ ಮೇಲಿನ ಕಿರುಕುಳ ತಪ್ಪಿ, ಮಾನಸಿಕ ಆರೋಗ್ಯಕ್ಕೆ ಸಹಕಾರಿ ಆಗಲಿದೆ ಎಂಬುದು ಕಂಪನಿಗಳ ಉದ್ದೇಶವಾಗಿದೆ.(ಏಜೆನ್ಸೀಸ್​)
23 ವರ್ಷಕ್ಕೆ ಈಕೆ ಮಾಡುತ್ತಿರುವ ಅನಾಚಾರ ಕೇಳಿದ್ರೆ ದಂಗಾಗ್ತೀರಾ! ಇದು ಖತರ್ನಾಕ್​​ ಲೇಡಿಯ ಕರಾಳ ಮುಖ
ಅಪ್ಪು-ಅಶ್ವಿನಿ ಪ್ರೀತಿ ಬಗ್ಗೆ ತಂದೆಗೆ ಹೇಳಿದ್ದೇ ಶಿವಣ್ಣ! ಹೀಗಿತ್ತು ಡಾ.ರಾಜ್​ ಕುಮಾರ್​ ಪ್ರತಿಕ್ರಿಯೆ
7 ಮಕ್ಕಳ ತಾಯಿಯ ಜೀವ ಕಸಿದ ಆರ್ಕೆಸ್ಟ್ರಾ ಡಾನ್ಸ್​! ಸಾವಿನ ರಹಸ್ಯ ಭೇದಿಸಿದ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 13 =
Remember me
